ETV Bharat / entertainment

'ದರ್ಶನ್ ನಾಚಿಕೆ ಸ್ವಭಾವದ ವ್ಯಕ್ತಿ, ವಿವಾದಗಳು ಹೊಸತೇನಲ್ಲ': ನಟಿ ಭಾವನಾ ರಾಮಣ್ಣ - Bhavana Ramanna on Darshan Case

author img

By ETV Bharat Karnataka Team

Published : Jun 26, 2024, 7:44 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟ ದರ್ಶನ್ ವ್ಯಕ್ತಿತ್ವದ ಬಗ್ಗೆ ನಟಿ ಭಾವನಾ ರಾಮಣ್ಣ ಮಾತನಾಡಿದ್ದಾರೆ. ದರ್ಶನ್ ತಪ್ಪು‌ ಮಾಡಿದ್ದಾರೋ? ಇಲ್ಲವೋ? ಎಂಬುದನ್ನು ತೀರ್ಮಾನಿಸಲು ನ್ಯಾಯಾಂಗ ವ್ಯವಸ್ಥೆ ಇದೆ. ದರ್ಶನ್ ಹೀರೋ ಆಗುವುದಕ್ಕಿಂತ ಮಂಚೆಯೇ ನನಗೆ ಗೊತ್ತು ಎಂದಿದ್ದಾರೆ.

Actress Bhavana Ramanna
ನಟಿ ಭಾವನಾ ರಾಮಣ್ಣ (ETV Bharat)

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಡಿ ನಟ ದರ್ಶನ್ ಜೈಲು ಸೇರಿದ್ದಾರೆ‌. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲ ನಟ ನಟಿಯರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ‌. ಇದೀಗ 'ಚಂದ್ರಮುಖಿ ಪ್ರಾಣಸಖಿ' ಸಿನಿಮಾ ಖ್ಯಾತಿಯ ಭಾವನಾ ರಾಮಣ್ಣ ಅವರು ದರ್ಶನ್ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ.

ಭಗವಾನ್ ಹಾಗೂ ಚಿಂಗಾರಿ ಸಿನಿಮಾದಲ್ಲಿ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಭಾವನಾ ರಾಮಣ್ಣ ಈಟಿವಿ ಭಾರತದ ಜೊತೆ ಮಾತನಾಡಿ, ''ನನಗೆ ದರ್ಶನ್ ಏನು ಅನ್ನೋದು ಗೊತ್ತು. ಆದರೆ ದರ್ಶನ್ ಮಾಡಿರೋ ತಪ್ಪಿನ ಬಗ್ಗೆ ನೋಡಲು ಕಾನೂನು ಇದೆ. ದರ್ಶನ್ ತಪ್ಪು‌ ಮಾಡಿದ್ದಾರೋ? ಇಲ್ಲವೋ? ಎಂದು ತೀರ್ಮಾನಿಸಲು ನ್ಯಾಯಾಂಗ ವ್ಯವಸ್ಥೆ ಇದೆ. ದರ್ಶನ್ ಹೀರೋ ಆಗುವುದಕ್ಕಿಂತ ಮಂಚೆಯೇ ನನಗೆ ಗೊತ್ತು. ನಾನು ನೋಡಿರುವ ಹಾಗೇ ಅವರು ನಾಚಿಕೆ ಸ್ವಭಾವದ ವ್ಯಕ್ತಿ. ಸಂತೋಷದಲ್ಲಿ ಜೊತೆಗಿದ್ದು, ಕಷ್ಟದಲ್ಲಿದ್ದಾಗ ಅವರ ಜೊತೆಗಿಲ್ಲ ಅಂದ್ರೆ ಹೇಗೆ?. ಒಂದು ಕುಟುಂಬ ಎಂದು ಬಂದಾಗ ಎಲ್ಲರ‌‌ ಮನೆ ದೋಸೆ ತೂತು'' ಎಂದು ತಿಳಿಸಿದರು.

ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಸಮಸ್ಯೆಗಳು ಆಗುತ್ತಿವೆ. ಕೆಲ ಪ್ರಕರಣಗಳಷ್ಟೇ ಹೊರ ಬರುತ್ತಿವೆ. ಹೆಣ್ಮು ಮಕ್ಕಳಿಗೆ ಕೆಟ್ಟ ಸಂದೇಶ ರವಾನೆ ಆಗಿ, ಬಹಳ ಸಮಸ್ಯೆ ಆಗುತ್ತದೆ. ಆದರೆ ರೇಣುಕಾಸ್ವಾಮಿ ಘಟನೆ ತುಂಬಾ ನೋವಾಗಿದೆ. ಕೃತ್ಯ ನಡೆದಿದೆ ನಿಜ, ಅದು ಕಾನೂನಿನ ಅಡಿಯಲ್ಲಿ ತನಿಖೆ ಆಗುತ್ತಿದೆ. ಪವಿತ್ರಾ ಗೌಡ ಅವರಿಗೆ ಯಾವ ರೀತಿ ಅಶ್ಲೀಲ ಮೆಸೇಜ್ ಬಂದಿದೆಯೆಂಬುದು ನನಗೆ ಗೊತ್ತು. ಕೆಟ್ಟ ಮೆಸೇಜ್ ಮಾಡಲು ಅವರ್ಯಾರು?. ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಅಂತಾ ಹೇಳ್ತೀರಾ. ನಿಮಗೇಗೆ ಗೊತ್ತು?. ಕೆಲ ಸೋಷಿಯಲ್ ಮೀಡಿಯಾ ಮೆಸೇಜ್ ನೋಡಿದ್ರೆ, ಕೆಲ ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾರೆ. ಕೆಟ್ಟ ಮೆಸೇಜ್ ಬಂದಿದ್ದನ್ನು ಇಗ್ನೋರ್ ಮಾಡಲು ಆಗಲ್ಲ. ರೇಣುಕಾಸ್ವಾಮಿ ಯಾರು ಎಂಬುದು ನಮಗೂ ನಿಮಗೂ ಯಾರಿಗೂ ಗೊತ್ತಿಲ್ಲ. ಈ ಪ್ರಕರಣದಿಂದ ಚಿತ್ರರಂಗ ಮಂಕಾಗಿದೆ ಎಂದು ಭಾವನಾ ತಿಳಿಸಿದರು.

ಇದನ್ನೂ ಓದಿ: ದರ್ಶನ್ ತಂಡದಿಂದ 70 ಲಕ್ಷ ರೂ. ಜಪ್ತಿ: ಐಟಿ, ಇನ್​​ಸ್ಟಾಗ್ರಾಮ್​ಗೆ ಪತ್ರ ಬರೆದ ಪೊಲೀಸರು - 70 lakhs detained from Darshan Team

ಸಿನಿಮಾ ರಂಗದಲ್ಲಿ ಸ್ಟಾರ್ ನಟರು ಜೈಲಿಗೆ ಹೋಗಿರುವ ಉದಾಹರಣೆಗಳು ಇವೆ. ಸಂಜಯ್ ದತ್ ಜೈಲಿಗೆ ಹೋದ್ರು. ಮತ್ತೆ ಜನರ ಮನಸ್ಸು ಗೆದ್ದು ಸಕ್ಸಸ್ ಕಂಡರು. ಅದೇ ರೀತಿ ದರ್ಶನ್ ಜೀವನದಲ್ಲೂ ಆಗುತ್ತೆ. ದರ್ಶನ್​​ಗೆ ವಿವಾದಗಳು ಹೊಸತೇನಲ್ಲ ಎಂದು ನಟಿ ಭಾವನಾ ತಿಳಿಸಿದ್ದಾರೆ.

ಇದನ್ನೂ ಓದಿ: 'ನಿಮಗೂ ಕುಟುಂಬವಿದೆಯೆಂಬುದನ್ನು ನೆನಪಿನಲ್ಲಿಡಿ': ಟ್ರೋಲಿಗರಿಗೆ ಪವನ್​ ಕಲ್ಯಾಣ್​ ಮಾಜಿ ಪತ್ನಿ ರೇಣು ಖಡಕ್​ ಉತ್ತರ - Renu Desai on Trolls

ಕಲಾವಿದರ ಕಷ್ಟ ಯಾರಿಗೂ ಗೊತ್ತಿಲ್ಲ. ನಮ್ಮ ನೋವು ನಮಗೆ ಗೊತ್ತು. ನಮಗೆ ಬ್ಯಾಂಕ್​ನಲ್ಲಿ ಸಾಲ ಕೊಡಲ್ಲ. ನಮ್ಮ ಕಷ್ಟಗಳನ್ನು ಯಾರಿಗೆ ಹೇಳೋದು. ಇನ್ಸ್ಯೂರೆನ್ಸ್ ಕೂಡ ನಮಗಿಲ್ಲ. ಯಾವುದೇ ಸರ್ಕಾರ ನಮ್ಮ ಪರ ಇರಲ್ಲ. ಏನಾದ್ರು ಸಮಸ್ಯೆ ಆದ್ರೆ ಎಲ್ಲರೂ ಬೆಟ್ಟು ಮಾಡಿ ತೋರಿಸುತ್ತಾರೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.