ETV Bharat / entertainment

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ - DEEPAK ARAS PASSED AWAY

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ (42) ಅವರು ಶುಕ್ರವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

deepak passes away
ದೀಪಕ್ ಅರಸ್ ಜೊತೆ ಅಮೂಲ್ಯ (Amulya X Post)
author img

By ETV Bharat Entertainment Team

Published : Oct 18, 2024, 10:10 AM IST

ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್ ಅರಸ್ (42) ಅನಾರೋಗ್ಯದಿಂದ ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ. ಸಹೋದರ ದೀಪಕ್ ಅರಸ್ ನಿಧನದ ಬಗ್ಗೆ ಅಮೂಲ್ಯ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್​ ಮಾಡಿದ್ದು, ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಮಲ್ಲೇಶ್ವರಂನ‌ ನಿವಾಸದಲ್ಲಿ ಮುಂಜಾನೆ 6 ಗಂಟೆ ಸುಮಾರಿಗೆ ಕಿಡ್ನಿ ವೈಫಲ್ಯದಿಂದ ದೀಪಕ್ ನಿಧನರಾಗಿದ್ದಾರೆ. ಬೆಂಗಳೂರಿನ ಸುಮ್ಮನಹಳ್ಳಿಯ ರುದ್ರಭೂಮಿಯಲ್ಲಿ ದೀಪಕ್ ಅರಸ್ ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ (ETV Bharat)

''ನನ್ನ ಪ್ರೀತಿಯ ಸಹೋದರ ದೀಪಣ್ಣ ಇಂದು ಬೆಳಗ್ಗೆ 6 ಗಂಟೆಗೆ ನಮ್ಮನ್ನು ಅಗಲಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ನಿನ್ನನ್ನು ಕಳೆದುಕೊಂಡು ನಾವು ತೀವ್ರ ನೋವಿನಲ್ಲಿದ್ದೇವೆ. ನೀವು ಎಂದೆಂದಿಗೂ ನಮ್ಮೊಂದಿಗೆ ಇರುತ್ತೀರಿ'' ಎಂದು ಅಮೂಲ್ಯ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: 'ಬಘೀರ' ಚಿತ್ರದಲ್ಲಿ 'ರುಧಿರ'ನಾಗಿ ಎಂಟ್ರಿ ಕೊಟ್ಟ ರೋರಿಂಗ್ ಸ್ಟಾರ್ ಶ್ರೀಮುರಳಿ

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ದೀಪಕ್ ಅರಸ್, ಕುಟುಂಬ ಸಮೇತ ವಾಸವಾಗಿದ್ದರು. ದೀಪಕ್ ಅರಸ್ 'ಮನಸಾಲಜಿ', 'ಶುಗರ್ ಫ್ಯಾಕ್ಟರಿ' ಸಿನಿಮಾಗಳನ್ನು ನಿರ್ದೇಶಿಸಿದ್ದರು.

ಪಾರ್ಥೀವ ಶರೀರದ ಅಂತಿಮ ದರ್ಶನ: ಮಲ್ಲೇಶ್ವರಂ ಸಮೀಪದ ನಿವಾಸದಲ್ಲಿ ದೀಪಕ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಟ ಗಣೇಶ್, ನೆನಪಿರಲಿ ಪ್ರೇಮ್ ಹಾಗೂ ಇತರರು ಅಂತಿಮ ದರ್ಶನ ಪಡೆದರು.

ಇದನ್ನೂ ಓದಿ: ಕನ್ನಡ ಬಿಗ್ ಬಾಸ್​ ಶೋಗೆ ಮತ್ತೊಂದು ಸಂಕಷ್ಟ: ಸಾಗರದ ನ್ಯಾಯಾಲಯದಿಂದ ತುರ್ತು ನೋಟಿಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.