ETV Bharat / entertainment

2ನೇ ಮಗು ಹೊಂದುವ ಆಸೆ ವ್ಯಕ್ತಪಡಿಸಿದ ಆಲಿಯಾ ಭಟ್​: ಮಗಳು ರಾಹಾಗೆ 'ರಾಲಿಯಾ' ದಂಪತಿ ತೋರಿಸಲಿರುವ ಮೊದಲ ಸಿನಿಮಾಗಳಿವು - ALIA BHATT

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ತಮ್ಮ ಫ್ಯೂಚರ್​ ಪ್ಲ್ಯಾನ್​ಗಳನ್ನು ಬಹಿರಂಗಪಡಿಸಿದ್ದಾರೆ.

'Ralia' family
'ರಾಲಿಯಾ' ಕಟುಂಬ (Photo source: IANS)
author img

By ETV Bharat Entertainment Team

Published : Oct 12, 2024, 12:52 PM IST

ಬಹುನಿರೀಕ್ಷಿತ 'ಜಿಗ್ರಾ' ಸಿನಿಮಾ ಸಲುವಾಗಿ ಸಖತ್​ ಸದ್ದು ಮಾಡುತ್ತಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ಇತ್ತೀಚೆಗಷ್ಟೇ ತಮ್ಮ ಫ್ಯೂಚರ್​ ಪ್ಲ್ಯಾನ್​ಗಳನ್ನು ಬಹಿರಂಗಪಡಿಸಿದ್ದಾರೆ. ಎರಡು ವರ್ಷದ ಮಗಳು ರಾಹಾಳ ತಾಯಿ, ಹೆಚ್ಚಿನ ಮಕ್ಕಳು ಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳಿಂದ 'ರಾಲಿಯಾ' ಎಂದೇ ಕರೆಸಿಕೊಳ್ಳುವ ಬಾಲಿವುಡ್​ನ ಜನಪ್ರಿಯ ತಾರಾ ದಂಪತಿ ರಣ್​​​​ಬೀರ್ ಕಪೂರ್ ಹಾಗೂ ಆಲಿಯಾ ಭಟ್ 2022ರ ನವೆಂಬರ್​ನಲ್ಲಿ ಪೋಷಕರಾಗಿ ಬಡ್ತಿ ಪಡೆದರು. ಮಗಳು ರಾಹಾಳ ಮುಖವನ್ನು ಕಳೆದ ಡಿಸೆಂಬರ್​ನಲ್ಲಿ ಬಹಿರಂಗಪಡಿಸಿದ್ದರು. ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಆಲಿಯಾ ಅವರಿಗೆ ಫ್ಯೂಚರ್​ ಪ್ಲ್ಯಾನ್ಸ್ ಬಗ್ಗೆ ಪ್ರಶ್ನೆಗಳು ಎದುರಾದವು. ಈ ಸಂದರ್ಭ ತಾರೆ ತಮ್ಮ ಭವಿಷ್ಯದ ಕೆಲ ಯೋಜನೆಗಳನ್ನು ಬಹಿರಂಗಪಡಿಸಿದರು. ಅವು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮುದ್ದು ಮಗಳು ರಾಹಾ ಬಗ್ಗೆ ಮಾತನಾಡಿದ ತಾಯಿ ಆಲಿಯಾ, ಒಂದು ದಿನ ನನ್ನ ಮೊದಲ ಸಿನಿಮಾ 'ಸ್ಟೂಡೆಂಟ್ ಆಫ್ ದಿ ಇಯರ್' ಅನ್ನು ರಾಹಾಗೆ ತೋರಿಸಲು ಬಯಸುತ್ತೇನೆಂದು ಹೇಳಿದರು. ನನ್ನ ಪ್ರಕಾರ, ಬಹುಶಃ ಸ್ಟೂಡೆಂಟ್ ಆಫ್ ದಿ ಇಯರ್ ಮಕ್ಕಳು ನೋಡಬಹುದಾದ ಅದ್ಭುತ ಚಿತ್ರ. ಹಾಗೆಯೇ ಅದು ನನ್ನ ಚೊಚ್ಚಲ ಚಿತ್ರ. ಆ ಚಿತ್ರದಲ್ಲಿ ನನ್ನ ಅಭಿನಯದ ಬಗ್ಗೆ ನನಗೆ ಹೆಚ್ಚು ಹೆಮ್ಮೆ ಇಲ್ಲವಾದರೂ, ಅದರಲ್ಲಿ ಉತ್ತಮ ಹಾಡುಗಳಿವೆ. ರಾಹಾ ಅದನ್ನು ಆನಂದಿಸುತ್ತಾಳೆಂದು ನನಗನಿಸುತ್ತದೆ ಎಂದು ತಿಳಿಸಿದರು. ರಣ್​​ಬೀರ್ ಅವರ 'ಬರ್ಫಿ' ಕೂಡಾ ಒಂದೊಳ್ಳೆ ಆಯ್ಕೆ ಎಂದು ಹೇಳಿದರು.

ಇದನ್ನೂ ಓದಿ: ಐಶ್ವರ್ಯಾ - ಅಭಿಷೇಕ್​ ನಡುವೆ ಬಿರುಕು: ವದಂತಿಗಳಿಗೆ ಫುಲ್​ ಸ್ಟಾಪ್​ ಇಟ್ಟಿತು ಮಾಜಿ ವಿಶ್ವಸುಂದರಿಯ ಸಿಂಪಲ್ ಪೋಸ್ಟ್

ನಂತರ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ ಆಲಿಯಾ, ನಾನು ಅನೇಕ ಸಿನಿಮಾಗಳನ್ನು ಮಾಡುತ್ತೇನೆ. ನಿರ್ಮಾಪಕಿಯಾಗಿಯೂ ಚಲನಚಿತ್ರಗಳನ್ನು ಮಾಡುತ್ತೇನೆ. ಮಕ್ಕಳನ್ನು ಹೊಂದುತ್ತೇನೆ. ಸಾಕಷ್ಟು ಪ್ರಯಾಣಿಸುತ್ತೇನೆ ಮತ್ತು ಆರೋಗ್ಯಕರ, ಸರಳ ಜೀವನ ನಡೆಸುತ್ತೇನೆ ಎಂದರು. ಇದನ್ನು ಕೇಳಿದ ನಂತರ ಹೆಚ್ಚಿನವರ ಗಮನ ಆಲಿಯಾ ಮಗುವಿನ ವಿಷಯದತ್ತ ಹೋಗಿದ್ದು, ಆಲಿಯಾ ಎರಡನೇ ಮಗುವನ್ನು ಹೊಂದುವುದರಲ್ಲಿದ್ದಾರೆ ಎಂಬುದು ತೋರುತ್ತಿದೆ.

ಇದನ್ನೂ ಓದಿ: ಸ್ವರ್ಗ ನರಕ ಒಂದಾಯ್ತು: ಶಿಶಿರ್​ ಬಿಗ್​ ಬಾಸ್​​ನ​ ಹೊಸ ಕ್ಯಾಪ್ಟನ್​: ಕಿಚ್ಚನ ಪಂಚಾಯ್ತಿಯಲ್ಲಿಂದು ಹೈ ಡ್ರಾಮಾ?

ಇನ್ನು ಆಲಿಯಾ ಭಟ್​ ಸಿನಿಮಾ ವಿಚಾರ ಗಮನಿಸುವುದಾದರೆ, ತಾರೆಯ ಬಹುನಿರೀಕ್ಷಿತ ಚಿತ್ರ 'ಜಿಗ್ರಾ' ಅಕ್ಟೋಬರ್ 11 ರಂದು ಬಿಡುಗಡೆ ಆಯಿತು. ಆಲಿಯಾ ಈ ಚಿತ್ರದಲ್ಲಿ ನಟಿಸೋ ಜೊತೆಗೆ ಕರಣ್ ಜೊತೆಗೂಡಿ ನಿರ್ಮಾಣವನ್ನೂ ಮಾಡಿದ್ದಾರೆ. ವಾಸನ್ ಬಾಲಾ ನಿರ್ದೇಶನದ ಈ ಚಿತ್ರದಲ್ಲಿ ಆಲಿಯಾ ಅವರು ವೇದಾಂಗ್ ರೈನಾ ಅವರ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಆಲಿಯಾ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ನಟಿ ಜಿಗ್ರಾ ಪ್ರಚಾರದಲ್ಲೂ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸಮಂತಾ ರುತ್ ಪ್ರಭು ಮತ್ತು ರಾಣಾ ದಗ್ಗುಬಾಟಿ ಅವರೊಂದಿಗೆ ಚಿತ್ರದ ಪ್ರಮೋಶನ್​ ನಡೆಸಿ ಗಮನ ಸೆಳೆದಿದ್ದರು. ಇದೀಗ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.