ETV Bharat / entertainment

ರೇಣುಕಾಸ್ವಾಮಿ ಮನೆಗೆ ವಿನೋದ್​​ ರಾಜ್​​ ಭೇಟಿ, ಸಾಂತ್ವನ: 1 ಲಕ್ಷ ರೂ. ಚೆಕ್ ನೀಡಿದ ನಟ - Vinod Raj visits Renukaswamy House

ನಟ ವಿನೋದ್​​ ರಾಜ್ ಅವರು ದರ್ಶನ್ ಭೇಟಿ ಬಳಿಕ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಜೊತೆಗೆ, 1ಲಕ್ಷ ರೂ.ನ ಚೆಕ್ ನೀಡಿ ನೆರವಾಗಿದ್ದಾರೆ.

Vinod Raj visits Renukaswamy Home
ರೇಣುಕಾಸ್ವಾಮಿ ಕುಟುಂಬಸ್ಥರಿಗೆ 1ಲಕ್ಷ ರೂ.ನ ಚೆಕ್ ನೀಡಿದ ವಿನೋದ್​​ ರಾಜ್​​ (ETV Bharat)
author img

By ETV Bharat Karnataka Team

Published : Jul 26, 2024, 6:22 PM IST

ರೇಣುಕಾಸ್ವಾಮಿ ಮನೆಗೆ ವಿನೋದ್​​ ರಾಜ್​​ ಭೇಟಿ, ಪ್ರತಿಕ್ರಿಯೆ (ETV Bharat)

ಚಿತ್ರದುರ್ಗ: ಕೊಲೆಯಾದ ರೇಣುಕಾಸ್ವಾಮಿ ಮನೆಗೆ ನಟ ವಿನೋದ್ ರಾಜ್ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ವಿಆರ್​​ಎಸ್ ಬಡಾವಣೆಯಲ್ಲಿರುವ ಮನೆಗೆ ಭೇಟಿ ಕೊಟ್ಟ ನಟ, ರೇಣುಕಾಸ್ವಾಮಿ ಪತ್ನಿ ಸಹನಾ ಅವರಿಗೆ 1 ಲಕ್ಷ ರೂಪಾಯಿಯ ಚೆಕ್ ನೀಡಿ ಮಾನವೀಯತೆ ಮೆರೆದಿದ್ದಾರೆ.

ಬಳಿಕ ಮಾತನಾಡಿದ ವಿನೋದ್ ರಾಜ್, ಮನೆ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡಿದೆ. ಕುಟುಂಬ ಪರಿತಪಿಸುತ್ತಿರುವ ಸ್ಥಿತಿ ಕಂಡು ಕರಳು ಕಿತ್ತುಬರುತ್ತಿದೆ. ನಾವು ಮನುಷ್ಯರಾಗಿದ್ದೀವಾ ಅಂತಾ ಮುಟ್ಟಿ ನೋಡಿಕೊಳ್ಳುವ ಕಾಲ ಬಂದಿದೆ. ಪ್ರತೀ ಜೀವಿಗೂ ಜೀವ ಇದೆ, ಜೀವಿಸುವ ಹಕ್ಕೂ ಇದೆ. ಮಕ್ಕಳು ಬಾಳಬೇಕು, ಬೆಳೆದು ಬೆಳಗಬೇಕೆಂಬುದು ಪೋಷಕರ ಆಶಯ. ಕೆಟ್ಟ ವಿಚಾರಗಳು ಜಾಸ್ತಿಯಾದಾಗ ಇಂತಹ ಕೃತ್ಯ ನಡೆಯುತ್ತವೆ. ಇಂಥ ಘಟನೆಗಳು ಹೆಚ್ಚಾಗದಂತೆ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.

ಕಲಾವಿದರನ್ನು ನೋಡಿ ಜನರು ಅನುಕರಣೆ ಮಾಡುತ್ತಾರೆ. ಇದು ಆಘಾತಕಾರಿ ವಿಷಯ. ಹೆಸರು, ಕೀರ್ತಿಯಲ್ಲಿರುವ ನಾವು ಎಚ್ಚರವಾಗಿರಬೇಕು. ಉನ್ನತ ಸ್ಥಾನದಲ್ಲಿರುವವರು ವಿವೇಕ ಮರೆಯಬಾರದು. ಅಚಾತುರ್ಯ‌ಗಳು ನಡೆಯುತ್ತವೆ. ಆದರೆ ಮುಂದಿನ ತಲೆಮಾರುಗಳು ಹೀಗೆ ಆಗದಂತೆ ಎಚ್ಚರ ವಹಿಸಬೇಕು. ಮಾಧ್ಯಮ ತಿದ್ದಿಬುದ್ಧಿ ಹೇಳಿದಂತೆ ಅನುಸರಿಸಿಕೊಂಡು ಸಾಗಬೇಕು ಎಂದು ಹೇಳಿದರು.

ದರ್ಶನ್ ಭೇಟಿ ವೇಳೆ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಯಾವುದೇ ಮಾತನಾಡಲಿಲ್ಲ. ಸಿಕ್ಕ ಸಮಯಾವಕಾಶದಲ್ಲಿ ಹೆಚ್ಚು ಮಾತನಾಡಲು ಆಗಲಿಲ್ಲ. ನನ್ನನ್ನು ನೋಡಿದಾಕ್ಷಣ‌ ದರ್ಶನ್ ಭಾವುಕರಾದರು. ನನ್ನನ್ನು ತಬ್ಬಿಕೊಂಡರು ಎಂದು ತಿಳಿಸಿದರು.

ಇದನ್ನೂ ಓದಿ: ಮನೆಯೂಟಕ್ಕೆ ಅನುಮತಿ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಜಾ - Darshan Petition Dismissed

ಇಂತಹ ಘಟನೆ ನಡೆಯಬಾರದು. ಕ್ರೋಧ, ದ್ವೇಷ, ಅಸೂಯೆ ಎಲ್ಲವನ್ನೂ ಬಿಡಬೇಕು, ಕಡಿವಾಣ ಹಾಕಬೇಕು. ನಮ್ಮ ತಾಯಿಯ ಸಿನಿಮಾ ನೋಡಿದ್ದೇವೆಂದು ರೇಣುಕಾಸ್ವಾಮಿಯವರ ತಂದೆ ಹೇಳಿದ್ದಾರೆಂದು ತಿಳಿಸುತ್ತಾ ವಿನೋದ್​​ ಭಾವುಕರಾದರು.

ರೇಣುಕಾಸ್ವಾಮಿ ಪೋಷಕರ ಕಣ್ಣೀರು: ವಿನೋದ್ ಅವರ ಮುಂದೆ ರೇಣುಕಾಸ್ವಾಮಿ ತಂದೆ ತಾಯಿ ಕಣ್ಣೀರಿಟ್ಟರು. ನಂತರ ಮಾತನಾಡಿದ ತಂದೆ ಕಾಶಿನಾಥ್ ಶಿವನಗೌಡ, ನಾವು ಸಂಧಾನಕ್ಕೆ ಹೊರಟಿದ್ದೇನೆ ಅಂತಾ ಪ್ರಚಾರ ಸರಿಯಲ್ಲ. ಮಗನ ಕಳೆದುಕೊಂಡು ಕರಳು ಕಿತ್ತು ಬರ್ತಿದೆ. ಪ್ರಕರಣದಿಂದ ನಾವು ನೊಂದಿದ್ದೇವೆ. ನಮ್ಮ ತಾಯಿಗೆ 98 ವರ್ಷ. ನಮ್ಮ ಇಡೀ ಕುಟುಂಬವೇ ಸಂಕಷ್ಟದಲ್ಲಿದೆ. ನಮ್ಮ ಮಗ ನಿತ್ಯ ಅಜ್ಜಿಗೆ ಹಾರೈಕೆ ಮಾಡ್ತಿದ್ದನು. ಮಗನ ಕೊಂದ ಆರೋಪಿಗಳು ಯಾರೆಂಬುದು ನಮಗೆ ಗೊತ್ತಿಲ್ಲ. ಪ್ರಕರಣದ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು. ವಿನೋದ್ ರಾಜ್ ತಾಯಿ ಬಗ್ಗೆ ಅಪಾರ ಗೌರವವಿದೆ. ಅವರ ದೈವಭಕ್ತಿ ಬಗ್ಗೆ ಕೇಳಿದ್ದೇವೆ. ವಿನೋದ್​​ ಬಂದಿದ್ದು ಸಮಾಧಾನ ತಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮಿಥ್ಯ ಯಾಕಾಗಬಾರದು ಸತ್ಯ! ಕಾಮಿಡಿ ಶೋನಲ್ಲಿ ಪುನೀತ್​​ ಸ್ಮರಣೆ: ಒದ್ದೆಯಾಯ್ತು ಕನ್ನಡಿಗರ ಕಣ್ಣಾಲಿಗಳು - Puneeth Rajkumar

ಪ್ರಕರಣ: ಜೂನ್​ 8ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಬಳಿಕ ಬೆಂಗಳೂರಿನ ಸುಮ್ಮನಹಳ್ಳಿಯ ಅಪಾರ್ಟ್​ಮೆಂಟ್​ ಮುಂಭಾಗದ ಮೋರಿ ಪಕ್ಕದಲ್ಲಿ ಶವ ಪತ್ತೆಯಾಗಿತ್ತು. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಆಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿದ್ದು, ಬಳಿಕ ದರ್ಶನ್​, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳನ್ನು ಜೂನ್​ 11ರಂದು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆ ಎದುರಿಸಿದ ನಂತರ ಆರೋಪಿಗಳು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ದರ್ಶನ್​ ವಿಚಾರಣಾ ಕೈದಿಯಾಗಿದ್ದಾರೆ. ಮನೆ ಊಟ, ಹಾಸಿಗೆ, ಪುಸ್ತಕಗಳನ್ನು ಒದಗಿಸಲು ಅನುಮತಿ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಬೆಂಗಳೂರು ನಗರದ 24ನೇ ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.