ETV Bharat / entertainment

'ಸಿನಿಮಾ ತಡವಾಗಿದ್ದಕ್ಕೆ ಕ್ಷಮಿಸಿ, ಲೇಟಾದ್ರೂ ಲೇಟೆಸ್ಟಾಗಿ ಬರ್ತೀವಿ': ಸುದೀಪ್ - SUDEEP MAX MOVIE

ಎರಡೂವರೆ ವರ್ಷಗಳ ಗ್ಯಾಪ್​ ಬಳಿಕ ನಟ ಸುದೀಪ್​ ಅಭಿನಯದ ಸಿನಿಮಾ 'ಮ್ಯಾಕ್ಸ್' ಬಿಡುಗಡೆಯಾಗುತ್ತಿದೆ.

Sudeep
ಅಭಿನಯ ಚಕ್ರವರ್ತಿ ಸುದೀಪ್​​ (Photo: ETV Bharat)
author img

By ETV Bharat Entertainment Team

Published : Dec 16, 2024, 5:22 PM IST

Updated : Dec 16, 2024, 5:29 PM IST

ಕನ್ನಡ ಚಿತ್ರರಂಗದ ಕೀರ್ತಿ, ಅಭಿನಯ ಚಕ್ರವರ್ತಿ ಸುದೀಪ್​​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಮ್ಯಾಕ್ಸ್'​ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಅಮೋಘ ಅಭಿನಯ, ವ್ಯಕ್ತಿತ್ವ, ನಡೆನುಡಿಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಕಿಚ್ಚನ ಮುಂದಿನ ಸಿನಿಮಾ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಸಜ್ಜಾಗಿದ್ದಾರೆ. ಪ್ರಮೋಶನ್​ ಭಾಗವಾಗಿ ಇತ್ತೀಚೆಗೆ 'Lions roar' ಶೀರ್ಷಿಕೆಯ ಹಾಡು ಅನಾವರಣಗೊಂಡಿದೆ.

ಕಲೈಪುಲಿ ಎಸ್.ತನು ಅವರ ವಿ.ಕ್ರಿಯೇಷನ್ಸ್ ಹಾಗೂ ಸುದೀಪ್​ ಅವರ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ 'ಮ್ಯಾಕ್ಸ್' ಸಿನಿಮಾಗೆ ವಿಜಯ್ ಕಾರ್ತಿಕೇಯ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಸುದೀಪ್ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಬಹುನಿರೀಕ್ಷಿತ ಚಿತ್ರಕ್ಕಾಗಿ ಅನೂಪ್ ಭಂಡಾರಿ ಬರೆದಿರುವ, ವಿಜಯ್ ಪ್ರಕಾಶ್ ಹಾಡಿರುವ ಹಾಗೂ ಅಜನೀಶ್ ಲೋಕನಾಥ್ ಸಂಗೀತ ನೀಡಿರುವ 'Lions roar' ಶೀರ್ಷಿಕೆಯ ಲಿರಿಕಲ್ ವಿಡಿಯೋ ಸಾಂಗ್​​ ಅನ್ನು ಇತ್ತೀಚೆಗೆ ಚಿತ್ರತಂಡ ಅದ್ಧೂರಿಯಾಗಿ ಬಿಡುಗಡೆ ಮಾಡಿದೆ.

ಬೆಂಗಳೂರಿನ ಒರಾಯನ್ ಮಾಲ್​​ನ ಆವರಣದಲ್ಲಿರುವ ಕೆರೆಯಂಗಳದಲ್ಲಿ‌ ನಡೆದ ವರ್ಣರಂಜಿತ ಸಮಾರಂಭಕ್ಕೆ ಸಹಸ್ರಾರು ಅಭಿಮಾನಿಗಳು ಸಾಕ್ಷಿಯಾದರು. ಮ್ಯಾಕ್ಸ್ ಸಿನಿಮಾದ ಸಾಂಗ್​​ ಹಾಗೂ ಟ್ರೇಲರ್​ಗೆ ಅಭಿಮಾನಿಗಳು ಫಿದಾ ಆದ್ರು. ಕಿಚ್ಚ ಸುದೀಪ್, ನಿರ್ಮಾಪಕ ಕಲೈಪುಲಿ ಎಸ್ ತನು, ನಿರ್ದೇಶಕ ವಿಜಯ್ ಕಾರ್ತಿಕೇಯ, ನಟಿಯರಾದ ಸಂಯುಕ್ತ ಹೊರನಾಡು, ಸುಕೃತ ವಾಗ್ಲೆ ಸೇರಿದಂತೆ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಾಂಗ್​ ರಿಲೀಸ್​​​ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

Sudeep in max promotion
'ಮ್ಯಾಕ್ಸ್'​ ಪ್ರಚಾರದಲ್ಲಿ ಅಭಿನಯ ಚಕ್ರವರ್ತಿ (Photo: ETV Bharat)

''ನಿಮ್ಮನ್ನೆಲ್ಲಾ ನೋಡಿ ಬಹಳ ಖುಷಿ ಆಗುತ್ತಿದೆ. ಎರಡೂವರೆ ವರ್ಷಗಳ ನಂತರ ಡಿಸೆಂಬರ್ 25ರಂದು ನನ್ನ ಅಭಿನಯದ ಮ್ಯಾಕ್ಸ್ ಚಿತ್ರ ಬಿಡುಗಡೆಯಾಗುತ್ತಿದೆ. ತಡವಾಗಿರುವುದಕ್ಕೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಆದರೆ, ನಾವು ಲೇಟಾಗಿ ಬಂದರೂ ಲೇಟೆಸ್ಟಾಗಿ ಬರುತ್ತೇವೆ‌. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ'' ಎಂದು ಸುದೀಪ್ ಮನವಿ ಮಾಡಿದರು.

max film team
'ಮ್ಯಾಕ್ಸ್'​ ಸಾಂಗ್​ ರಿಲೀಸ್​​​ ಈವೆಂಟ್​ (Photo: ETV Bharat)

ಇದನ್ನೂ ಓದಿ: ಹುಸಿಯಾಯ್ತು ಅಭಿಮಾನಿಗಳ ನಿರೀಕ್ಷೆ! 2024ರಲ್ಲಿ ಸಿನಿಮಾ ಮಾಡದ ಸ್ಯಾಂಡಲ್​​ವುಡ್​ ಸೂಪರ್​​ಸ್ಟಾರ್​ಗಳಿವರು

"ಇಂದು ಸುದೀಪ್ ಅವರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಕಂಡು ಆನಂದವಾಗುತ್ತಿದೆ" ಎಂದು ಮಾತು ಆರಂಭಿಸಿದ ನಿರ್ಮಾಪಕ ಕಲೈಪುಲಿ‌ ಎಸ್. ತನು, "ಡಿಸೆಂಬರ್ 25 ನಮ್ಮ ಚಿತ್ರ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗಪ್ಪಳಿಸಲಿದೆ. ನಮ್ಮೆಲ್ಲರ ಬೆಂಬಲವಿರಲಿ" ಎಂದರು.

Sudeep
ಅಭಿನಯ ಚಕ್ರವರ್ತಿ ಸುದೀಪ್​​ (Photo: ETV Bharat)

ಇದನ್ನೂ ಓದಿ: 'ಆರ್.ಚಂದ್ರು ನನ್ನ ಸ್ನೇಹಿತ, ಸದಾ ಅವರೊಂದಿಗಿರುತ್ತೇನೆ': ಫಾದರ್ ಸಿನಿಮಾಗೆ ಸುದೀಪ್​ ಸಾಥ್, ಕಿಚ್ಚ ಹೇಳಿದ್ದಿಷ್ಟು

ಸುದೀಪ್ ಅವರೊಂದಿಗೆ ವರಲಕ್ಷ್ಮೀ ಶರತ್‌ಕುಮಾರ್, ತೆಲುಗು ನಟ ಸುನೀಲ್, ಶರತ್ ಲೋಹಿತಾಶ್ವ, ಪ್ರಭಾಕರ್, ಪ್ರಮೋದ್ ಶೆಟ್ಟಿ, ನರೇನ್ ಸೇರಿ ಹಲವರು ನಟಿಸಿದ್ದಾರೆ. 50 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ಸುದೀಪ್ ನಟನೆಯ ಜೊತೆ ನಿರ್ಮಾಣವನ್ನೂ ಮಾಡಿರುವ ಹಿನ್ನೆಲೆಯಲ್ಲಿ ಮ್ಯಾಕ್ಸ್​​ ಮೇಲಿನ ನಿರೀಕ್ಷೆ ದೊಡ್ಡದಿದೆ. ಸಿನಿಮಾ ಕನ್ನಡ ಅಲ್ಲದೇ ಐದು ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

Last Updated : Dec 16, 2024, 5:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.