ETV Bharat / entertainment

ಪ್ರಶಾಂತ್ ನೀಲ್ ಬರೆದ 'ಬಘೀರ' ಕಥೆ ಕಣ್ಮುಚ್ಚಿ ಒಪ್ಪಿಕೊಂಡೆ: ನಟ ಶ್ರೀಮುರಳಿ - BAGHEERA FILM TRAILER

ಪ್ರಶಾಂತ್ ನೀಲ್ ಚಿತ್ರಕಥೆಯ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಬಘೀರ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

ಬಘೀರ ಚಿತ್ರದ ಟ್ರೇಲರ್ ರಿಲೀಸ್
ಬಘೀರ ಚಿತ್ರದ ಟ್ರೇ ಲರ್ ರಿಲೀಸ್ (ETV Bharat)
author img

By ETV Bharat Karnataka Team

Published : Oct 21, 2024, 9:25 PM IST

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಈ ವರ್ಷದ ಬಹುನಿರೀಕ್ಷಿತ ಸಿನಿಮಾ. ಸಣ್ಣ ಟೀಸರ್​ನಿಂದಲೇ ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾದ ಟ್ರೇಲರ್ ಇಂದು ಅನಾವರಣಗೊಂಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ, ನಟಿ ರುಕ್ಮಿಣಿ ವಸಂತ್, ಸುಧಾರಾಣಿ, ಪ್ರಮೋದ್ ಶೆಟ್ಟಿ, ನಿರ್ದೇಶಕ ಡಾ.ಸೂರಿ ಸೇರಿದಂತೆ ಚಿತ್ರತಂಡ ಪಾಲ್ಗೊಂಡಿತ್ತು.

ಹಾಲಿವುಡ್ ಸಿನಿಮಾದ ಬ್ಯಾಟ್‌ಮ್ಯಾನ್ ಕಾನ್ಸೆಪ್ಟ್​ನಲ್ಲಿರುವ ಟ್ರೇಲರ್ ಸದ್ಯ ಯೂಟ್ಯೂಬ್​​ನಲ್ಲಿ ಒಂದು ಮಿಲಿಯನ್ ವೀಕ್ಷಣೆ ಪಡೆದು ಟ್ರೆಂಡಿಂಗ್​​ನಲ್ಲಿ ಮೊದಲ ಸ್ಥಾನದಲ್ಲಿದೆ. ಟ್ರೇಲರ್​​ನಲ್ಲಿ ಶ್ರೀಮುರಳಿ ಎರಡು ಶೇಡ್​​ನಲ್ಲಿ ಕಾಣಿಸಿಕೊಂಡಿರೋದು ಗೊತ್ತಾಗುತ್ತದೆ. ಪಂಚಿಂಗ್ ಡೈಲಾಗ್​​, ವಾಹ್! ಅನಿಸುವ ಆ್ಯಕ್ಷನ್ ಸನ್ನಿವೇಶಗಳು, ಅದ್ಧೂರಿ ಮೇಕಿಂಗ್ ಬಘೀರ ಚಿತ್ರದ ಮೇಲಿನ ಕುತೂಹಲ ಇಮ್ಮಡಿಗೊಳಿಸಿದೆ. ಚಿತ್ರದಲ್ಲಿ ಪ್ರಕಾಶ್ ರೈ, ಸುಧಾರಾಣಿ, ರುಕ್ಮಿಣಿ ವಸಂತ್, ರಂಗಾಯಣ ರಘು, ಅಚ್ಯುತ್ ಕುಮಾರ್ ಹಾಗೂ ಗರುಡ ರಾಮ್ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್ ಇದೆ.

ಶ್ರೀಮುರಳಿಗೆ ಜೋಡಿಯಾಗಿ ಚಂದನವನದ ಬಹುಬೇಡಿಕೆಯ ನಟಿ ರುಕ್ಮಿಣಿ ವಸಂತ್‌ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಚಿತ್ರದ ಗರುಡನಾಗಿ ಖ್ಯಾತಿ ಹೊಂದಿದ್ದ ರಾಮ್ ಬಘೀರ ಚಿತ್ರದಲ್ಲಿ ವಿಕೃತ ಮುಖದ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

ಟ್ರೇಲರ್ ಅನಾವರಣ ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ ಮಾತನಾಡಿ, "ನಾನು ಕಂಡ ಬೆಸ್ಟ್ ಡೈರೆಕ್ಟರ್ ಅಂದ್ರೆ ಅದು ಡಾ.ಸೂರಿ. 2014ರಲ್ಲಿ ನಾನು ಮತ್ತೆ ಸೂರಿ ಸಿನಿಮಾ ಮಾಡಬೇಕಿತ್ತು. ಅದರೆ ಆಗಿರಲಿಲ್ಲ. ಈಗ ಸಾಧ್ಯವಾಗಿದೆ. ಇನ್ನು ಒಳ್ಳೆಯ ಔಟ್​ಫುಟ್​ಗಾಗಿ ಕಲಾವಿದರು, ಕ್ಯಾಮರಾಮ್ಯಾನ್ ಮತ್ತು ತಂತ್ರಜ್ಞರಿಂದ ಸಖತ್ ಕೆಲಸ ತೆಗಿಸಿದ್ದಾರೆ" ಎಂದರು.

"ಇನ್ನೊಂದು ಮುಖ್ಯವಾದ ವಿಷಯ ಅಂದರೆ ಕಥೆ. ನನ್ನ ನೆಚ್ಚಿನ ನಿರ್ದೇಶಕ ಪ್ರಶಾಂತ್ ನೀಲ್ ಈ ಸಿನಿಮಾದ ಕಥೆ ಬರೆದಿದ್ದಾರೆ. ಅವರು ಯಾವಾಗ್ಲೂ ನನ್ನ ಹೃದಯಲ್ಲಿರುತ್ತಾರೆ. ನಾನು ಕಣ್ಣು ಮುಚ್ಚಿ ಬಘೀರ ಚಿತ್ರವನ್ನು ಒಪ್ಪಿಕೊಂಡೆ. ಇನ್ನು ಸಿನಿಮಾ ಆಗೋದಿಕ್ಕೆ ಮುಖ್ಯ ರೂವಾರಿ ಸಿನಿಮಾ ಬಗ್ಗೆ ಫ್ಯಾಷನ್ ಇರುವ ನಿರ್ಮಾಪಕ ವಿಜಯ ಕಿರಂಗದೂರ್ ಸಾರ್. ನಾನು ಸಾಕಷ್ಟು ನಿರ್ಮಾಪಕರ ಜೊತೆ ಕೆಲಸ ಮಾಡಿದ್ದೇನಿ. ಆದ್ರೆ ಈ ರೀತಿಯ ಪ್ರೊಡಕ್ಷನ್ ಹೌಸ್ ನಾನೆಲ್ಲೂ ನೋಡಿಲ್ಲ" ಎಂದು ಹೊಗಳಿದರು.

"ಅಜನೀಶ್ ಲೋಕನಾಥ್ ಅವರ ಮ್ಯೂಜಿಕ್​​ಗೆ ನಾನು ಫಿದಾ ಆಗಿದ್ದೀನಿ. ಹಾಗೆಯೇ ಸುಧಾರಾಣಿ ಮೇಡಂ ಜೊತೆ ವರ್ಕ್ ಮಾಡಿದ್ದು ಖುಷಿ ನೀಡಿತು. ಅವರನ್ನು ಶಿವಣ್ಣ ಮಾಮಗೆ ಹೀರೋಯಿನ್ ಆಗಿ ನೋಡಿದ್ದೀನಿ. ಅದಕ್ಕಾಗಿ ನಾನು ಸುಧಾರಾಣಿ ಮೇಡಂಗೆ ಫ್ಯಾನ್. ನನ್ನ ಸಿನಿಮಾ ಹೀರೋಯಿನ್ ರುಕ್ಮಿಣಿ ಅವರಿಗೆ ಒಳ್ಳೆಯ ಭವಿಷ್ಯವಿದೆ. ಹಾಗೆಯೇ ನನ್ನ ಕೈಯಲ್ಲಿ ಇಷ್ಟು ಚೆನ್ನಾಗಿ ಸ್ಟಂಟ್ ಮಾಡಿಸಿರುವ ಸ್ಟಂಟ್ ಮಾಸ್ಟರ್​ಗಳಿಗೆ ಧನ್ಯವಾದ" ಎಂದು ಚಿತ್ರತಂಡ ಬಗ್ಗೆ ಮಾತನಾಡಿದರು.

ಬಘೀರ ಟ್ರೇಲರ್​ ನಾನೂ ಕೂಡ ಇವತ್ತೇ ನೋಡಿದೆ. ಸಖತ್ ಖುಷಿಯಾತ್ತು. ಜಾಸ್ತಿ ಮಾತನಾಡಲ್ಲ, ನಮ್ಮ ಕೆಲಸ ಮಾತನಾಡಬೇಕು. ಅಕ್ಟೋಬರ್ 31ರಂದು ಸಿನಿಮಾ ರಿಲೀಸ್ ಆಗುತ್ತದೆ" ಎಂದು ಹೇಳಿದರು.

ಎ.ಜೆ.ಶೆಟ್ಟಿ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ. ಪ್ರಣವ್‌ ಶ್ರೀ ಪ್ರಸಾದ್‌ ಸಂಕಲನ ನಿರ್ವಹಿಸಿದ್ರೆ, ರವಿ ಸಂತೆಹಕ್ಲು ಕಲಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚೇತನ್‌ ಡಿಸೋಜ್‌ ಸಾಹಸ ನಿರ್ದೇಶನ ಮಾಡಿದ್ದಾರೆ.

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಡಿ ನಿರ್ಮಾಪಕ ವಿಜಯ್‌ ಕಿರಗಂದೂರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕೆಜಿಎಫ್‌, ಕೆಜಿಎಫ್‌ 2, ಕಾಂತಾರ, ಸಲಾರ್​ನಂತಹ ಬ್ಲಾಕ್​​ಬಸ್ಟರ್‌ ಹಿಟ್‌ ನೀಡಿದ್ದ ಸಂಸ್ಥೆಯ ಬತ್ತಳಿಕೆಯಿಂದ ಬಘೀರ ಪ್ರೇಕ್ಷಕರಿಗೆ ದರ್ಶನ ಕೊಡಲು 9 ದಿನ ಬಾಕಿ ಇದೆ.

ಇದನ್ನೂ ಓದಿ: ಶೋಭಿತಾ-ನಾಗ ಚೈತನ್ಯ ಪ್ರೀ ವೆಡ್ಡಿಂಗ್‌ ಜೋರು: ಮದುವೆ ದಿನದ ಗುಟ್ಟು ಬಿಡದ ಕುಟುಂಬ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.