ETV Bharat / entertainment

ಅನಾರೋಗ್ಯ: ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಶಿವರಾಜ್​ಕುಮಾರ್​​ - SHIVARAJKUMAR HEALTH UPDATES

ಅನಾರೋಗ್ಯ ಹಿನ್ನೆಲೆ, ಚಿಕಿತ್ಸೆಗಾಗಿ ಶೀಘ್ರದಲ್ಲೇ ಜನಪ್ರಿಯ ನಟ ಶಿವರಾಜ್​ಕುಮಾರ್​​ ಅಮೆರಿಕಕ್ಕೆ ತೆರಳಿದ್ದಾರೆ.

Actor Shivarajkumar
ಕುಟುಂಬದೊಂದಿಗೆ ನಟ ಶಿವರಾಜ್​ಕುಮಾರ್​​ (ETV Bharat)
author img

By ETV Bharat Entertainment Team

Published : Nov 7, 2024, 1:34 PM IST

ಸಿನಿಮಾ‌ ನಿರ್ಮಾಪಕರ ಫೇವರೆಟ್ ಹೀರೋ, ಅಭಿಮಾನಿಗಳ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಇಂದಿಗೂ ಎಂದೆಂದಿಗೂ ಎವರ್​​ಗ್ರೀನ್​ ಸ್ಟಾರ್​​. ವಯಸ್ಸು ಅರವತ್ತೆರಡಾದ್ರೂ ಯುವ ನಟರೂ ನಾಚುವಂತ ಫಿಟ್ನೆಸ್, ಎನರ್ಜಿ ಹೊಂದಿರುವ ಸೂಪರ್​ ಸ್ಟಾರ್​. ಹ್ಯಾಟ್ರಿಕ್ ಹೀರೋ ಸದ್ಯ ತಮ್ಮ ಮುಂದಿನ ಬಹುನಿರೀಕ್ಷಿತ ಭೈರತಿ ರಣಗಲ್ ಚಿತ್ರದ ಪ್ರಮೋಷನ್​​ನಲ್ಲಿ ಬ್ಯುಸಿಯಾಗಿದ್ದಾರೆ‌. ಈ ಮಧ್ಯೆ ನಟನ ಅನಾರೋಗ್ಯದ ಸುದ್ದಿಯೊಂದು ರಿವೀಲ್ ಆಗಿದೆ.

ಹೌದು, ನೋಡಲು ಸಖತ್​ ಯಂಗ್ ಆ್ಯಂಡ್​​ ಎನರ್ಜಿಟಿಕ್ ಆಗಿರುವ ಶಿವರಾಜ್​​ಕುಮಾರ್ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ, ಹ್ಯಾಟ್ರಿಕ್ ಹೀರೋ ಇನ್ನು ಕೆಲವು ದಿನಗಳ ಕಾಲ ಅಭಿಮಾನಿಗಳು ಹಾಗೂ ಸಿನಿಮಾ ನಿರ್ದೇಶಕರು, ನಿರ್ಮಾಪಕರ ಭೇಟಿಗೆ ಸಿಗೋದಿಲ್ಲ. ಭೈರತಿ ರಣಗಲ್ ಸುಮಾರು ಒಂದು ತಿಂಗಳ ಕಾಲ ಸೂಕ್ತ ಚಿಕಿತ್ಸೆಗೆ ಒಳಗಾಗಲಿದ್ದಾರೆ.

Actor Shivarajkumar
ಕುಟುಂಬದೊಂದಿಗೆ ನಟ ಶಿವರಾಜ್​ಕುಮಾರ್​​ (ETV Bharat)

ಸದ್ಯ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಸೆಂಚುರಿ ಸ್ಟಾರ್​ನ ಗೆಳೆಯರೊಬ್ಬರು ಹೇಳುವ ಪ್ರಕಾರ, ಬಹುನಿರೀಕ್ಷಿತ ಭೈರತಿ ರಣಗಲ್ ಬಿಡುಗಡೆಗೆ ಸಜ್ಜಾಗಿದೆ. ಅರ್ಜುನ್ ಜನ್ಯ ನಿರ್ದೇಶನದ 45, ಹೇಮಂತ್ ರಾವ್ ನಿರ್ದೇಶನದ ಭೈರವನ‌ ಕೊನೆ ಪಾಠ, ತಮಿಳು ನಿರ್ದೇಶಕನ‌ ಜೊತೆ ಹೆಸರಿಡದ ಚಿತ್ರ.. ಹೀಗೆ 8 ರಿಂದ 10 ಸಿನಿಮಾಗಳು ಬುಕ್ಕಿಂಗ್ ಆಗಿವೆ. ಇಷ್ಟು ಸಿನಿಮಾಗಳಲ್ಲಿ ಸದ್ಯ ಭೈರತಿ ರಣಗಲ್ ಬಿಡುಗಡೆ ಆಗಲು ಸಜ್ಜಾಗಿದ್ರೆ, '45' ಸಿನಿಮಾದ ಬಹುತೇಕ ಕೆಲಸಗಳನ್ನು ಮುಗಿಸಿದ್ದಾರೆ. ಆರೋಗ್ಯ ಸಮಸ್ಯೆ ಹಿನ್ನೆಲೆ ಅಮೆರಿಕಕ್ಕೆ ತೆರಳುತ್ತಿದ್ದಾರೆ‌. ವರ್ಷದಿಂದ ಮನೆಯಲ್ಲೇ ಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು.

ಇನ್ನು ಅಭಿಮಾನಿಗಳು ಭಯ ಪಡುವ ಅಗತ್ಯ ಇಲ್ಲ. ಶಿವಣ್ಣ ಕೂಡಾ ನನಗೆ ಆರೋಗ್ಯ ಸಮಸ್ಯೆ ಇದೆ, ಚಿಕಿತ್ಸೆ ನಡೆಯುತ್ತಿದೆ ಅಂತಾ ತಿಳಿಸಿದ್ದಾರೆ. ಭೈರತಿ ರಣಗಲ್ ಚಿತ್ರ ಬಿಡುಗಡೆ ಆದ ಬಳಿಕ, ಬಹುಶಃ ಇದೇ ನವೆಂಬರ್ ಕೊನೆಗೆ ಅಥವಾ ಡಿಸೆಂಬರ್ ತಿಂಗಳಲ್ಲಿ ‌ಶಿವರಾಜ್​ಕುಮಾರ್​, ಪತ್ನಿ ಗೀತಾ ಸೇರಿದಂತೆ ಕೆಲ ಸ್ನೇಹಿತರು, ಕಟುಂಬಸ್ಥರು ಅಮೆರಿಕಕ್ಕೆ ತೆರಳಲಿದ್ದಾರೆ. ಒಂದು ತಿಂಗಳ ಕಾಲ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಆಪ್ತರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಬಘೀರ ಕಲೆಕ್ಷನ್​​​: 7 ದಿನಗಳಲ್ಲಿ ಶ್ರೀಮುರಳಿ, ರುಕ್ಮಿಣಿ ವಸಂತ್​​​ ಸಿನಿಮಾ ಗಳಿಸಿದ್ದಿಷ್ಟು

ಈ ಮಧ್ಯೆ ಶಿವರಾಜ್​ಕುಮಾರ್ ತಮ್ಮ ಭೈರತಿ ರಣಗಲ್ ಚಿತ್ರದ ಪ್ರಚಾರದ ಹಿನ್ನೆಲೆ ಅಣ್ಣಾವ್ರ ಹುಟ್ಟೂರಾದ ಗಾಜನೂರಿಗೆ ಹೋಗಿ ಅಲ್ಲಿ ತಂದೆ ರಾಜ್​ಕುಮಾರ್ ಅವರ ಸಹೋದರಿ ನಾಗಮ್ಮ ಹಾಗೂ ಬಂಧು ಮಿತ್ರರ ಜೊತೆ ಕಾಲ ಕಳೆದು ಬಂದಿದ್ದಾರೆ. ಒಪ್ಪಿಕೊಂಡಿರುವ ಖಾಸಗಿ ಕಾರ್ಯಕ್ರಮಗಳನ್ನು ಮುಗಿಸಿ ಬಹುತೇಕ ಡಿಸೆಂಬರ್ ತಿಂಗಳಲ್ಲಿ ನಟ ಅಮೆರಿಕಕ್ಕೆ ಫ್ಲೈಟ್ ಹತ್ತಲಿದ್ದಾರೆ.

ಇದನ್ನೂ ಓದಿ: ದೊಡ್ಮನೆ ಶಕ್ತಿ ಪಾರ್ವತಮ್ಮ ಹಾದಿಯಲ್ಲಿ ಸೊಸೆ ಗೀತಾ ಶಿವರಾಜ್​ಕುಮಾರ್: ಸಿನಿಮಾ ಫೈನಲ್ ಮಾಡೋದು ಇವರೇ

ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಸಿನಿಮಾವನ್ನು ಗೀತಾ ಶಿವರಾಜ್ ಕುಮಾರ್ 'ಗೀತಾ ಪಿಕ್ಚರ್ಸ್ ಲಾಂಛನ'ದಲ್ಲಿ ನಿರ್ಮಾಣ ಮಾಡಿದ್ದಾರೆ. ಬಿಗ್​ ಬಜೆಟ್​ನ ಚಿತ್ರ ಇದೇ ನವೆಂಬರ್ 15ರಂದು ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ. ಸಿನಿಮಾಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.