ETV Bharat / entertainment

ಪತ್ನಿ ಗೀತಾ ಸಮೇತ ತಿರುಪತಿಗೆ ಮುಡಿ ಕೊಟ್ಟ ನಟ ಶಿವರಾಜ್ ಕುಮಾರ್ - SHIVARAJ KUMAR VISITS TIRUPATI

ಅನಾರೋಗ್ಯ ಹಿನ್ನೆಲೆ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿರುವ ಶಿವಣ್ಣ, ಕುಟುಂಬ ಹಾಗೂ ಆಪ್ತರ ಜೊತೆಗೆ ತಿರುಪತಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ.

Shiva Rajkumar with friends
ಆಪ್ತರ ಜೊತೆಗೆ ಶಿವ ರಾಜ್​ಕುಮಾರ್​ (ETV Bharat)
author img

By ETV Bharat Karnataka Team

Published : Dec 7, 2024, 12:57 PM IST

ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್ ಪತ್ನಿ ಗೀತಾ ಜೊತೆಗೆ ತಿರುಪತಿಗೆ ಭೇಟಿ ನೀಡಿದ್ದು, ತಿಮ್ಮಪ್ಪನಿಗೆ ​ಮುಡಿ ಕೊಟ್ಟು ಬಂದಿದ್ದಾರೆ. ಚಿಕಿತ್ಸೆಗಾಗಿ ವಿದೇಶಕ್ಕೆ ಹಾರುವ ಮುನ್ನ ಕುಟುಂಬ ಹಾಗೂ ಆಪ್ತರ ಜೊತೆಗೆ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆಯನ್ನೂ ಸಲ್ಲಿಸಿದ್ದಾರೆ. ಸದ್ಯ ಶಿವಣ್ಣನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಯಂಗ್​ ಆ್ಯಂಡ್ ಎನರ್ಜಟಿಕ್​ ಆಗಿರುವ ಶಿವಣ್ಣ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅದರ ಚಿಕಿತ್ಸೆಗಾಗಿ ಸದ್ಯದಲ್ಲೇ ವಿದೇಶಕ್ಕೆ ತೆರಳಲಿದ್ದಾರೆ. ಈ ಕಾರಣಕ್ಕೆ ಹ್ಯಾಟ್ರಿಕ್ ಹೀರೋ ತಮ್ಮ ನೆಚ್ಚಿನ ದೇವಸ್ಥಾನಗಳಿಗೆ ಭೇಟಿ ಕೊಡುತ್ತಿದ್ದಾರೆ. ಇದೀಗ ಕುಟುಂಬ ಹಾಗೂ ಆಪ್ತರ ಜೊತೆಗೆ ತಿರುಪತಿಗೆ ಆಗಮಿಸಿ ಶಿವರಾಜ್​ಕುಮಾರ್​ ದೇವರ ಆಶೀರ್ವಾದ ಪಡೆದರು. ಅನಾರೋಗ್ಯ ಹಿನ್ನೆಲೆ ಕರುನಾಡ ಚಕ್ರವರ್ತಿ ತಿರುಪತಿ ದೇವಸ್ಥಾನಕ್ಕೆ ಭೇಟಿಕೊಟ್ಟು ಮುಡಿಕೊಟ್ಟು ಹರಕೆ ತೀರಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ಅವರ ಎರಡನೇ ಮಗಳು ನಿವೇದಿತಾ ಹಾಗು ನಿರ್ಮಾಪಕ ಕೆ. ಪಿ. ಶ್ರೀಕಾಂತ್ ಜೊತೆಗಿದ್ದರು.

Shiva Rajkumar with friends
ಆಪ್ತರ ಜೊತೆಗೆ ಶಿವ ರಾಜ್​ಕುಮಾರ್​ (ETV Bharat)

ಇತ್ತೀಚೆಗೆ ಶಿವಣ್ಣ ಅಭಿನಯದ ಭೈರತಿ ರಣಗಲ್​ ಇತ್ತೀಚೆಗೆ ರಿಲೀಸ್ ಆಗಿ, ಸೂಪರ್​ ಹಿಟ್​ ಆಗಿತ್ತು. ಇನ್ನೂ ಕೆಲವು ಕಮಿಟ್​ ಆದ ಸಿನಿಮಾಗಳ ಶೂಟಿಂಗ್ ಅನ್ನು ಈಗಾಗಲೇ​ ಮುಗಿಸಿರುವ ಸೆಂಚುರಿ ಸ್ಟಾರ್​, ಸ್ವಲ್ಪ ದಿನಗಳ ಕಾಲ ಶೂಟಿಂಗ್​ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಚಿಕಿತ್ಸೆ ನಂತರ ಸಂಪೂರ್ಣ ಚೇತರಿಕೆ ನಂತರ ಮತ್ತೆ ಸಿನಿಮಾಗೆ ಮರಳಲಿದ್ದಾರೆ. ಸದ್ಯ ಮುಡಿ ಕೊಟ್ಟ ನಂತರ ಅವರ ಲುಕ್​ ನೋಡಿ ಅಭಿಮಾನಿಗಳು ಆಶ್ಚರ್ಯಪಟ್ಟಿದ್ದಾರೆ.

Shiva Rajkumar with wife Geeta
ಪತ್ನಿ ಜೊತೆ ಶಿವಣ್ಣ (ETV Bharat)

ಸದ್ಯ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳನ್ನು ನಟ ಶಿವರಾಜ್​ಕುಮಾರ್ ಒಪ್ಪಿಕೊಂಡಿದ್ದಾರೆ. ಇವರ ಗೆಳೆಯರಿಬ್ಬರು ಹೇಳುವ ಹಾಗೇ.. ಶಿವಣ್ಣನ ಕೈಯಲ್ಲಿ ಅರ್ಜುನ್ ಜನ್ಯ ನಿರ್ದೇಶನದ 45, ಹೇಮಂತ್ ರಾವ್ ನಿರ್ದೇಶನದ ಭೈರವನ‌ ಕೊನೆ ಪಾಠ, ತಮಿಳು ನಿರ್ದೇಶಕನ‌ ಜೊತೆ ಹೆಸರಿಡದ ಚಿತ್ರ ಹೀಗೆ 8 ರಿಂದ 10 ಸಿನಿಮಾಗಳು ಇವೆ. ಇಷ್ಟು ಸಿನಿಮಾಗಳಲ್ಲಿ ಸದ್ಯ ಶಿವರಾಜ್​ಕುಮಾರ್ ಭೈರತಿ ರಣಗಲ್ ಹಾಗು 45 ಸಿನಿಮಾದ ಬಹುತೇಕ ಕೆಲಸಗಳನ್ನು ಮುಗಿಸಿ ಆರೋಗ್ಯ ಸಮಸ್ಯೆ ಹಿನ್ನೆಲೆ ಅಮೆರಿಕಕ್ಕೆ ತೆರಳುತ್ತಿದ್ದಾರೆ‌. ಇನ್ನು ಶಿವಣ್ಣನ ಆರೋಗ್ಯ ಸಮಸ್ಯೆಗೆ ಕಳೆದ ವರ್ಷದಿಂದ ಮನೆಯಲ್ಲಿ ಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಟುಂಬ ಸಮೇತ ಅಮೆರಿಕಕ್ಕೆ ಹೋಗಿ, ಅಲ್ಲಿ ಒಂದು ತಿಂಗಳ ಕಾಲ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ತಮ್ಮ ಪ್ರೀತಿಯ ಶಿವಣ್ಣ ಚಿಕಿತ್ಸೆ ಪಡೆದು ಆದಷ್ಟು ಬೇಗ ಗುಣಮುಖರಾಗಿ ಬೆಂಗಳೂರಿಗೆ ವಾಪಸ್​ ಬರಲಿ ಎನ್ನುವುದು ಅವರ ಅಭಿಮಾನಿಗಳ ಪ್ರಾರ್ಥನೆಯಾಗಿದೆ.

ಇದನ್ನೂ ಓದಿ: ಪಾರ್ವತಮ್ಮ ಜನ್ಮದಿನ: ಗೀತಾ ನಿರ್ಮಾಣದ ಸಿನಿಮಾ ಅನೌನ್ಸ್; ಶಿವಣ್ಣನ ಸಹೋದರಿಯ ಪುತ್ರ ಹೀರೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.