ETV Bharat / entertainment

'ಫಸ್ಟ್ ನೈಟ್ ವಿತ್ ದೆವ್ವ' ಟೀಸರ್​ ರಿಲೀಸ್​: ಚಿತ್ರದ ಬಗ್ಗೆ ಪ್ರಥಮ್ ಹೇಳಿದ್ದೇನು? - ಪ್ರಥಮ್

ಬಿಗ್​ ಬಾಸ್​ ಖ್ಯಾತಿಯ ಪ್ರಥಮ್​ ನಟನೆಯ 'ಫಸ್ಟ್​ ನೈಟ್​ ವಿತ್​ ದೆವ್ವ' ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

First Night With Devva
'ಫಸ್ಟ್ ನೈಟ್ ವಿತ್ ದೆವ್ವ' ಟೀಸರ್​ ರಿಲೀಸ್​: ಚಿತ್ರದ ಬಗ್ಗೆ ಪ್ರಥಮ್ ಹೇಳಿದ್ದೇನು?
author img

By ETV Bharat Karnataka Team

Published : Feb 26, 2024, 11:34 AM IST

ಬಿಗ್ ಬಾಸ್ ಮೂಲಕ ಕನ್ನಡಿಗರ ಮನಗೆದ್ದು, ಬಳಿಕ ನಾಯಕ ನಟ ಆದ ಪ್ರಥಮ್ ಒಂದರ‌ ಹಿಂದೊಂದು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ 'ಫಸ್ಟ್ ನೈಟ್ ವಿತ್ ದೆವ್ವ' ಎಂಬ ವಿಭಿನ್ನ ಶೀರ್ಷಿಕೆ ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಪಿ.ವಿ.ಆರ್. ಸ್ವಾಮಿ ಗೂಗಾರೆದೊಡ್ಡಿ ನಿರ್ದೇಶನದ ಫಸ್ಟ್ ನೈಟ್ ವಿತ್ ದೆವ್ವ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇತ್ತೀಚೆಗೆ ನಡೆದ ಸಮಾರಂಭಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ತುಕಾಲಿ ಸಂತೋಷ್ ಹಾಗೂ ನಮ್ರತಾ ಮುಖ್ಯ ಅತಿಥಿಗಳಾಗಿ ಆಗಮಿಸಿ, ಟೀಸರ್ ಅನಾವರಣ ಮಾಡಿದರು.

First Night With Devva
ಫಸ್ಟ್ ನೈಟ್ ವಿತ್ ದೆವ್ವ

ನಾನು ನಿರ್ದೇಶಕರ ನಟ ಎಂದು ಮಾತಿಗಿಳಿದ ಪ್ರಥಮ್, ''ಪಿ.ವಿ.ಆರ್. ಸ್ವಾಮಿ‌ ಅವರು ಬಹುಬೇಗನೇ ಚಿತ್ರವನ್ನು ಮುಗಿಸಿದ್ದಾರೆ. ಕಳೆದ ನವೆಂಬರ್​​ನಲ್ಲಿ ಸಿನಿಮಾ ಆರಂಭವಾಗಿತ್ತು. ಚಿತ್ರ ಶುರುವಾದ ತಕ್ಷಣ ಮೊದಲು ಬರುವ ಸನ್ನಿವೇಶವೇ ವಿವಾಹ. ಮದುವೆಯನ್ನು ಬಹಳ ಆಸೆಯಿಂದ ಆದ ಹುಡುಗನಿಗೆ ತನ್ನ ಮೊದಲ ರಾತ್ರಿ ನಡೆಯುತ್ತಿರುವುದು ದೆವ್ವದ ಜೊತೆಗೆ ಎಂದು ತಿಳಿದಾಗ ಏನೆಲ್ಲಾ ಆಗುತ್ತದೆ? ಎಂಬುದೇ ಚಿತ್ರದ ಕಥಾ ಸಾರಾಂಶ'' ಎಂದರು.

First Night With Devva
ಫಸ್ಟ್ ನೈಟ್ ವಿತ್ ದೆವ್ವ

''ಚಿತ್ರದಲ್ಲಿ ನಗುವಿಗೆ ಬರವಿಲ್ಲ. ಹಾರರ್, ಕಾಮಿಡಿ, ಆ್ಯಕ್ಷನ್​ ಹಾಗೂ ಸೆಂಟಿಮೆಂಟ್​​​ಗಳ ಸಮ್ಮಿಲ್ಲನವೇ ನಮ್ಮ ಚಿತ್ರ. ನಾನೇ ಕಥೆ ಹಾಗೂ ಚಿತ್ರಕಥೆ ಬರೆದಿದ್ದೇನೆ. ನಿಖಿತಾ, ಜೀವಿತಾ ಹಾಗೂ ಸುಶ್ಮಿತಾ ಮೂವರು ನಾಯಕಿಯರು. ನಿಖಿತಾ ನನ್ನ ಹೆಂಡತಿ ಪಾತ್ರ‌‌ ಮಾಡಿದ್ದಾರೆ. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ರಮೇಶ್ ಭಟ್, ಹರೀಶ್ ರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಮಾರಂಭಕ್ಕೆ ಬಂದಿರುವ ತುಕಾಲಿ ಸಂತೋಷ್ ಹಾಗೂ ನಮ್ರತಾ ಅವರಿಗೆ ಧನ್ಯವಾದ'' ಎಂದರು.

  • " class="align-text-top noRightClick twitterSection" data="">

''ನವೆಂಬರ್​​ನಲ್ಲಿ ಆರಂಭವಾದ ಈ ಚಿತ್ರ, ನನ್ನ ತಂಡದ ಸಹಕಾರದಿಂದ ನಿಗದಿಯಂತೆ ಪೂರ್ಣವಾಗಿದೆ. ಸಿನಿಮಾವು ಮುಂದಿನ ತಿಂಗಳು ತೆರೆಗೆ ತರುವ ಸಿದ್ಧತೆ ನಡೆಯತ್ತಿದೆ'' ಎಂದು ನಿರ್ದೇಶಕ ಹಾಗೂ ಛಾಯಾಗ್ರಾಹಕ ಪಿ‌.ವಿ.ಆರ್. ಸ್ವಾಮಿ ತಿಳಿಸಿದರು.

ಈ ಚಿತ್ರದಲ್ಲಿ ಮೂವರು ನಾಯಕಿಯರಾದ ನಿಖಿತಾ, ಸುಶ್ಮಿತಾ ಹಾಗೂ ಜೀವಿತಾ ಅವರ ಜೊತೆ ಹರೀಶ್ ರಾಜ್, ಪುಷ್ಪಸ್ವಾಮಿ ಸೇರಿದಂತೆ ಅನೇಕ ಕಲಾವಿದರಿದ್ದಾರೆ. ಅದ್ವಿಕ್ ವರ್ಮ ಸಂಗೀತ ನೀಡಿದ್ದು, ನಾಗೇಶ್ ಸಂಭಾಷಣೆ ಬರೆದು, ಸಂಕಲನ ಕಾರ್ಯವನ್ನೂ ಮಾಡಿದ್ದಾರೆ. ನಿರ್ಮಾಪಕ ನವೀನ್ ಬೀರಪ್ಪ ಈ ಚಿತ್ರ ನಿರ್ಮಾಣ ಮಾಡಿದ್ದು, ಅರವಿಂದ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಟೀಸರ್​​ನಿಂದ ಗಮನ‌ ಸೆಳೆಯುತ್ತಿರುವ ಫಸ್ಟ್ ನೈಟ್ ವಿತ್ ದೆವ್ವ ಚಿತ್ರವು ಸದ್ಯದಲ್ಲೇ ತೆರೆಗೆ ಕಾಣಲಿದೆ.

ಇದನ್ನೂ ಓದಿ: 100 ಕೋಟಿ ಆಫರ್​ ಕೂಡ ಒಪ್ಪಿರಲಿಲ್ವಂತೆ ನಟಿ; ಆ ಸಿನಿಮಾಗೆ ಒಲ್ಲೆ ಎಂದಿದ್ದೇಕೆ ನಯನತಾರಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.