ETV Bharat / entertainment

ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಬ್ರೈನ್​ ಸ್ಟ್ರೋಕ್​​: ಹೇಗಿದೆ ಆರೋಗ್ಯ? ಹೆಲ್ತ್ ಅಪ್‌ಡೇಟ್ಸ್‌ - ಮಿಥುನ್ ಚಕ್ರವರ್ತಿ

ಶನಿವಾರ ಬೆಳಿಗ್ಗೆ ಅಸ್ವಸ್ಥಗೊಂಡು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ಹೆಲ್ತ್ ಅಪ್​ಡೇಟ್ಸ್ ಇಲ್ಲಿದೆ.

Mithun Chakraborty health updates
ಮಿಥುನ್ ಚಕ್ರವರ್ತಿ ಹೆಲ್ತ್ ಅಪ್​ಡೇಟ್ಸ್
author img

By ETV Bharat Karnataka Team

Published : Feb 11, 2024, 7:10 AM IST

ಕೋಲ್ಕತ್ತಾ: ಭಾರತೀಯ ಚಿತ್ರರಂಗದ ಹಿರಿಯ ನಟ ಮಿಥುನ್ ಚಕ್ರವರ್ತಿ(73) ಅವರು ಶನಿವಾರ ಬೆಳಿಗ್ಗೆ ಅಸ್ವಸ್ಥಗೊಂಡಿದ್ದು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಇಲ್ಲಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆ ನೀಡಿರುವ ಮಾಹಿತಿ ಪ್ರಕಾರ, ಅವರು ಮೆದುಳಿನ ಸ್ಟ್ರೋಕ್​​ಗೆ (Ischemic Cerebrovascular Accident (Stroke) of the brain) ಒಳಗಾಗಿದ್ದಾರೆ. ಪ್ರಸ್ತುತ ಸಂಪೂರ್ಣ ಪ್ರಜ್ಞಾವಸ್ಥೆಯಲ್ಲಿದ್ದಾರೆ.

ಆಸ್ಪತ್ರೆಯಿಂದ ಮಾಹಿತಿ: ಮಿಥುನ್ ಚಕ್ರವರ್ತಿ ಅವರು ಬಲಗೈ ಮತ್ತು ಎಡಗಾಲಿನಲ್ಲಿ ದೌರ್ಬಲ್ಯ (Right upper & lower limbs) ಹೊಂದಿರುವುದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೆದುಳಿನ ಎಂಆರ್‌ಐ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಸ್ಟ್ರೋಕ್​ಗೆ ಒಳಗಾಗಿರುವುದನ್ನು ಈ ಪರೀಕ್ಷೆಗಳು ದೃಢೀಕರಿಸಿವೆ. ಪ್ರಜ್ಞಾವಸ್ಥೆಯಲ್ಲಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸೂಕ್ತ ಆಹಾರ ಕ್ರಮ ಪಾಲಿಸುತ್ತಿದ್ದಾರೆ. ನರ ವೈದ್ಯರು, ಹೃದ್ರೋಗ ತಜ್ಞರು ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗಳು ಸೇರಿದಂತೆ ಪರಿಣತ ತಜ್ಞರು ನಿಗಾ ಇಟ್ಟಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.

Mithun Chakraborty health updates
ಅಪೋಲೋ ಆಸ್ಪತ್ರೆ ಮಾಹಿತಿ

ನಟನ ಅನಾರೋಗ್ಯಗೊಂಡಿರುವ ಮಾಹಿತಿ ಹೊರಬಿದ್ದ ಕೂಡಲೇ ಚಿತ್ರರಂಗ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿ, ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದರು. ಪುತ್ರ ಮಿಮೋಹ್ ಚಕ್ರವರ್ತಿ ಮಾತನಾಡಿ, ತಂದೆ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದರು. ಇದು ರುಟೀನ್​ ಚೆಕ್​ಅಪ್​ ಎಂದು ಹೇಳಿದ್ದರು. ಮಿಥುನ್‌ ಚಕ್ರವರ್ತಿ ಬಿಜೆಪಿ ನಾಯಕರೂ ಹೌದು.

ಇದನ್ನೂ ಓದಿ: ಮಿಥುನ್ ಚಕ್ರವರ್ತಿಗೆ ಎದೆನೋವು: ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಾದ ನಟ

ಮಿಥುನ್ ಅವರಿಗೆ ಎಂಆರ್‌ಐ ಮತ್ತು ಇತರೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಆಸ್ಪತ್ರೆ ವಕ್ತಾರರು ಈಗಾಗಲೇ ತಿಳಿಸಿದ್ದು, ಹೆಚ್ಚಿನ ವಿವರಗಳನ್ನು ಶೀಘ್ರ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಭೇಟಿಯಾದ ಚಿರಂಜೀವಿ

1976ರಲ್ಲಿ ಬಣ್ಣದ ಜಗತ್ತಿಗೆ ಕಾಲಿಟ್ಟ ಮಿಥುನ್ ಅವರು ಡಿಸ್ಕೋ ಡ್ಯಾನ್ಸರ್, ಜಂಗ್, ಪ್ರೇಮ್ ಪ್ರತಿಜ್ಞಾ, ಪ್ಯಾರ್ ಜುಕ್ತಾ ನಹಿ, ಮತ್ತು ಮರ್ದ್ ಸೇರಿದಂತೆ ಹಲವು ಹಿಟ್​ ಸಿನಿಮಾಗಳ ಮೂಲಕ ಜನಪ್ರಿಯರಾಗಿದ್ದಾರೆ. ಜೀವಮಾನದ ಸಾಧನೆ ಗುರುತಿಸಿ ಇತ್ತೀಚೆಗೆ ಸರ್ಕಾರ 'ಪದ್ಮಭೂಷಣ' ಪ್ರಶಸ್ತಿ ಘೋಷಿಸಿತ್ತು. ಈ ಗೌರವಕ್ಕೆ ನಟ ವಿಡಿಯೋ ಸಂದೇಶದ ಮೂಲಕ ಕೃತಜ್ಞತೆ ಸಲ್ಲಿಸಿದ್ದರು. ಪ್ರಶಸ್ತಿಯನ್ನು ವಿಶ್ವಾದ್ಯಂತ ಇರುವ ತಮ್ಮ ಅಭಿಮಾನಿಗಳಿಗೆ ಅರ್ಪಿಸಿದ್ದರು. ಇತ್ತೀಚೆಗೆ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ಬಾಂಗ್ಲಾ ಡ್ಯಾನ್ಸ್‌'ನಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.