ETV Bharat / entertainment

ನಂಜುಂಡೇಶ್ವರ ದೇವಾಲಯದಲ್ಲಿ ಮಕ್ಕಳ ಪಂಚಮುಡಿ ಮಾಡಿಸಿ ಹರಕೆ ತೀರಿಸಿದ ಧ್ರುವ ಸರ್ಜಾ - ACTOR DHRUVA SARJA - ACTOR DHRUVA SARJA

ಆ್ಯಕ್ಷನ್​​​​ ಪ್ರಿನ್ಸ್​​​​​ ಧ್ರುವ ಸರ್ಜಾ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಪತ್ನಿ, ಮಕ್ಕಳ ಸಮೇತ ಬಂದು ವಿಶೇಷ ಪೂಜೆ ಸಲ್ಲಿಸಿದರು.

ನಂಜುಂಡೇಶ್ವರ ದೇವಾಲಯದಲ್ಲಿ ಧ್ರುವ ಸರ್ಜಾ
ನಂಜುಂಡೇಶ್ವರ ದೇವಾಲಯದಲ್ಲಿ ಧ್ರುವ ಸರ್ಜಾ
author img

By ETV Bharat Karnataka Team

Published : Apr 7, 2024, 7:09 AM IST

ಸ್ಯಾಂಡಲ್​ವುಡ್​​​​​ ಆ್ಯಕ್ಷನ್​​​​​​ ಪ್ರಿನ್ಸ್​​​​​​​ ಧ್ರುವ ಕೆಲ ತಿಂಗಳ ಹಿಂದೆ ತಮ್ಮ ಇಬ್ಬರು ಮುದ್ದಾದ ಮಕ್ಕಳ ನಾಮಕರಣ ಶಾಸ್ತ್ರ ಮಾಡಿಸಿದ್ದರು. ಹನುಮನ ಭಕ್ತನಾಗಿರುವ ಧ್ರುವ ಸರ್ಜಾ 'ರಾಮಲಲ್ಲಾ' ಪ್ರಾಣ ಪ್ರತಿಷ್ಠಾಪನೆಯ ಶುಭ ದಿನದಂದು ಮಗಳಿಗೆ ರುದ್ರಾಕ್ಷಿ ಡಿ ಸರ್ಜಾ, ಮಗನಿಗೆ ಹಯಗ್ರೀವ ಡಿ ಸರ್ಜಾ ಎಂದು ಹೆಸರು ಇಟ್ಟಿರುವುದು ಗೊತ್ತೇ ಇದೆ.

ಇದೀಗ ಧ್ರುವ ಸರ್ಜಾ ತಮ್ಮ ಇಬ್ಬರು ಮಕ್ಕಳು ಹಾಗೂ ಪತ್ನಿ ಪ್ರೇರಣಾ ಜೊತೆ ಮನೆ ದೇವರು ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಬಂದು ಹರಕೆ ತೀರಿಸಿದರು. ಹಯಗ್ರೀವಾ ಹಾಗು ರುದ್ರಾಕ್ಷಿಯ ಪಂಚಮುಡಿ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು. ಧ್ರುವ ಸರ್ಜಾ ದೇವಸ್ಥಾನಕ್ಕೆ ಬಂದ ಹಿನ್ನೆಲೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.

ಧ್ರುವ ಪ್ರೇರಣಾ ದಂಪತಿ 2022ರ ಅಕ್ಟೋಬರ್ 2 ರಂದು ಪುತ್ರಿ ರುದ್ರಾಕ್ಷಿಯನ್ನು ಪಡೆದಿದ್ದರು. ಬಳಿಕ 2023ರ ಸೆಪ್ಟೆಂಬರ್​​ ತಿಂಗಳಲ್ಲಿ ಮಗ ಜನಿಸಿದ್ದ. ಸಹೋದರ ಚಿರು ಸರ್ಜಾ ಸಮಾಧಿ ಇರುವ ನೆಲಗುಳಿಯ ಧ್ರುವ ಸರ್ಜಾ ಫಾರ್ಮ್ ಹೌಸ್‌ನಲ್ಲಿ ಮಕ್ಕಳ ನಾಮಕರಣ ಕಾರ್ಯಕ್ರಮ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬಸ್ಥರು ಭಾಗಿಯಾಗಿದ್ದರು. ನಾಮಕರಣ ಶಾಸ್ತ್ರಕ್ಕೆ ಕೆಜಿಎಫ್ ಅಧೀರ ಸಂಜಯ್ ದತ್ ಹಾಗೂ ನಟ, ನಿರ್ದೇಶಕ ಪ್ರೇಮ್ ಮಾಗೂ ಪತ್ನಿ ರಕ್ಷಿತಾ ಅಲ್ಲದೇ ಪ್ರಮುಖರು ಆಗಮಿಸಿ ಧ್ರುವ ಸರ್ಜಾ ಅವರ ಮಕ್ಕಳಿಗೆ ಆಶೀರ್ವದಿಸಿದ್ದರು.

ಇದನ್ನೂ ಓದಿ: 'ಜೀವನ ಅಂದುಕೊಂಡಷ್ಟು ಸುಲಭವಲ್ಲ, ಹೇಗೋ ನಡೆಸಿಕೊಂಡು ಹೋಗುತ್ತಿದ್ದೇವೆ': ಅಶ್ವಿನಿ ಪುನೀತ್ ರಾಜಕುಮಾರ್​ - Ashwini Puneeth Rajkumar

ETV Bharat Logo

Copyright © 2025 Ushodaya Enterprises Pvt. Ltd., All Rights Reserved.