ETV Bharat / entertainment

'ನಾನು ಬದುಕಿದ್ದೇನೆ': ರಸ್ತೆ ಅಪಘಾತದಲ್ಲಿ ಸಾವು ವದಂತಿಗೆ ನಟಿ ಆಂಚಲ್ ತಿವಾರಿ ಸ್ಪಷ್ಟನೆ - ನಟಿ ಆಂಚಲ್ ತಿವಾರಿ

ಪಂಚಾಯತ್ 2 ಜನಪ್ರಿಯತೆಯ ನಟಿ ಆಂಚಲ್ ತಿವಾರಿ ಅವರು ಬಿಹಾರದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ನಟಿ, 'ನಾನು ಬದುಕಿದ್ದೇನೆ' ಎಂದು ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕ ತಿಳಿಸಿದ್ದಾರೆ.

Actress Aanchal Tiwari
ನಟಿ ಆಂಚಲ್ ತಿವಾರಿ
author img

By ETV Bharat Karnataka Team

Published : Feb 28, 2024, 8:25 PM IST

ಜನಪ್ರಿಯ ವೆಬ್ ಸೀರಿಸ್ 'ಪಂಚಾಯತ್ 2'ರ ನಟಿ ಆಂಚಲ್ ತಿವಾರಿ (Aanchal Tiwari) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ವದಂತಿ ಹರಡಿತ್ತು. ಇದೀಗ ಸ್ವತಃ ನಟಿಯೇ 'ನಾನು ಬದುಕಿದ್ದೇನೆ' ಎಂದು ತಿಳಿಸೋ ಮೂಲಕ ಊಹಾಪೋಹಗಳಿಗೆ ಫುಲ್​​ ಸ್ಟಾಪ್​ ಇಟ್ಟಿದ್ದಾರೆ. ಫೆಬ್ರುವರಿ 25ರಂದು ಬಿಹಾರದ ಮೊಹಾನಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ದೇವ್​​ಕಾಲಿ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ, ಪ್ರಾಣ ಕಳೆದುಕೊಂಡ ಒಟ್ಟು ಒಂಭತ್ತು ಜನರ ಪೈಕಿ ನಟಿ ಆಂಚಲ್ ತಿವಾರಿ ಕೂಡ ಓರ್ವರು ಎಂದು ಫೆಬ್ರವರಿ 27ರಂದು ವರದಿಗಳಾದವು. ಅದೃಷ್ಟವಶಾತ್​ ನಟಿ ಆಂಚಲ್ ತಿವಾರಿ ಸುರಕ್ಷಿತವಾಗಿದ್ದಾರೆ.

ರಸ್ತೆ ಅಪಘಾತದಲ್ಲಿ ನಟಿ ಆಂಚಲ್ ತಿವಾರಿ ಕೊನೆಯುಸಿರೆಳೆದಿದ್ದಾರೆ ಎಂಬ ಸಾವಿನ ವರದಿಗಳಿಗೆ ಸ್ವತಃ ನಟಿಯೇ ಪ್ರತಿಕ್ರಿಯಿಸಿದ್ದಾರೆ. ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿ, ವದಂತಿಗಳಿಗೆ ಫುಲ್​ಸ್ಟಾಪ್​ ಇಟ್ಟಿದ್ದಾರೆ ಜೊತೆಗೆ ತಮ್ಮ ಯೋಗಕ್ಷೇಮವನ್ನು ಖಚಿತಪಡಿಸಿದ್ದಾರೆ. ತಾವು ಸಾವನ್ನಪ್ಪಿರೋದಾಗಿ ಸುಳ್ಳು ಮಾಹಿತಿ ಹರಡಿದ್ದಕ್ಕಾಗಿ ಹತಾಶೆಯನ್ನೂ ಹೊರಹಾಕಿದ್ದಾರೆ. "ನಾನು ಜೀವಂತವಾಗಿದ್ದೇನೆ" ಎಂದು ತಮ್ಮ ಅಫೀಶಿಯಲ್​ ಇನ್​ಸ್ಟಾಗ್ರಾಮ್​​ ಸ್ಟೋರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ಇನ್​ಸ್ಟಾಗ್ರಾಮ್​ನಲ್ಲಿ ಸ್ವತಃ ಮಾತನಾಡಿರೋ ವಿಡಿಯೋವನ್ನೂ ಸಹ ಶೇರ್ ಮಾಡಿದ್ದಾರೆ. ತಪ್ಪು ಸುದ್ದಿಗಳನ್ನು ಹರಡುವ ಮೊದಲು ಮಾಧ್ಯಮಗಳು ಸತ್ಯಾನುಸತ್ಯತೆಯನ್ನು ಪರಿಶೀಲಿಸುವಂತೆಯೂ ಒತ್ತಾಯಿಸಿದ್ದಾರೆ. ವರದಿ ಮಾಡುವಲ್ಲಿ, ಸಮಗ್ರತೆ ಮತ್ತು ಜವಾಬ್ದಾರಿಯ ಪ್ರಾಮುಖ್ಯತೆಯನ್ನು ಸಹ ಒತ್ತಿಹೇಳಿದ್ದಾರೆ.

ನಾನು ಜೀವಂತವಾಗಿದ್ದೇನೆಂದು ತಿಳಿಸುವ ವಿಡಿಯೋ ಶೇರ್ ಮಾಡಿರುವ ಅವರು, "ಇದು ಎಲ್ಲಾ ಮಾಧ್ಯಮಗಳಿಗೆ, ನಾನು ಜೀವಂತವಾಗಿದ್ದೇನೆ. ದೇವರ ಆಶೀರ್ವಾದ ನನ್ನ ಮೇಲಿದೆ. ಕಾರು ಅಪಘಾತದಲ್ಲಿ ಅಂಚಲ್​ ತಿವಾರಿ ಸಾವನ್ನಪ್ಪಿದ್ದಾರೆ ಎಂಬ ಸುಳ್ಳು ಮಾಹಿತಿಯನ್ನು ನನ್ನ ಫೋಟೋ ಬಳಸಿಕೊಂಡು ಪ್ರಸಾರ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಇದು ವೃತ್ತಿಪರವಲ್ಲ. ಅವಮಾನಕರ ಕೃತ್ಯ ನನಗೆ ತೀವ್ರ ಆಘಾತವನ್ನುಂಟು ಮಾಡಿದೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 58ನೇ ವಯಸ್ಸಿನಲ್ಲಿ ಎರಡನೇ ಮಗುವಿನ ತಾಯಿಯಾಗಲಿದ್ದಾರೆ ಗಾಯಕ ಸಿಧು ಮೂಸೆವಾಲಾ ತಾಯಿ!

ಆಂಚಲ್ ತಿವಾರಿ, ಪಂಚಾಯತ್ 2ರಲ್ಲಿ ರವೀನಾ ಪಾತ್ರ ನಿರ್ವಹಿಸಿ ಹೆಸರುವಾಸಿಯಾಗಿದ್ದಾರೆ. ಈ ವದಂತಿಗಳು ಹರಡೋದನ್ನು ತಡೆಯಲು ನಟಿ ತಮ್ಮ ಫಾಲೋವರ್​ಗಳ ಸಹಾಯ ಕೋರಿದ್ದಾರೆ. ಬೆಂಬಲ ಸೂಚಿಸಿ, ಕಾಳಜಿ ವ್ಯಕ್ತಪಡಿಸಿದ ಸರ್ವರಿಗೂ ಕೃತಘ್ಞತೆ ಸಲ್ಲಿಸಿದ್ದಾರೆ. ಇಂದು ಶೇರ್ ಮಾಡಿರೋ ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ, ನಿಖರ ವರದಿಯ ಅಗತ್ಯತೆ ಬಗ್ಗೆ ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಅನೂಪ್ ರೇವಣ್ಣ ನಟನೆಯ 'ಹೈಡ್ ಅಂಡ್ ಸೀಕ್‌' ಟ್ರೇಲರ್​ ಅನಾವರಣಗೊಳಿಸಿದ ರಾಮಲಿಂಗಾರೆಡ್ಡಿ

ಇತ್ತೀಚೆಗೆ, ಪಂಚಾಯತ್ 3ರ ಫಸ್ಟ್ ಲುಕ್ ಅನ್ನು ಬಹಿರಂಗಪಡಿಸಿದರು. ಜಿತೇಂದ್ರ ಕುಮಾರ್, ಬನರಕಾಸ್, ವಿನೋದ್ ಮತ್ತು ಮಾಧವ್ ಅವರು ಪಂಚಾಯತ್​ 3ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನಪ್ರಿಯ ಕಾರ್ಯಕ್ರಮದ ಮೂರನೇ ಸೀಸನ್‌ನಲ್ಲಿಯೂ ಆಂಚಲ್ ತಿವಾರಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.