ETV Bharat / entertainment

'A for Apple' ಅಲ್ಲ 'A for ಆನಂದ್​​': ಶಿಕ್ಷಕನಾದ ಹ್ಯಾಟ್ರಿಕ್​ ಹೀರೋ; ಶಿವರಾಜ್​ಕುಮಾರ್​​ ಹೊಸ ಸಿನಿಮಾ ಅನೌನ್ಸ್ - A FOR ANAND FILM

ನಟ ಶಿವರಾಜ್​​ಕುಮಾರ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಭೈರತಿ ರಣಗಲ್' ಬಿಡುಗಡೆ ಹೊಸ್ತಿಲಿನಲ್ಲಿದ್ದು, ಹೊಸ ಸಿನಿಮಾ 'A for ಆನಂದ್​​' ಘೋಷಣೆಯಾಗಿದೆ.

A for Anand film poster
A for ಆನಂದ್ ಪೋಸ್ಟರ್ (Photo: Film Poster)
author img

By ETV Bharat Entertainment Team

Published : Nov 14, 2024, 2:26 PM IST

'ಭೈರತಿ ರಣಗಲ್'ನಲ್ಲಿ ಲಾಯರ್, 'ಮಫ್ತಿ'ಯಲ್ಲಿ ಡಾನ್, 'ಟಗರು' ಸಿನಿಮಾದಲ್ಲಿ ಪೊಲೀಸ್... ಹೀಗೆ ಪ್ರತೀ ಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಪರಕಾಯ ಪ್ರವೇಶಿಸುವ ನಟ ಶಿವರಾಜ್​​ಕುಮಾರ್ ಅವರೀಗ ಮಾಸ್​ನಿಂದ ಮೇಸ್ಟ್ರಾಗಿ ಬದಲಾಗುತ್ತಿದ್ದಾರೆ. ಹೌದು, ಭಜರಂಗಿ ಈಗ ಭೋದಕನಾಗಿದ್ದಾರೆ.

ದಕ್ಷಿಣ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಭೈರತಿ ರಣಗಲ್' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ದೊಡ್ಮನೆ ದೊರೆ ಶಿವಸೈನ್ಯಕ್ಕೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಈಗಾಗಲೇ ಸಾಲು ಸಾಲು ಸಿನಿಮಾಗಳಿಗೆ ಗ್ರೀನ್​ ಸಿಗ್ನಲ್​​ ಕೊಟ್ಟಿರುವ ಸೆಂಚುರಿ ಸ್ಟಾರ್​​ನ ಹೊಸ ಸಿನಿಮಾ ಘೋಷಣೆಯಾಗಿದೆ.

ಇಂದು ಮಕ್ಕಳ‌ ದಿನಾಚರಣೆ. ಈ ಶುಭ ದಿನದಂದು ಶಿವಣ್ಣ ಮಕ್ಕಳ ಸಿನಿಮಾದಲ್ಲಿ ನಟಿಸುವ ಬಗ್ಗೆ ಗುಟ್ಟುರಟ್ಟು ಮಾಡಿದ್ದಾರೆ. 'ಸುಂದರ ಕಾಂಡ' ಸಿನಿಮಾದಲ್ಲಿ ಟೀಚರ್ ಆಗಿ‌ ಅಭಿನಯಿಸಿದ್ದ ನಟ ಬಹಳ ವರ್ಷದ ಬಳಿಕ ಈ ರೀತಿಯ ಪಾತ್ರ ಒಪ್ಪಿಕೊಂಡಿದ್ದಾರೆ. ವಿಶೇಷ ಅಂದರೆ ಇದು ನೈಜ ಘಟನೆಯಾಧಾರಿತ ಸಿನಿಮಾ.

ಮಾಸ್ ಹೀರೋ ಶಿವಣ್ಣನೀಗ ಲಾಂಗ್ ಬಿಟ್ಟು ಪೆನ್​​ ಹಿಡಿಯುತ್ತಿದ್ದಾರೆ. ಗುರುವಾಗುತ್ತಿರುವ ಶಿವಣ್ಣನಿಗೆ ಓಂಕಾರ ಹಾಕೋದಿಕ್ಕೆ ಘೋಸ್ಟ್ ಸೂತ್ರಧಾರ ಶ್ರೀ‌ನಿ‌ ಸಜ್ಜಾಗಿದ್ದಾರೆ. ಶ್ರೀನಿ ವಿಭಿನ್ನ ಕಥೆ ಮಾಡಿಕೊಂಡು ಬಂದಿದ್ದಾರೆ. ಪಾತ್ರ ಕೂಡಾ ರೆಗ್ಯುಲರ್‌ ಆಗಿಲ್ಲ. ಈ ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶ ಇರಲಿದೆ. ಶಿವಣ್ಣ-ಶ್ರೀನಿ ಕಾಂಬೋದ ''A for ಆನಂದ್'' ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹೊಸ ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ನಾಯಕ ನಟ ಶಿವರಾಜ್​ಕುಮಾರ್​​, ''ಕರ್ನಾಟಕದ ಹೃದಯ ಭಾಗದಲ್ಲಿ, ಹದಿನಾಲ್ಕು ಹಳ್ಳಿಗಳ ಕನಸುಗಳು ಒಂದೇ ಶಾಲೆಯಲ್ಲಿ ಚಿಗುರುತ್ತವೆ. ಇಲ್ಲಿ ಅಕ್ಷರದ ಅರುಣೋದಯ 'A for Apple'ನಿಂದ ಆರಂಭವಾಗುವುದಿಲ್ಲ, ಬದಲು ಬೆಳಕಿನ ಬೀಜ ಬಿತ್ತಿದ ಗುರುವಿನ ಹೆಸರಿನಿಂದ ಮೊಳೆಯುತ್ತದೆ. ಅದೇ A for ಆನಂದ್'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್​ ಕೊನೆ ಚಿತ್ರದಲ್ಲಿ ಶಿವಣ್ಣ: ಸೌತ್ ಸೂಪರ್​​ಸ್ಟಾರ್ಸ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿರುವ ಸೆಂಚುರಿ ಸ್ಟಾರ್

ಆಕರ್ಷಕ ಪೋಸ್ಟರ್​​ನಲ್ಲಿ ಶಿವರಾಜ್​ಕುಮಾರ್​​ ಮಕ್ಕಳೊಂದಿಗೆ ಗುರುವಾಗಿ ಕಾಣಿಸಿಕೊಂಡಿದ್ದಾರೆ. ಟೈಟಲ್​ ಜೊತೆಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಚಿತ್ರತಂಡದ ಹೆಸರನ್ನು ವಿಭಿನ್ನವಾಗಿ ಬರೆಯಲಾಗಿದೆ. ಪ್ರಾಂಶುಪಾಲರು: ಗೀತಾ ಶಿವರಾಜ್​ಕುಮಾರ್​​, ಕ್ಲಾಸ್​ ಟೀಚರ್​​: ಡಾ.ಶಿವರಾಜ್​ಕುಮಾರ್​​, ಕ್ಲಾಸ್​ ಲೀಡ್ರು: ಶ್ರೀನಿ ಎಂದು ಬರೆದು ಗಮನ ಸೆಳೆದಿದ್ದಾರೆ. ರೈಲಿನ ಮೇಲೆ ಮಕ್ಕಳೊಂದಿಗೆ ಗುರು ನಿಂತಿದ್ದು, ಪಾಠಶಾಲೆ ಎಂಬ ಬೋರ್ಡ್​ ಇದೆ.

ಇದನ್ನೂ ಓದಿ: ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ

ವೇದ, ಭೈರತಿ ರಣಗಲ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಗೀತಾ ಶಿವರಾಜ್​ಕುಮಾರ್ ಒಡೆತನದ ಗೀತಾ ಪಿಕ್ಚರ್ಸ್ ಶಿವಣ್ಣನ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. A for ಆನಂದ್ ಸಿನಿಮಾಗೆ ಬಹುತೇಕ ಘೋಸ್ಟ್ ತಾಂತ್ರಿಕ ವರ್ಗವೇ ಕೆಲಸ ಮಾಡುತ್ತಿದೆ. ಮಹೇನ್ ಸಿಂಹ ಕ್ಯಾಮರಾ ವರ್ಕ್​, ದೀಪು ಎಸ್ ಕುಮಾರ್ ಸಂಕಲನ, ಪ್ರಸನ್ನ ವಿಎಂ ಸಂಭಾಷಣೆ ಈ ಚಿತ್ರಕ್ಕಿದೆ. 2025ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಇಡೀ ತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.