ETV Bharat / entertainment

ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಪ್ರಶ್ನೆಗಳ ಬಾಣ ಬಿರುಸು - ಬಿಗ್‌ಬಾಸ್‌

ಬಿಗ್‌ಬಾಸ್‌ ಮನೆಯಲ್ಲಿ ಈ ಸೀಸನ್‌ ಕೊನೆಯ ವಾರ ಹೇಗಿರುತ್ತದೆ ಎಂಬ ಈ ಪ್ರಶ್ನೆಗೆ ಅಸಂಖ್ಯಾತ ಪ್ರೇಕ್ಷಕರ ಮನದಲ್ಲಿ ಕುತೂಹಲ ಮೂಡಿದೆ. ಮನೆಯಿಂದ ಮತ್ತೊಬ್ಬ ಸ್ಪರ್ಧಿಯನ್ನು ಹೊರಗೆ ಕಳಿಸುವ ಸನ್ನಿವೇಶವೂ ಯಾವುದೇ ಕ್ಷಣದದಲ್ಲಿ ಎದುರಾಗಬಹುದಾಗಿದೆ.

Bigg Boss Kannada  BBK10  Kichcha Sudeep  Bigg Boss  ಬಿಗ್‌ಬಾಸ್‌  JioCinema
ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಪ್ರಶ್ನೆಗಳ ಬಾಣ ಬಿರುಸು!
author img

By ETV Bharat Karnataka Team

Published : Jan 22, 2024, 2:01 PM IST

ಹಿಂದಿನ ವಾರಾಂತ್ಯದಲ್ಲಿ ಓರ್ವ ಸದಸ್ಯರನ್ನು ಕಳೆದುಕೊಂಡ ಬಿಗ್‌ಬಾಸ್ ಮನೆ ಇನ್ನಷ್ಟು ಖಾಲಿಯಾಗಿದೆ. ಆದರೆ, ಇರುವ ಆರು ಜನ ಸದಸ್ಯರ ನಡುವಿನ ತುರುಸಿನ ಸ್ಪರ್ಧೆಗೆ ಕಿಡಿ ಮತ್ತಷ್ಟು ಜೋರಾಗಿ ಉರಿಯುತ್ತಿದೆ. ಬಿಗ್‌ಬಾಸ್‌ ಮನೆಯಲ್ಲಿ ಈ ಸೀಸನ್‌ ಕೊನೆಯ ವಾರ ಹೇಗಿರುತ್ತದೆ? ಈ ಪ್ರಶ್ನೆ ಅಸಂಖ್ಯಾತ ಪ್ರೇಕ್ಷಕರ ಮನದಲ್ಲಿ ಕುತೂಹಲ ಹುಟ್ಟಿಸಿದೆ. ಆ ಕುತೂಹಲ ತಣಿಸುವಂಥ ಸುಳಿವೊಂದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ.

ಈ ವಾರದ ಆರಂಭ ಹರಿತವಾದ ಪ್ರಶ್ನೋತ್ತರಗಳಿಂದ ಆರಂಭವಾಗಿದೆ. ಆ ಪ್ರಶ್ನೋತ್ತರ ಕಲಾಪವನ್ನು ನಡೆಸಿಕೊಡಲು ಬಿಗ್‌ಬಾಸ್ ಹಿಂದಿನ ಸ್ಪರ್ಧಿಯಾದ ಕಿರಿಕ್ ಕೀರ್ತಿ ಮತ್ತು ಜಾಹ್ನವಿ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಎದುರಿಗೆ ಮನೆಯ ಆರೂ ಸದಸ್ಯರು ಸಾಲಾಗಿ ಕೂತಿದ್ದಾರೆ. ಕಿರಿಕ್ ಕೀರ್ತಿ ಮತ್ತು ಜಾಹ್ನವಿ ಒಂದೊಂದಾಗಿ ಪ್ರಶ್ನೆಗಳ ಬಾಣವನ್ನು ಒಬ್ಬೊಬ್ಬ ಸ್ಪರ್ಧಿಯ ಮೇಲೂ ಗುರಿಯಿಟ್ಟು ಎಸೆಯುತ್ತಿದ್ದ ಹಾಗೆ ಅವರ ಮುಖದ ಬಣ್ಣ ಭಾವವೇ ಬದಲಾಗುತ್ತದೆ.

  • ವಿನಯ್ ನಿಮಗೆ ಜೈ ಜೈ ಎನ್ನುವವರೆಲ್ಲ ಹೊರಗಡೆ ಇದ್ದಾರೆ. ಯಾಕೆ ಏನಾಯ್ತು?
  • ಕಾರ್ತಿಕ್, ಮಡಕೆ ಒಡೆದು, ಅವರಿಲ್ದೆ ನಾನು ಝೀರೊ ಅಲ್ಲ ಅಂತ ಪ್ರೂವ್ ಮಾಡ್ತೀನಿ ಅಂತ ಹೇಳಿದ್ರಿ… ಪ್ರೂವ್ ಮಾಡಿದ್ರಾ?
  • ಸಂಗೀತಾ ಅವ್ರೆ, ಪ್ರತಾಪ್‌ಗೆ ಇರುವ ಜನಬೆಂಬಲ ನೋಡಿ, ನೀವು ಅವ್ರಿಗೆ ಪ್ರತು… ತಮ್ಮ ಅಂತ ಬಾಂಡಿಂಗ್ ಕ್ರಿಯೇಟ್ ಮಾಡಿದ್ರಾ? ಅಂದ್ರೆ ಇದು ಸ್ಟಾರ್ಟರ್ಜಿನಾ?

ಇವು ಕೇವಲ ಎಕ್ಸಾಂಪಲ್‌ಗಳಷ್ಟೆ. ಇಂಥ ಇನ್ನೂ ಹತ್ತು ಹಲವು ನೇರ, ಹರಿತ ಪ್ರಶ್ನೆಗಳು ಬಿಗ್‌ಬಾಸ್‌ ಟಾಪ್ ಸಿಕ್ಸ್ ಸ್ಪರ್ಧಿಗಳ ಮುಖಕ್ಕೆ ರಾಚಿವೆ. ಅದಕ್ಕೆ ಅವರು ಯಾವ ರೀತಿ ಉತ್ತರಿಸುತ್ತಾರೆ? ತಮ್ಮನ್ನು ತಾವು ಹೇಗೆ ಸಮರ್ಥಿಸಿಕೊಳ್ಳುತ್ತಾರಾ? ಅಥವಾ ಸಹನೆ ಕಳೆದುಕೊಳ್ಳುತ್ತಾರಾ?

ಈ ಎಲ್ಲವೂ ಇಂದಿನ ಸಂಚಿಕೆಯಲ್ಲಿ ಅನಾವರಣಗೊಳ್ಳಲಿದೆ. ಬಿಗ್‌ಬಾಸ್‌ ಫೈನಲ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಮನೆಯಿಂದ ಮತ್ತೊಬ್ಬರು ಸ್ಪರ್ಧಿಯನ್ನು ಹೊರಗೆ ಕಳಿಸುವ ಸನ್ನಿವೇಶವೂ ಯಾವುದೇ ಕ್ಷಣದದಲ್ಲಿಯೂ ಎದುರಾಗಬಹುದಾಗಿದೆ. ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿರುವ ಬಿಗ್‌ಬಾಸ್‌ ಮನೆಯ ಲೈವ್ ಅಪ್‌ಡೇಟ್‌ಗಳಿಗಾಗಿ ಜಿಯೊ ಸಿನಿಮಾ ನೋಡಿ.

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಮತ್ತು ಎಪಿಸೋಡ್‌ಗಳನ್ನು JioCinemaದಲ್ಲಿ ಉಚಿತವಾಗಿ ನೋಡಿ.

ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ಇದನ್ನೂ ಓದಿ: ಹನುಮಾನ್​ ಗಢಿ ದೇಗುಲದಲ್ಲಿ ನಟಿ ಕಂಗನಾ ರಣಾವತ್​ ಸೇವಾ ಕಾರ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.