ETV Bharat / entertainment

'ಚಾರ್ಲಿ' ಬೆಡಗಿ ಸಂಗೀತಾ ಶೃಂಗೇರಿ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಹುಲಿರಾಯ - Sangeetha Sringeri - SANGEETHA SRINGERI

ಇತ್ತೀಚಿಗೆ ಬಂಡೀಪುರಕ್ಕೆ ಭೇಟಿ ಕೊಟ್ಟಿರುವ ನಟಿ ಸಂಗೀತಾ ಶೃಂಗೇರಿ ಹುಲಿರಾಯನ ಅಪರೂಪದ ಫೋಟೋ ಹಾಗು ವಿಡಿಯೋಗಳನ್ನು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

Sangeetha Sringeri
ಸಂಗೀತಾ ಶೃಂಗೇರಿ (ಸಂಗೀತಾ ಇನ್​ಸ್ಟಾಗ್ರಾಮ್)
author img

By ETV Bharat Karnataka Team

Published : May 3, 2024, 6:54 PM IST

ಸಿನಿಮಾ ಮಂದಿಗೆ ಅಭಿನಯದ ಜೊತೆ ಜೊತೆಗೆ ಹಲವು ಹವ್ಯಾಸಗಳಿರುತ್ತವೆ. ಕೆಲವರಿಗೆ ಪ್ರಾಣಿ ಪಕ್ಷಿಗಳನ್ನು ಕಂಡರೆ ಬಲು ಇಷ್ಟ. ಮತ್ತೆ ಕೆಲವರಿಗೆ ಅಡ್ವೆಂಚರ್ ಟ್ರಿಪ್ ಅಚ್ಚುಮೆಚ್ಚು. ಇದಕ್ಕೊಂದು ಹೊಸ ಉದಾಹರಣೆ ಸಿಕ್ಕಿದೆ. ಸೂಪರ್ ಹಿಟ್ ಕನ್ನಡ ಸಿನಿಮಾ 'ಚಾರ್ಲಿ' ನಟಿ ಸಂಗೀತಾ ಶೃಂಗೇರಿ ಅವರಿಗೂ ನಟನೆಯೊಂದಿಗೆ ಹಲವು ಹವ್ಯಾಸಗಳಿವೆ. '777 ಚಾರ್ಲಿ' ನಂತರ ಸಂಗೀತಾ ಒಂದಾದ ಮೇಲೊಂದರಂತೆ ಸಿನಿಮಾ ಮಾಡ್ತಾರೆ ಎಂದೇ ಬಹುತೇಕ ಅಭಿಮಾನಿಗಳು ಅಂದುಕೊಂಡಿದ್ದರು. ಆದ್ರೆ ಅವರು ಸೀದಾ ಹೋಗಿದ್ದು ದೊಡ್ಮನೆಗೆ! ಅದೇ ಬಿಗ್ ಬಾಸ್ ಮನೆಗೆ.

Sangeetha Sringeri
ಸಂಗೀತಾ ಶೃಂಗೇರಿ (ಕೃಪೆ: ಸಂಗೀತಾ ಇನ್​ಸ್ಟಾಗ್ರಾಮ್)

ಕನ್ನಡದ ಬಿಗ್​ ಬಾಸ್​​ ಸೀಸನ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಈ ರಿಯಾಲಿಟಿ ಶೋ ಸೀಸನ್‌ನಿಂದ ಸೀಸನ್​ಗೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಹೊರ ಜಗತ್ತಿನಲ್ಲಿ ಒಳ್ಳೆ ಹೆಸರು ಮಾಡಿದವರೂ ಕೂಡಾ ಬಿಗ್ ಬಾಸ್ ಮನೆಯೊಳಗಿನ ವರ್ತನೆಗಳಿಂದ ತಮ್ಮದೇ ಅಭಿಮಾನಿಗಳ ಅಸಮಾಧಾನ ಎದುರಿಸಿದ್ದೂ ಉಂಟು. ಆದರೆ ಅದೆಂಥಾ ಸವಾಲುಗಳು ಎದುರಾದರೂ ತಾವು ತಾವಾಗೇ ಉಳಿದ, ಸಹಜ ಮಾತು, ವರ್ತನೆಯಿಂದ ಅನೇಕರ ಹೃದಯ ಗೆದ್ದ ಸಂಗೀತಾ ಶೃಂಗೇರಿ ಅಭಿಮಾನಿಗಳಿಂದ 'ಸಿಂಹಿಣಿ' ಎಂಬ ಬಿರುದನ್ನೂ ಪಡೆದರು. ಇದೇ ಸಿಂಹಿಣಿ ಇದೀಗ ಹುಲಿಯ ಅಪರೂಪದ ಚಲನವಲನಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

Sangeetha Sringeri
ಸಂಗೀತಾ ಶೃಂಗೇರಿ ಹಂಚಿಕೊಂಡ ಫೋಟೋ (ಕೃಪೆ: ಸಂಗೀತಾ ಇನ್​ಸ್ಟಾಗ್ರಾಮ್)

ಹೌದು, ಇತ್ತೀಚೆಗೆ ಸಂಗೀತಾ ಶೃಂಗೇರಿ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದರು. ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅರಣ್ಯ ಎಂಬ ಹೆಗ್ಗಳಿಕೆ ಬಂಡೀಪುರಕ್ಕಿದೆ. ಹೀಗಾಗಿಯೇ ಬಂಡೀಪುರಕ್ಕೆ ಕ್ಯಾಮರಾ ಹಿಡಿದು ಹೋಗಿದ್ದ ಸಂಗೀತಾ, ಹುಲಿಯನ್ನು ತೀರಾ ಹತ್ತಿರದಿಂದ ಕಣ್ತುಂಬಿಕೊಂಡಿದ್ದಾರೆ. ಅವರೇ ಹೇಳಿರುವಂತೆ, ಹತ್‌ಹತ್ರ ಒಂದು ಗಂಟೆ ಹುಲಿಯ ದರ್ಶನ ಮಾಡಿಕೊಂಡು ಮರಳಿದ್ದಾರೆ.

ಇದನ್ನೂ ಓದಿ: 'ಆ ನಿರ್ದೇಶಕನಿಗೆ ಮುಸುಕು ಹಾಕಿ ಹೊಡೆದರೆ ₹10 ಸಾವಿರ ಕೊಡುತ್ತೇನೆ': ಅಚ್ಚರಿ ಹುಟ್ಟಿಸಿದ ರಾಜಮೌಳಿ ಆಫರ್ - S S Rajamouli

ತಮ್ಮ ಅನುಭವವನ್ನು ಸಂಗೀತಾ ಶೃಂಗೇರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಸಮೇತ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿ ಬಳಗ ಬಗೆ ಬಗೆಯಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ. ನಮ್ಮ ಸಿಂಹಿಣಿಯನ್ನು ನೋಡಿ ಹುಲಿ ಕೂಡ ಓಡಿ ಹೋಗಬೇಕು ಎನ್ನುತ್ತಿದೆ ಎಂಬರ್ಥದಲ್ಲಿ ಕಾಮೆಂಟ್​ಗಳು ಬಂದಿವೆ. ಇದರ ನಡುವೆ ಸಂಗೀತಾ ಅವರ ಕ್ಯಾಮರಾ ಕಲೆಯನ್ನೂ ಕೂಡ ಮೆಚ್ಚಿಕೊಳ್ಳುತ್ತಿದ್ದಾರೆ. ಇದೆಲ್ಲದರ ಪ್ರತಿಫಲವೆಂಬಂತೆ ಸಂಗೀತಾರ ವೈಲ್ಡ್ ಲೈಫ್ ಅಡ್ವೆಂಚರ್​ ಪೋಸ್ಟ್​ ಅನ್ನು ಅತ್ಯಧಿಕ ಜನ ಇಷ್ಟಪಟ್ಟಿದ್ದಾರೆ. ಸಂಗೀತ ಶೃಂಗೇರಿಗೆ ಅವರಿಗಿರುವ ಪರಿಸರ ಹಾಗು ಪ್ರಾಣಿಪ್ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ: ರಾಕಿಂಗ್​ ಸ್ಟಾರ್ ಯಶ್​ ಅಭಿನಯದ 'ಟಾಕ್ಸಿಕ್' 2 ಭಾಗಗಳಲ್ಲಿ ನಿರ್ಮಾಣ? - Toxic

ಬಿಗ್​ ಬಾಸ್​ ಫೈನಲ್​ವರೆಗೆ ತಲುಪಿ ಹೊರಬಂದ ಬಳಿಕ ಬಿಡುಗಡೆಯಾದ ಸಂಗೀತಾ ಅವರ ಸಿನಿಮಾ ''ಮಾರಿಗೋಲ್ಡ್''. ಗೋಲ್ಡ್ ಬಿಸ್ಕತ್ ಮಾರಲು ಹೊರಟ ನಾಲ್ವರು ಹುಡುಗರ ಕಥೆಯಲ್ಲಿ ದೂದ್ ಪೇಡಾ ದಿಗಂತ್ ಜೊತೆ ಇವರು ತೆರೆ ಹಂಚಿಕೊಂಡಿದ್ದರು. ಈ ಸಿನಿಮಾ ಒಂದು ಮಟ್ಟಿಗೆ ಸದ್ದು ಮಾಡಿತು. ನಟಿಯ ಮುಂದಿನ ಚಿತ್ರಗಳ ಕುರಿತು ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.