Highest Paying professions: ಭಾರತದಿಂದ ಅನೇಕ ಜನರು ಹೆಚ್ಚಿನ ಸಂಬಳದ ಉದ್ಯೋಗ ಹುಡುಕಿಕೊಂಡು ವಿದೇಶಕ್ಕೆ ಹೋಗುತ್ತಾರೆ. ಆದರೆ, ನೀವು ಸರಿಯಾದ ಕೌಶಲ್ಯ, ಅರ್ಹತೆ ಮತ್ತು ಅನುಭವ ಹೊಂದಿದ್ದರೆ, ದೇಶದಲ್ಲೇ ಹೆಚ್ಚಿನ ಸಂಬಳ ಪಡೆಯಬಹುದು. ವರ್ಷಕ್ಕೆ 70 ಲಕ್ಷದವರೆಗೆ ವಾರ್ಷಿಕ ವೇತನವನ್ನು ನೀಡಲಾಗುತ್ತಿದೆ. ಅಂತಹ ಉದ್ಯೋಗಗಳು ಮತ್ತು ವೃತ್ತಿಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
1. ಪೈಲಟ್: ವಾಯುಯಾನ ಕ್ಷೇತ್ರವು ದೇಶದಲ್ಲೀಗ ತೀವ್ರವಾಗಿ ಅಭಿವೃದ್ಧಿ ಕಾಣುತ್ತಿರುವ ಉದ್ಯಮವಾಗಿದೆ. ಇದರಿಂದಾಗಿ ಪೈಲಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಪೈಲಟ್ ವೃತ್ತಿ ಈಗ ಅತ್ಯುತ್ತಮ ಆಯ್ಕೆಯಾಗಿದೆ. 2023 ರಲ್ಲಿ, ಅನೇಕ ವಿಮಾನಯಾನ ಸಂಸ್ಥೆಗಳು ಉತ್ತಮ ತರಬೇತಿ ಪಡೆದ ಪೈಲಟ್‌ಗಳಿಗೆ ವಾರ್ಷಿಕ ರೂ.70 ಲಕ್ಷದವರೆಗೆ ವೇತನವನ್ನು ನೀಡುತ್ತಿವೆ. ವಾಣಿಜ್ಯ ಮತ್ತು ಮಿಲಿಟರಿ ಪೈಲಟ್‌ಗಳು ತಮ್ಮ ವೃತ್ತಿಜೀವನದ ಆರಂಭದಲ್ಲಿ ವಾರ್ಷಿಕ 9 ಲಕ್ಷ ರೂ. ವೇತನ ಪಡೆಯುತ್ತಾರೆ.
ಶೈಕ್ಷಣಿಕ ಅರ್ಹತೆ: ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯಗಳೊಂದಿಗೆ ಪಿಯುಸಿ ಪೂರ್ಣಗೊಳಿಸಿದವರು, ಏವಿಯೇಷನ್ ಕೋರ್ಸ್‌ಗಳನ್ನು ಮಾಡಿದ ನಂತರ ಪೈಲಟ್ ಆಗಬಹುದು.
2. ಬಿಸಿನೆಸ್ ಅನಾಲಿಸ್ಟ್: ಇಂದಿನ ಆರ್ಥಿಕ ಜಗತ್ತಿನಲ್ಲಿ ಬಿಸಿನೆಸ್ ಅನಾಲಿಸ್ಟ್ಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಅಂದ ಹಾಗೆ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವುದು ಅಷ್ಟು ಸುಲಭದ ಮಾತೂ ಅಲ್ಲ. ಅದಕ್ಕಾಗಿಯೇ ಕೆಲವೇ ಜನರು ಬಿಸಿನೆಸ್ ಅನಲಿಸ್ಟ್ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಉದ್ಯಮಗಳ ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ಸಂಸ್ಥೆಗಳ ನಡುವಿನ ಸ್ಪರ್ಧಾತ್ಮಕತೆ ವಿಶ್ಲೇಷಿಸಲು ವ್ಯಾಪಾರ ವಿಶ್ಲೇಷಕರ ಅವಶ್ಯಕತೆಯಿದೆ. ಬಿಸಿನೆಸ್ ಅನಾಲಿಸ್ಟ್, ರಿಲೇಶನ್ ಶಿಪ್ ಮ್ಯಾನೇಜರ್, ಫೈನಾನ್ಷಿಯಲ್ ಅನಾಲಿಸ್ಟ್, ರಿಸ್ಕ್ ಮ್ಯಾನೇಜರ್ ಮುಂತಾದ ಉದ್ಯೋಗಿಗಳು ವಾರ್ಷಿಕ 4 ಲಕ್ಷ ರೂಗಳಿಂದ 34 ಸಾವಿರ ರೂ. ಸಂಬಳ ಪಡೆಯುತ್ತಿದ್ದಾರೆ.
ಶೈಕ್ಷಣಿಕ ಅರ್ಹತೆ: ಪದವಿ ಪೂರ್ಣಗೊಳಿಸಿರಬೇಕು. ಬ್ಯಾಂಕಿಂಗ್ ಕಾರ್ಯಾಚರಣೆಗಳು, ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ಗಳ ಬಗ್ಗೆ ಸಮಗ್ರ ಜ್ಞಾನವನ್ನು ಹೊಂದಿರಬೇಕು.
3. ಕೃತಕ ಬುದ್ಧಿಮತ್ತೆ: ಕೃತಕ ಬುದ್ಧಿಮತ್ತೆ (AI) ಪ್ರಸ್ತುತ ಪ್ರಪಂಚದಾದ್ಯಂತ ಭಾರಿ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. AI ತಂತ್ರಜ್ಞಾನದಿಂದ ಜಗತ್ತಿನಾದ್ಯಂತ ಅನೇಕ ಉದ್ಯೋಗಗಳು ನಷ್ಟವಾಗುತ್ತಿವೆ. ಆದರೆ, ಎಐ ಮತ್ತು ಮೆಷಿನ್ ಲರ್ನಿಂಗ್ ಇಂಜಿನಿಯರ್‌ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. 2023 ರಲ್ಲಿ OTT ಪ್ಲಾಟ್‌ಫಾರ್ಮ್ ಆಗಿರುವ ನೆಟ್‌ಫ್ಲಿಕ್ಸ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮೆಷಿನ್ ಲರ್ನಿಂಗ್ ಟೆಕ್ನಾಲಜೀಸ್‌ನಲ್ಲಿ ಉದ್ಯೋಗವೊಂದನ್ನು ಪೋಸ್ಟ್ ಮಾಡಿತ್ತು. ಮೆಷಿನ್ ಲರ್ನಿಂಗ್ ಟೆಕ್ನಾಲಜೀಸ್‌ನಲ್ಲಿ ಅನುಭವ ಹೊಂದಿರುವ ಮ್ಯಾನೇಜರ್ ಬೇಕು ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿತ್ತು. ಈ ಕೆಲಸಕ್ಕೆ ವರ್ಷಕ್ಕೆ 2.4 ಕೋಟಿ ರೂ.ನಿಂದ 7.4 ಕೋಟಿ ರೂ.ವರೆಗೆ ವೇತನ ನೀಡಲಾಗುವುದು ಎಂದು ಹೇಳಲಾಗಿದೆ. ಇದು AI, ಯಂತ್ರ ಕಲಿಕೆ ಇಂಜಿನಿಯರ್ ಕೆಲಸದ ಪ್ರಾಮುಖ್ಯತೆಯ ಕಲ್ಪನೆಯನ್ನು ನಿಮಗೆ ನೀಡುತ್ತದೆ. 8 ವರ್ಷಗಳ ಅನುಭವ ಹೊಂದಿರುವ ವೃತ್ತಿಪರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್/ಮೆಷಿನ್ ಲರ್ನಿಂಗ್ ಇಂಜಿನಿಯರ್ ವಾರ್ಷಿಕವಾಗಿ ಸುಮಾರು 45 ಲಕ್ಷ ರೂ. ವೇತನ ಪಡೆಯಬಹುದು.
ಶಿಕ್ಷಣ ಅರ್ಹತೆ: AI, ಯಂತ್ರ ಕಲಿಕೆ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಮಾಡಿದವರು ಈ ಉದ್ಯೋಗಗಳನ್ನು ಪಡೆಯಬಹುದು.
4. ಸಾಫ್ಟ್ ವೇರ್ ಆರ್ಕಿಟೆಕ್ಟ್: ನಮ್ಮ ದೇಶದಲ್ಲಿ ಸಾಫ್ಟ್ ವೇರ್ ಉದ್ಯೋಗಗಳಿಗೆ ಇರುವಷ್ಟು ಬೇಡಿಕೆ ಬೇರೆ ಯಾವ ಕ್ಷೇತ್ರಕ್ಕೂ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ಸಾಫ್ಟ್‌ವೇರ್ ಆರ್ಕಿಟೆಕ್ಟ್‌ಗಳಿಗೂ ಹೆಚ್ಚಿನ ಬೇಡಿಕೆಯಿದೆ. ನೀವು ಉತ್ತಮ ಕೌಶಲ್ಯ ಹೊಂದಿದ್ದರೆ, ವಾರ್ಷಿಕ ರೂ.32 ಲಕ್ಷಗಳವರೆಗೆ ಸಂಬಳ ಪಡೆದುಕೊಳ್ಳಬಹುದು.
ಶೈಕ್ಷಣಿಕ ಅರ್ಹತೆ: ಕಂಪ್ಯೂಟರ್ ಸೈನ್ಸ್ ಪದವಿಯ ಜೊತೆಗೆ, ಸಾಫ್ಟ್‌ವೇರ್ ಎಂಜಿನಿಯರಿಂಗ್ ಮತ್ತು ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಉತ್ತಮ ಜ್ಞಾನ ಹೊಂದಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
5. ಡೇಟಾ ಸೈಂಟಿಸ್ಟ್: ಪ್ರಸ್ತುತ ನಮ್ಮ ದೇಶದಲ್ಲಿ ಡೇಟಾ ಸೈಂಟಿಸ್ಟ್ ಉದ್ಯೋಗಗಳಿಗೆ ಭಾರಿ ಬೇಡಿಕೆಯಿದೆ. ಡೇಟಾ ವಿಶ್ಲೇಷಣೆ, ಅಲ್ಗಾರಿದಮ್‌ಗಳ ರಚನೆ ಇತ್ಯಾದಿಗಳಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತಿದೆ. ಈ ಉದ್ಯೋಗಗಳು ವರ್ಷಕ್ಕೆ 14 ಲಕ್ಷ ರೂಗಳಿಂದ ರೂ.25 ಲಕ್ಷದವರೆಗೆ ವೇತನ ಪಡೆಯಬಹುದು.
ಇದನ್ನು ಓದಿ: ಹೈ-ಸ್ಪೀಡ್, ಬೆಸ್ಟ್ ಪರ್ಫಾಮೆನ್ಸ್ ನೀಡುವ ಬಿಸ್ನೆಸ್ ಲ್ಯಾಪ್‌ಟಾಪ್ ಬೇಕೇ?: ಇಲ್ಲಿವೆ ಆಯ್ಕೆಗಳು - Best Performance Laptops