ETV Bharat / education-and-career

BSF, CRPF, ITBPಯಲ್ಲಿ ನೇಮಕಾತಿ: 506 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್​ಸಿ - UPSC Notification - UPSC NOTIFICATION

ಕೇಂದ್ರ ಮೀಸಲು ಪೊಲೀಸ್​ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಯುಪಿಎಸ್​ಸಿ ಅಧಿಸೂಚನೆ ಹೊರಡಿಸಿದೆ.

UPSC Notification for Central Armed Police force job

author img

By ETV Bharat Karnataka Team

Published : Apr 25, 2024, 5:06 PM IST

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು ಕೇಂದ್ರ ಮೀಸಲು ಪೊಲೀಸ್​ ಪಡೆ (ಅಸಿಸ್ಟೆಂಟ್​ ಕಮಾಂಡೆಂಟ್ಸ್​​) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 506 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಂತಿದೆ.

ಹುದ್ದೆಗಳ ವಿವರ:

  • ಬಾರ್ಡರ್​ ಸೆಕ್ಯೂರಿಟಿ ಫೋರ್ಸ್​ (ಬಿಎಸ್ಎಫ್​) - 186
  • ಸೆಂಟ್ರಲ್​ ರಿಸರ್ವ್​​ ಪೊಲೀಸ್​ ಫೋರ್ಸ್​​ (ಸಿಆರ್​ಪಿಎಫ್​ )- 120
  • ಸೆಂಟ್ರಲ್​ ಇಂಡಸ್ಟ್ರಿಯಲ್​ ಸೆಕ್ಯೂರಿಟಿ ಫೋರ್ಸ್​ (ಸಿಐಎಸ್​ಎಫ್​​) - 100
  • ಇಂಡೋ ಟಿಬೇಟಿಯನ್​ ಬಾರ್ಡರ್​ ಪೊಲೀಸ್​​ (ಐಟಿಬಿಪಿ)- 58
  • ಶಸ್ತ್ರಾಸ್ತ್ರ ಸೀಮಾ ಬಲ (ಎಸ್​ಎಸ್​ಬಿ) - 42

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಕನಿಷ್ಠ 20 ಗರಿಷ್ಠ 25 ವರ್ಷ

ಅಧಿಸೂಚನೆ
ಅಧಿಸೂಚನೆ

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಪ.ಜಾ, ಪ.ಪಂ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್​ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದೈಹಿಕ ದಾರ್ಢ್ಯತೆ, ವೈದ್ಯಕೀಯ ಪರೀಕ್ಷೆ, ಮೆರಿಟ್​ ಲಿಸ್ಟ್​ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಮೇ 24ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮೇ 14 ಕಡೇಯ ದಿನ. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಅಭ್ಯರ್ಥಿಗಳು upsc.gov.in ಇಲ್ಲಿಗೆ ಭೇಟಿ ನೀಡಿ.

ಡಿಆರ್​​ಡಿಒ ಅಪ್ರೆಂಟಿಸ್​ ಹುದ್ದೆ: ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಪದವೀಧರ ಅಪ್ರೆಂಟಿಸ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ತಾಂತ್ರಿಕ ಮತ್ತು ತಾಂತ್ರಿಕೇತರ ವಿಭಾಗದಲ್ಲಿ ಒಟ್ಟು 150 ಹುದ್ದೆಗಳ ನೇಮಕಾತಿ ನಡೆಯಲಿದೆ.

ತಾಂತ್ರಿಕ ಪದವೀಧರ ಅಪ್ರೆಂಟಿಸ್​ ಹುದ್ದೆಗೆ ಬಿಇ, ಬಿಟೆಕ್​ ಪದವಿ, ತಾಂತ್ರಿಕೇತರ ಪದವೀಧರ ಅಪ್ರೆಂಟಿಸ್​ ಹುದ್ದೆಗೆ ಬಿಕಾಂ, ಬಿಎಸ್ಸಿ, ಬಿಎ, ಬಿಸಿಎ, ಬಿಬಿಎ ಪದವಿ ಹಾಗೂ ಡಿಪ್ಲೊಮಾ ಮತ್ತು ಐಟಿಐ ಅಪ್ರೆಂಟಿಸ್​​ಗೆ ಡಿಪ್ಲೊಮಾ ಮತ್ತು ಐಟಿಐ ಉತ್ತೀರ್ಣರಾಗಿರಬೇಕು.

ಅರ್ಜಿ ಸಲ್ಲಿಕೆಗೆ ಗರಿಷ್ಠ ವಯೋಮಿತಿ 27 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅಭ್ಯರ್ಥಿಗಳ ಅಪ್ರೆಂಟಿಸ್​​ ಅವಧಿಯಲ್ಲಿ ಮಾಸಿಕ ಗೌರವಧನವನ್ನು ನೀಡಲಾಗುವುದು. ಅರ್ಜಿ ಸಲ್ಲಿಕೆಗೆ ಮೇ 9 ಕಡೇಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ rac.gov.in ಅಥವಾ drdo.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಅಂಚೆ ಕಚೇರಿಯಲ್ಲಿ ಚಾಲಕರ​ ಹುದ್ದೆಗೆ ನೇಮಕಾತಿ: 10ನೇ ತರಗತಿ ಪಾಸ್​ ಆಗಿದ್ರೆ ಅರ್ಜಿ ಸಲ್ಲಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.