ಬೆಂಗಳೂರು: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ವಿ.ವಿ.ಯ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ.
ಹುದ್ದೆಗಳು: ಒಟ್ಟು 51 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳಿವೆ?
- ಕನ್ನಡ - 4
- ಅರ್ಥಶಾಸ್ತ್ರ - 2
- ವಾಣಿಜ್ಯ - 4
- ಎಂಎಸ್ಡಬ್ಲ್ಯೂ - 2
- ಇಂಗ್ಲಿಷ್ - 3
- ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್ ಸೈನ್ಸ್ - 1
- ಕಂಪ್ಯೂಟರ್ ಸೈನ್ಸ್ - 8
- ಶಿಕ್ಷಣ - 1
- ಇತಿಹಾಸ - 3
- ರಸಾಯನಶಾಸ್ತ್ರ - 1
- ಭೌತಶಾಸ್ತ್ರ - 3
- ಪ್ರಾಣಿಶಾಸ್ತ್ರ - 5
- ಸಸ್ಯಶಾಸ್ತ್ರ - 5
- ಪತ್ರಿಕೋದ್ಯಮ - 3
- ಭೂಗೋಳಶಾಸ್ತ್ರ - 1
- ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ - 2
- ಗಣಿತಶಾಸ್ತ್ರ - 3
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ನೇಮಕಾತಿ ಅವಧಿ: 10 ತಿಂಗಳು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗುವ ಮೊದಲು ವಿ.ವಿ.ಯ ಅಧಿಕೃತ ಜಾಲತಾಣದಲ್ಲಿನ ಗೂಗಲ್ ಶೀಟ್ ಲಿಂಕ್ ಮೂಲಕ ಅರ್ಜಿ ಭರ್ತಿ ಮಾಡಬೇಕು. ಅರ್ಜಿ ಹಾಗೂ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಮೌಖಿಕ ಸಂದರ್ಶನದ ದಿನಾಂಕ ಮತ್ತು ಸಮಯವನ್ನು ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಮುಂಬರುವ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
ಅಕ್ಟೋಬರ್ 14ರಿಂದ ಗೂಗಲ್ ಶೀಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕಡೇಯ ದಿನಾಂಕ ಅಕ್ಟೋಬರ್ 30. ಈ ಕುರಿತು ಹೆಚ್ಚಿನ ಮಾಹಿತಿಗೆ rcub.ac.in ಇಲ್ಲಿಗೆ ಭೇಟಿ ನೀಡಿ.