ಬೆಂಗಳೂರು: ಬಳ್ಳಾರಿಯಲ್ಲಿ ಖಾಲಿ ಇರುವ ಸ್ಟಾಫ್ ನರ್ಸ್ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಎಂಎಂ ಅಭೀಮ್ ಕಾರ್ಯಕ್ರಮದ ಅಡಿ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಸಲಾಗುವುದು. ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಹುದ್ದೆ ವಿವರ: ಒಟ್ಟು 62 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹೀಗಿದೆ ಹುದ್ದೆ ವಿವರ:
- ಬ್ಲಾಕ್ ಎಪಿಡೆಮಿಲೊಜಿಸ್ಟ್ - 1
- ಸ್ಟಾಫ್ ನರ್ಸ್ - 45
- ಆಡಿಯೋಮೆಟ್ರಿಲ್ ಅಸಿಸ್ಟೆಂಟ್ - 1
- ಇನ್ಸ್ಟ್ರಕ್ಟರ್- 1
- ಡಿಸ್ಟಿಕ್ ಕೋ ಆರ್ಡಿನೇಟರ್ - 1
- ಜೂನಿಯರ್ ಹೆಲ್ತ್ ಅಸಿಸ್ಟೆಂಟ್ - 12
- ಕ್ಲೋಸ್ ಅಡ್ವೈಸರ್ - 1
ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಪದವಿ, ಎಎಸ್ಸಿ, ಬಿಎಸ್ಸಿ ನರ್ಸಿಂಗ್, ಡಿಪ್ಲೊಮಾಮ ಬಿಎಸ್ಸಿ, ಬಿಡಿಎಸ್, ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು.
![Staff Nurse Recruitment Notification form Bellary Health and Family Welfare Society](https://etvbharatimages.akamaized.net/etvbharat/prod-images/26-09-2024/bellary-dh_2609newsroom_1727334769_316.jpg)
ವಯೋಮಿತಿ: ಹುದ್ದೆಗೆ ಅನುಗುಣವಾದ ವಯೋಮಿತಿ ಹೊಂದಿದ್ದು, ಗರಿಷ್ಠ ವಯೋಮಿತಿ 45 ವರ್ಷವಾಗಿದೆ.
ಆಯ್ಕೆ: ಅಭ್ಯರ್ಥಿಗಳನ್ನು ಮೆರಿಟ್, ದಾಖಲಾತಿ ಪರಿಶೀಲನೆ ಮೇರೆಗೆ ಆಯ್ಕೆ ಮಾಡಲಾಗುವುದು.
ಈ ಹುದ್ದೆಗೆ ವಾಕ್ ಇನ್ ಇಂಟರ್ವ್ಯೂ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಕ್ಟೋಬರ್ 4 ರಂದು ಈ ಕೆಳಗಿನ ವಿಳಾಸದಲ್ಲಿ ವಾಕ್ ಇನ್ ಇಂಟರ್ವ್ಯೂ ನಡೆಯಲಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣ, ಬಳ್ಳಾರಿ, ಕರ್ನಾಟಕ
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ballari.nic.in ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: ಕೊಂಕಣ್ ರೈಲ್ವೆಯಲ್ಲಿದೆ ಉದ್ಯೋಗಾವಕಾಶ: ಈಗಲೇ ವಾಕ್ ಇನ್ನಲ್ಲಿ ಭಾಗಿಯಾಗಿ