ETV Bharat / education-and-career

6 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಎಸ್​ಬಿಐ ಸ್ಕಾಲರ್​ಶಿಪ್​ ಪಡೆಯಲು ಹೀಗೆ ಮಾಡಿ - SBIF Asha Scholarship

author img

By ETV Bharat Karnataka Team

Published : 2 hours ago

Updated : 1 hours ago

6 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ಸರ್ಕಾರಿ ವಲಯದ ಪ್ರಸಿದ್ಧ ಎಸ್​ಬಿಐ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳ ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಸ್ಕಾಲರ್​ಶಿಪ್​ ನೀಡುತ್ತಿದೆ. ಅದಕ್ಕಾಗಿ ಆಕಾಂಕ್ಷಿಗಳು ಏನು ಮಾಡಬೇಕು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೇರಿದಂತೆ ಇನ್ನಿತರ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ..

SBI Aasha scholarship
ಎಸ್​ಬಿಐ ವಿದ್ಯಾರ್ಥಿವೇತನ (ETV Bharat)

SBIF Asha Scholarship: ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರೆ, ಅನೇಕ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಾರೆ. ಒಳ್ಳೆಯ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯಬೇಕೆಂಬ ಹಂಬಲವಿದ್ದರೂ ಬಡತನ ಅವರಿಗೆ ಅಡ್ಡಿಯಾಗುತ್ತೆ. ಅಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಲು SBI ಫೌಂಡೇಶನ್ ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತವನ್ನು ನೀಡಲು ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮದ 3ನೇ ಆವೃತ್ತಿಯನ್ನು ಪ್ರಾರಂಭಿಸಿದೆ. ದೇಶಾದ್ಯಂತ ಹಿಂದುಳಿದ ಸಮುದಾಯಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ 6 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು? ಅರ್ಹತೆಗಳೇನು? ಅಗತ್ಯವಿರುವ ದಾಖಲೆಗಳು? ಕೊನೆಯ ದಿನಾಂಕ ಯಾವಾಗ? ಅನ್ನೋದರ ಮಾಹಿತಿಯನ್ನು ಈ ಸ್ಟೋರಿಯಲ್ಲಿ ತಿಳಿಯೋಣ..

ಅರ್ಹತೆಗಳೇನು:

  • ಭಾರತೀಯರು ಮಾತ್ರ ಅರ್ಜಿ ಸಲ್ಲಿಸಬೇಕು.
  • ಅರ್ಜಿದಾರರು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ (2024-25) 6 ರಿಂದ 12 ನೇ ತರಗತಿಯ ನಡುವೆ ಇರಬೇಕು.
  • ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75% ಅಂಕಗಳನ್ನು ಪಡೆದಿರಬೇಕು.
  • ಒಟ್ಟು ಕುಟುಂಬದ ವಾರ್ಷಿಕ ಆದಾಯ ರೂ. 3 ಲಕ್ಷ ಮೀರಬಾರದು.
  • 50 ರಷ್ಟು ಸ್ಲಾಟ್‌ಗಳನ್ನು ಮಹಿಳೆಯರಿಗೆ ನಿಗದಿಪಡಿಸಲಾಗಿದೆ.
  • SS ಮತ್ತು ST ಅರ್ಜಿಗಳಿಗೆ ಆದ್ಯತೆ ನೀಡಲಾಗುವುದು.
  • ಆಯ್ಕೆಯಾದ ಪ್ರತಿ ವಿದ್ಯಾರ್ಥಿಗೆ ರೂ. 15 ಸಾವಿರ ಶಿಷ್ಯವೇತನ ದೊರೆಯಲಿದೆ.

ಅಗತ್ಯವಿರುವ ದಾಖಲೆಗಳು:

  • ಕಳೆದ ಶೈಕ್ಷಣಿಕ ವರ್ಷದ ಅಂಕ ಪಟ್ಟಿ
  • ಸರ್ಕಾರಿ ID ಪುರಾವೆ (ಆಧಾರ್)
  • ಪ್ರಸಕ್ತ ವರ್ಷದ ಶಿಕ್ಷಣ ಶುಲ್ಕ ರಶೀದಿ
  • ಪ್ರಸ್ತುತ ಪ್ರವೇಶ ದಾಖಲೆ ರಶೀದಿ
  • ಬ್ಯಾಂಕ್ ಖಾತೆ ವಿವರಗಳು (ಪೋಷಕರ ಬ್ಯಾಂಕ್​ ಅಕೌಂಟ್​)
  • ಆದಾಯ ಪ್ರಮಾಣಪತ್ರ
  • ಪಾಸ್​ಪೋರ್ಟ್ ಫೋಟೋ
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)

ಅರ್ಜಿ ಸಲ್ಲಿಸುವುದು ಹೇಗೆ? :

  • ಮೊದಲು ಅಧಿಕೃತ ವೆಬ್‌ಸೈಟ್ sbifashascholarship.org ತೆರೆಯಿರಿ.
  • ಸ್ಕಾಲರ್‌ಶಿಪ್ ಕಾಲಂನಲ್ಲಿ ಶಾಲಾ ವಿದ್ಯಾರ್ಥಿಗಾಗಿ SBIF ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮದ ಮೇಲೆ ಕ್ಲಿಕ್ ಮಾಡಿ.
  • ಈಗ ಅನ್ವಯಿಸು ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇನ್ನೊಂದು ಪುಟ ತೆರೆದುಕೊಳ್ಳುತ್ತದೆ.
  • ಅಲ್ಲಿ ನೀವು ನಿಮ್ಮ ವಿವರಗಳೊಂದಿಗೆ ಲಾಗಿನ್ ಆಗಬೇಕು. ಈ ಸ್ಕಾಲರ್‌ಶಿಪ್ ಕಾರ್ಯಕ್ರಮಕ್ಕೆ ನೀವು ಮೊದಲೇ ಅರ್ಜಿ ಸಲ್ಲಿಸಿದ್ದರೆ ಆ ವಿವರಗಳೊಂದಿಗೆ ನೀವು ಲಾಗಿನ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ರಿಜಿಸ್ಟರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅಲ್ಲಿ ಕೇಳಲಾದ ವಿವರಗಳನ್ನು ನಮೂದಿಸಿ ಮತ್ತು ನೋಂದಣಿಯನ್ನು ಪೂರ್ಣಗೊಳಿಸಿ. ಅದರ ನಂತರ ಆ ವಿವರಗಳೊಂದಿಗೆ Buddy4Study ಗೆ ಲಾಗ್ ಇನ್ ಮಾಡಿ.
  • ನಂತರ SBIF ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮ 2024 ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.

ಆಯ್ಕೆ ಪ್ರಕ್ರಿಯೆ: ಎಸ್‌ಬಿಐ ಆಶಾ ಸ್ಕಾಲರ್‌ಶಿಪ್ 2024 ಆಯ್ಕೆ ಪ್ರಕ್ರಿಯೆಯು ಶೈಕ್ಷಣಿಕ ಕಾರ್ಯಕ್ಷಮತೆ, ಹಣಕಾಸಿನ ಅಗತ್ಯತೆಗಳು ಮತ್ತು ಅರ್ಹತೆಯ ಆಧಾರದ ಮೇಲೆ ಇರುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಟೆಲಿಫೋನಿಕ್ ಸಂದರ್ಶನ ಮತ್ತು ದಾಖಲೆ ಪರಿಶೀಲನೆ ಇರುತ್ತದೆ. ಈ ಪೈಕಿ ಆಯ್ಕೆಯಾದರೆ ವಿದ್ಯಾರ್ಥಿವೇತನದ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಕೊನೆಯ ದಿನಾಂಕ: ಆಸಕ್ತ ವಿದ್ಯಾರ್ಥಿಗಳು ಬರುವ ಅಕ್ಟೋಬರ್ 1ರ ಮೊದಲು ಅರ್ಜಿಯನ್ನು ಭರ್ತಿ ಮಾಡಬೇಕು. ಇದು ವರ್ಷಕ್ಕೊಮ್ಮೆ ನೀಡುವ ವಿದ್ಯಾರ್ಥಿವೇತನ ಕಾರ್ಯಕ್ರಮವಾಗಿದೆ.

ಇದನ್ನೂ ಓದಿ: ಸಿಇಟಿ/ನೀಟ್: 2ನೇ ಸುತ್ತಿ‌ನ ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶ ಪ್ರಕಟ; ಲಭ್ಯ‌ವಿರುವ ಸೀಟ್​ಗಳೆಷ್ಟು? - CET NEET Seat Allotment

Last Updated : 1 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.