ಉತ್ತರ ಪ್ರದೇಶದ ಗೋರಖ್‌ಪುರ ರೈಲ್ವೇ ಹಾಗು ಈಶಾನ್ಯ ರೈಲ್ವೆ ಎನ್‌ಇಆರ್ ಅಡಿಯಲ್ಲಿ ಯೂನಿಟ್‌ಗಳಲ್ಲಿ ಖಾಲಿ ಇರುವ 1,104 ಆಕ್ಟ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಗಡುವಿನೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ (ವರ್ಕ್‌ಶಾಪ್/ಯೂನಿಟ್):
- ಮೆಕ್ಯಾನಿಕಲ್ ವರ್ಕ್‌ಶಾಪ್ (ಗೋರಖ್‌ಪುರ) - 411
- ಸಿಗ್ನಲ್ ವರ್ಕ್‌ಶಾಪ್ (ಗೋರಖ್‌ಪುರ ಕಂಟೋನ್ಮೆಂಟ್) - 63
- ಬ್ರಿಡ್ಜ್ ವರ್ಕ್‌ಶಾಪ್ (ಗೋರಖ್‌ಪುರ ಕಂಟೋನ್ಮೆಂಟ್) - 35
- ಮೆಕ್ಯಾನಿಕಲ್ ವರ್ಕ್‌ಶಾಪ್ (ಇಜ್ಜತ್‌ನಗರ) - 151
- ಡೀಸೆಲ್ ಶೆಡ್ (ಇಜ್ಜತ್‌ನಗರ) - 60
- ಕ್ಯಾರೇಜ್ ಮತ್ತು ವ್ಯಾಗನ್ (ಇಜ್ಜತ್‌ನಗರ) - 64
- ಕ್ಯಾರೇಜ್ ಮತ್ತು ವ್ಯಾಗನ್ (ಲಕ್ನೋ ಜಂಕ್ಷನ್) - 155
- ಡೀಸೆಲ್ ಶೆಡ್ (ಗೊಂಡಾ) - 23
- ಗಾಡಿ ಮತ್ತು ವ್ಯಾಗನ್ (ವಾರಣಾಸಿ) -75
- ಒಟ್ಟು ಪೋಸ್ಟ್‌ಗಳು-1104
RRC NER Trades: ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಕಾರ್ಪೆಂಟರ್, ಟರ್ನರ್, ಮೆಕ್ಯಾನಿಕ್ ಡೀಸೆಲ್, ಟ್ರಿಮ್ಮರ್, ಪೇಂಟರ್, ಮೆಷಿನಿಸ್ಟ್
ಶೈಕ್ಷಣಿಕ ವಿದ್ಯಾರ್ಹತೆ: ಅಭ್ಯರ್ಥಿಗಳು ಕನಿಷ್ಠ ಶೇ 50 ಅಂಕಗಳೊಂದಿಗೆ 10ನೇ ತರಗತಿ ಸೇರಿದಂತೆ ಸಂಬಂಧಿತ ವಿಭಾಗಗಳಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.
ವಯಸ್ಸಿನ ಮಿತಿ: ವಯಸ್ಸು 12 ಜೂನ್ 2024ರಂತೆ 15 ವರ್ಷದಿಂದ 24 ವರ್ಷಗಳ ನಡುವೆ ಇರಬೇಕು.
ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.100 ಪಾವತಿಸಬೇಕು. ಮಹಿಳೆಯರು, ಅಂಗವಿಕಲರು, ಎಸ್ಟಿ, ಎಸ್ಸಿ ಸಮುದಾಯದವರಿಗೆ ಶುಲ್ಕವಿಲ್ಲ.
ತರಬೇತಿಯ ಅವಧಿ: ಆಕ್ಟ್ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷ ತರಬೇತಿ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ: 10ನೇ ತರಗತಿ ಮತ್ತು ಐಟಿಐ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
- ಮೊದಲು ನೀವು https://ner.indianrailways.gov.in/ ವೆಬ್ಸೈಟ್ಗೆ ಭೇಟಿ ನೀಡಬೇಕು.
- RRC NER Apprentice Recruitment 2024 ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರ ನಮೂದಿಸಬೇಕು.
- ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
- ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೂ ಪಾವತಿಸಬಹುದು.
- ಎಲ್ಲ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಬೇಕು.
- ಆಧಾರಕ್ಕಾಗಿ ಅಪ್ಲಿಕೇಶನ್‌ನ ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು.
ಪ್ರಮುಖ ದಿನಾಂಕಗಳು:
- ಅರ್ಜಿಯ ಸ್ವೀಕೃತಿ ಪ್ರಾರಂಭ: 12ನೇ ಜೂನ್ 2024
- ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ: 11 ಜುಲೈ 2024
ಇದನ್ನೂ ಓದಿ: ಡಿಪ್ಲೊಮಾ ಆದವರಿಗೆ HALನಲ್ಲಿದೆ ಉದ್ಯೋಗಾವಕಾಶ; 51 ಹುದ್ದೆಗಳಿಗೆ ನೇಮಕಾತಿ - HAL Recruitment