ನವದೆಹಲಿ: ಇಂದು ಬ್ಯಾಂಕಿಂಗ್, ವಿಮೆ ಮತ್ತು ಆರ್ಥಿಕ ಸೇವೆಗಳಲ್ಲಿ ಉದ್ಯೋಗದ ವಿಫುಲ ಅವಕಾಶಗಳು ಸೃಷ್ಟಿಯಾಗುತ್ತಿವೆ. ಈ ವಲಯದಲ್ಲಿ ಕೆಲಸ ಮಾಡಲು ಅಭ್ಯರ್ಥಿಗಳು ಕೂಡ ಸೂಕ್ತ ಅರ್ಹತೆ ಗಳಿಸುವುದು ಅಗತ್ಯ. ಇಂತಹ ಬಿಎಫ್ಎಸ್ಐನಲ್ಲಿ ವೃತ್ತಿ ಕಂಡುಕೊಳ್ಳಲು ಸಂವಹನ ಕೌಶಲ್ಯ (ಶೇ. 27), ಇಂಗ್ಲಿಷ್ ನಿರರ್ಗಳತೆ (ಶೇ. 10), ಮತ್ತು ಅನಾಲಿಟಿಕಲ್ ಕೌಶಲ್ಯ (ಶೇ. 8) ಅಗತ್ಯ ಬೇಡಿಕೆಯಾಗಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.
ಉದ್ಯೋಗ ನೇಮಕಾತಿ ಫ್ಲಾಟ್ಫಾರ್ಮ್ ಆಗಿರುವ ಇಂಡಿಡ್ ಪ್ರಕಾರ, ಸಂವಹನ ಎಂಬುದು ಹೆಚ್ಚಿನ ಮೌಲ್ಯಯುತ ಕೌಶಲ್ಯವಾಗಿದ್ದು, ಇದು ಈ ವಲಯದಲ್ಲಿ ಗ್ರಾಹಕ ಸಂಬಂಧಿ ಸೇವೆ ಕುರಿತು ತಿಳಿಸುತ್ತದೆ. ಕ್ಲಿಷ್ಟಕರ ಹಣಕಾಸಿನ ಮಾಹಿತಿಗಳ ಕುರಿತು ಸ್ಪಷ್ಟವಾಗಿ ಗ್ರಾಹಕರಿಗೆ ತಿಳಿಸುವುದು ಇಂದು ಅಗತ್ಯವಾಗಿದೆ.
ಬಿಎಫ್ಎಸ್ಐ ವಲಯವು ಸಹ ಅನೇಕ ರೂಪಾಂತರಗಳಿಗೆ ಒಳಗಾಗುತ್ತಿದ್ದು, ಈ ಕ್ಷೇತ್ರದ ಚಾಲನೆಯಲ್ಲಿ ಸಾಫ್ಟ್ ಸ್ಕಿಲ್ಸ್ ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ಗ್ರಾಹಕರ ತೃಪ್ತಿ ಮತ್ತು ಒಟ್ಟಾರೆ ಸಂಸ್ಥೆಯ ಯಶಸ್ಸು ಇದರಲ್ಲಿ ಅಡಗಿದೆ ಎಂದು ಇಂಡಿಡ್ನ ಸೇಲ್ಸ್ ವಿಭಾಗದ ಮುಖ್ಯಸ್ಥ ಶಶಿಕುಮಾರ್ ತಿಳಿಸಿದ್ದಾರೆ.
ಇಂಡಿಡ್ ವರದಿಯಲ್ಲಿ ಬಿಎಫ್ಎಸ್ಐಗೆ ಕೌಶಲ್ಯ ಮತ್ತು ಪ್ರಯೋಜನಗಳ ನಿರ್ದಿಷ್ಟ ಉದ್ಯೋಗಗಳ ಶೇಕಡಾವಾರು ಪ್ರಮಾಣವನ್ನು ತಿಳಿಸಲಾಗಿದೆ. ಸಾಫ್ಟ್ ಸ್ಕಿಲ್ಸ್ ಇಂದು ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದು, ಪರಿಣಾಮಕಾರಿ ಸಂವಹನ ಈ ಉದ್ಯಮದಲ್ಲಿ ಅಗತ್ಯವಾಗಿದೆ. ಗ್ರಾಹಕರೊಂದಿಗೆ ಭಾಷೆಯ ಹಿಡಿತ, ನಿರರ್ಗಳತೆ ಕೂಡ ಉದ್ಯೋಗಕ್ಕೆ ಪ್ರಮುಖವಾಗಿದೆ.
ಇನ್ನು ಬಿಎಫ್ಎಸ್ಐನಲ್ಲಿ ಬೇಕಾದ ತಾಂತ್ರಿಕ ಕೌಶಲ್ಯಗಳು ಹೀಗಿವೆ; ಅಕೌಂಟಿಂಗ್ (ಶೇ. 12), ಮೈಕ್ರೋಸಾಫ್ಟ್ ಎಕ್ಸೆಲ್ (ಶೇ. 9), ಮೈಕ್ರೋಸಾಫ್ಟ್ ಆಫೀಸ್ (ಶೇ. 9), ಸೇಲ್ಸ್ (ಶೇ. 5), ಮೈಕ್ರೋಸಾಫ್ಟ್ ಪವರ್ಪಾಯಿಂಟ್ (ಶೇ. 5), ಚಾಣಾಕ್ಷತನ (ಶೇ 4.5ರಷ್ಟು)
ಉದ್ಯೋಗಕ್ಕೆ ಬೇಕಾದ ಸಾಫ್ಟ್ ಮತ್ತು ಟೆಕ್ನಿಕಲ್ ಕೌಶಲ್ಯಗಳಲ್ಲಿನ ಉನ್ನತೀಕರಣದಿಂದ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಅಲ್ಲದೆ, ಸಂಸ್ಥೆಯ ಯಶಸ್ಸಿಗೆ ಸಮರ್ಥರಾಗಬಹುದು ಎಂದು ಅವರು ವಿವರಿಸಿದ್ದಾರೆ.
ಎಐ(ಕೃತಕ ಬುದ್ಧಿಮತ್ತೆ) ನಂತಹ ತಾಂತ್ರಿಕ ಯುಗದಲ್ಲಿ ಸಾಫ್ಟ್ ಸ್ಕಿಲ್ಗಳು ಕೂಡ ಅಗತ್ಯವಾಗಿವೆ. ಶೈಕ್ಷಣಿಕ ಅರ್ಹತೆ ಹೊರತಾಗಿ ಬ್ಯಾಂಕಿಂಗ್ ವಲಯದಲ್ಲಿ ಬೇಕಾದ ಕೌಶಲ್ಯ ಪ್ರಮುಖವಾಗಿವೆ. ಬ್ಯಾಂಕಿಂಗ್ ವಲಯವೂ ಗ್ರಾಹಕ ಸಂಬಂಧಿತ ವಲಯವಾಗಿದ್ದು, ಈ ಟೆಕ್ನಿಕಲ್ ಜೊತೆಗೆ ಸಾಫ್ಟ್ ಸ್ಕಿಲ್ಸ್ ಅಗತ್ಯವಾಗಿವೆ ವರದಿ ವಿವರಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಭಾರತದ ಬಿಎಫ್ಎಸ್ಐ ವಲಯ: ನಾಲ್ಕರಲ್ಲಿ ಓರ್ವ ಮಹಿಳೆ ಲಿಂಗ ತಾರತಮ್ಯ ಸಂತ್ರಸ್ತೆ