ಬೆಂಗಳೂರು: ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ರಾಜ್ಯ ಸರ್ಕಾರದ ಅಧೀನದ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದಲ್ಲಿ ಖಾಲಿ ಇರುವ 168 ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಕೆಗೆ ನಾಳೆ ಅಂತಿಮ ದಿನವಾಗಿದೆ. ಮಾರ್ಚ್ 19ರಿಂದ ಅಧಿಸೂಚನೆ ಹೊರಡಿಸಿದ್ದ ಹುದ್ದೆಗೆ ಈ ಹಿಂದೆ ಮೇ 3 ಅಂತಿಮ ದಿನವಾಗಿತ್ತು. ಬಳಿಕ ಈ ಹುದ್ದೆ ವಿಸ್ತರಣೆ ನಡೆಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಅಂತಿಮ ದಿನ ಮೇ 30 ಆಗಿದೆ.

ಹುದ್ದೆ ವಿವರ:
- ಸಹಾಯಕ ಫೋರ್ಮೆನ್ (ಗಣಿ) - 16
- ಸಹಾಯಕ ಫೋರ್ಮೆನ್ (ಲೋಹ ಶಾಸ್ತ್ರ) -7
- ಲ್ಯಾಬ್ ಸಹಾಯಕ- 1
- ಸಹಾಯಕ ಫೋರ್ಮೆನ್ (ಭೂ- ಗರ್ಭಶಾಸ್ತ್ರ) - 3
- ಸಹಾಯಕ ಫೋರ್ಮೆನ್ (ಡೈಮಂಡ್ ಡ್ರಿಲ್ಲಿಂಗ್) -2
- ಸಹಾಯಕ ಫೋರ್ಮೆನ್ (ಮೆಕಾನಿಕಲ್) - 19
- ಐಟಿಐ ಫಿಟ್ಟರ್ ದರ್ಜೆ 2 (ಗಣಿ ವಿಭಾಗ)- 56
- ಐಟಿಐ ಫಿಟ್ಟರ್ ದರ್ಜೆ 2 (ಲೋಹ ವಿಭಾಗ) - 4
- ಐಟಿಐ ಎಲೆಕ್ಟ್ರಿಕಲ್ ದರ್ಜೆ 2 (ತಾಂತ್ರಿಕ ವಿಭಾಗ) -4
- ಸಹಾಯಕ ಫೋರ್ಮೆನ್ (ಸಿವಿಲ್) - 1
- ಸಹಾಯಕ ಫೋರ್ಮೆನ್ (ಎಲೆಕ್ಟ್ರಿಕಲ್ ) 1
- ಸೆಕ್ಯೂರಿಟಿ ಇನ್ಸ್ಪೆಕ್ಟರ್ - 6
- ಐಟಿಐ ಫಿಟ್ಟರ್ (ಸರ್ವೆ) -2
- ಸೆಕ್ಯೂರಿಟಿ ಗಾರ್ಡ್ - 24
ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ, ಬಿಎಸ್ಸಿ, ಐಟಿಐ, ಪದವಿ, 12ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ: ಅರ್ಜಿ ಸಲ್ಲಿಸುವ ಗರಿಷ್ಠ ವಯೋಮಿತಿ 35 ವರ್ಷ. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಪ. ಜಾ, ಪ.ಪಂ, ಪ್ರವರ್ಗ 1, ನಿವೃತ್ತ ಸೇವಾ ನೌಕರರು, ವಿಕಲ ಚೇತನ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕು ಮತ್ತು ಪ್ರವರ್ಗ 2ಎ. 2ಬಿ, 3ಎ, 3 ಬಿ ಅಭ್ಯರ್ಥಿಗಳಿಗೆ 300 ರೂ. ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮೇ 30 ಆಗಿದೆ.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ huttigold.karnataka.gov.in ಇಲ್ಲಿಗೆ ಭೇಟಿ ನೀಡಿ.
ಇದನ್ನೂ ಓದಿ: ITI ಅಭ್ಯರ್ಥಿಗಳಿಗೆ ಅವಕಾಶ: ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿದೆ ಉದ್ಯೋಗ