ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 21 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ವಿವರ: ಒಟ್ಟು 21 ಹುದ್ದೆಗಳನ್ನು ಈ ಕೆಳಗಿನ ತಾಲೂಕಿನಲ್ಲಿ ಭರ್ತಿ ಮಾಡಲಾಗುವುದು.
- ಬಾಗೇಪಲ್ಲಿ - 1
- ಗುಡಿಬಂಡೆ - 1
- ಚೇಳೂರು - 4
- ಚಿಂತಾಮಣಿ- 4
- ಚಿಕ್ಕಬಳ್ಳಾಪುರ- 4
- ಶಿಡ್ಲಘಟ್ಟ- 3
- ಮಂಚೇನಹಳ್ಳಿ - 2
- ಗೌರಿಬಿದನೂರು -2
ವಿದ್ಯಾರ್ಹತೆ: ಪಿಯುಸಿ ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣಪತ್ರ ಪಡೆದಿರಬೇಕು. ಕನಿಷ್ಠ 3 ತಿಂಗಳ ಕಂಪ್ಯೂಟರ್ ಕೋರ್ಸ್ ಉತ್ತೀರ್ಣರಾಗಿರಬೇಕು. ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸದೇ ಇದ್ದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.
ವಿಶೇಷ ಸೂಚನೆ: ಅಭ್ಯರ್ಥಿಗಳು ಸಂಬಂಧಪಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಯಾಗಿರಬೇಕು.
ವೇತನ: ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರಿಗೆ ಸರ್ಕಾರ ನಿಗದಿಸಿರುವ ಗೌರವ ಸಂಭಾವನೆ.
ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 35 ವರ್ಷ ವಯೋಮಿತಿ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾತಿ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷದವರೆಗೆ ವಯೋಮಿತಿ ಸಡಿಲಿಕೆ ಇದೆ.
ಆಯ್ಕೆ: ಮೆರಿಟ್ ಆಧಾರದ ಮೇಲೆ ದಾಖಲಾತಿ ಪರಿಶೀಲನೆ ನಡೆಸಿ ಬಳಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 300 ರೂ. ಹಾಗೂ ಪ.ಜಾ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ 200 ರೂ. ವಿಶೇಷಚೇತನ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವಿದೆ.
ಅರ್ಜಿ ಸಲ್ಲಿಕೆಗೆ ಕಡೆಯ ದಿನ ಸೆಪ್ಟೆಂಬರ್ 21. ಈ ಕುರಿತ ಹೆಚ್ಚಿನ ಮಾಹಿತಿಗೆ chikkaballapur.nic.in ಇಲ್ಲಿಗೆ ಭೇಟಿ ನೀಡಿ
ಇದನ್ನೂ ಓದಿ: ಪಂಚಾಯತ್ ರಾಜ್ನಲ್ಲಿ ಪದವಿ ಮಾಡಿದ್ದೀರಾ? ತಿಂಗಳಿಗೆ 60 ಸಾವಿರ ರೂಪಾಯಿ ವೇತನ!