ಬೆಂಗಳೂರು: 1,000 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳಿಗೆ ನಡೆಸಲಾದ ಲಿಖಿತ ಪರೀಕ್ಷೆ ಅಂತಿಮ ಅಂಕ ಪಟ್ಟಿಯನ್ನು ಕೆಇಎ ಬಿಡುಗಡೆ ಮಾಡಿದೆ. ಹಾಗೇ ಜಿಲ್ಲಾವಾರು ಅಂಕ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣದ ಮೂಲಕ ಜಿಲ್ಲಾವಾರುಗಳ ಪಟ್ಟಿ ಕೂಡ ವೀಕ್ಷಣೆ ಮಾಡಬಹುದಾಗಿದೆ.
ಈ ಅಂತಿಮ ಸ್ಕೋರ್ ಪಟ್ಟಿ ಆಯ್ಕೆ ಆಧಾರದ ಮೇಲೆ ಅಭ್ಯರ್ಥಿಗಳ ಮೂಲ ದಾಖಲೆ ಪರಿಶೀಲನೆ ನಡೆಸಲಾಗುವುದು. ಈ ಪ್ರಕ್ರಿಯೆ ಬಳಿಕ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು.
ಕಳೆದ ತಿಂಗಳು ಕೀ ಉತ್ತರ ಪ್ರಕಟ: ಕಂದಾಯ ಇಲಾಖೆಯಲ್ಲಿನ 1,000 ಗ್ರಾಮ ಆಡಳಿತ ಹುದ್ದೆಗಳಿಗೆ ಸೆಪ್ಟೆಂಬರ್ 29 ರಂದು ರಾಜ್ಯದೆಲ್ಲೆಡೆ ಪರೀಕ್ಷೆ ನಡೆಸಲಾಗಿತ್ತು. ಈ ಹುದ್ದೆಗಳ ಕಡ್ಡಾಯ ಕನ್ನಡ ಪರೀಕ್ಷೆಯ ಕೀ ಉತ್ತರಗಳನ್ನು ಅಕ್ಟೋಬರ್ 10ರಂದು ಪ್ರಕಟಿಸಲಾಗಿತ್ತು.
ಅಕ್ಟೋಬರ್ 27ರಂದು ಗ್ರಾಮಾಡಳಿತ ಪರೀಕ್ಷೆಯ ಪತ್ರಿಕೆ- 1 ಮತ್ತು ಪತ್ರಿಕೆ 2ರ ಪರೀಕ್ಷೆ ನಡೆದಿತ್ತು. ಇದರ ಕೀ ಉತ್ತರವನ್ನು ನವೆಂಬರ್ 27ರಂದು ಪ್ರಕಟಿಸಲಾಗಿತ್ತು.
ಇದೀಗ ಕಡ್ಡಾಯ ಕನ್ನಡ ಮತ್ತು ಪತ್ರಿಕೆ- 1 ಮತ್ತು ಪತ್ರಿಕೆ 2ರಲ್ಲಿ ಶೇ 35ರಷ್ಟು ಅಂಕಗಳನ್ನು ಗಳಿಸಿ ಅರ್ಹರಾದವರ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಪರೀಕ್ಷೆ ಎದುರಿಸಿದ್ದ 6 ಲಕ್ಷ ಅಭ್ಯರ್ಥಿಗಳು: 1,000 ಹುದ್ದೆಗಳ ಈ ಪರೀಕ್ಷೆ ರಾಜ್ಯದೆಲ್ಲಡೆ ಅಂದಾಜು ಸುಮಾರು 6 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದರು.
ವಯೋಮಿತಿ ಸಡಿಲಿಕೆಯೊಂದಿಗೆ ನಡೆದ ಪರೀಕ್ಷೆ: 1000 ಗ್ರಾಮ ಆಡಳಿತಾಧಿಕಾರಿಗಳ ಹುದ್ದೆ ಭರ್ತಿಗೆ 2024ರ ಫೆಬ್ರವರಿಯಲ್ಲಿ ಕೆಇಎ ಮೊದಲ ಅಧಿಸೂಚನೆ ಪ್ರಕಟಿಸಿತ್ತು. ಬಳಿಕ ರಾಜ್ಯ ಸರ್ಕಾರ ಆದೇಶದಂತೆ ಮೂರು ವರ್ಷ ವಯೋಮಿತಿ ಸಡಿಲಿಕೆಯೊಂದಿಗೆ ಸೆಪ್ಟೆಂಬರ್ನಲ್ಲಿ ಪರಿಷ್ಕೃತ ಅರ್ಜಿ ಪ್ರಕಟಿಸಿತ್ತು.
ಅಭ್ಯರ್ಥಿಗಳು ಫಲಿತಾಂಶವನ್ನು ಪ್ರಾಧಿಕಾರದ ಅಧಿಕೃತ ಜಾಲತಾಣ cetonline.karnataka.gov.in/kea/vacrec24 ಫಲಿತಾಂಶ ವೀಕ್ಷಿಸಬಹುದು.
ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ