ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪರಿಷ್ಕೃತ ಅರ್ಜಿ ಆಹ್ವಾನಿಸಿದೆ. ಕಳೆದ ಮಾರ್ಚ್ನಲ್ಲಿ ಹೊರಡಿಸಲಾದ ಅಧಿಸೂಚನೆಗೆ ವಯೋಮಿತಿ ಸಡಿಲಿಸಿ ಹೊಸ ಅಧಿಸೂಚನೆ ಪ್ರಕಟಿಸಲಾಗಿದೆ.
ಹುದ್ದೆಗಳ ವಿವರ:
ಸೀನಿಯರ್ ಪ್ರೋಗ್ರಾಮರ್ - 2
ಜೂನಿಯರ್ ಪ್ರೋಗ್ರಾಮರ್ - 2
ಜೂನಿಯರ್ ಕನ್ಸೋಲ್ ಆಪರೇಟರ್ - 4
ಕಂಪ್ಯೂಟರ್ ಆಪರೇಟರ್ - 4
ಸಹಾಯಕರು - 3
ಕಿರಿಯ ಸಹಾಯಕರು - 8
ದತ್ತಾಂಶ ನಮೂದು ಸಹಾಯಕರು/ ಬೆರಳಚ್ಚುಗಾರರು -5
ವಿದ್ಯಾರ್ಹತೆ:
- ಸೀನಿಯರ್ ಪ್ರೋಗ್ರಾಮರ್ - ಸಿಎಸ್, ಐಎಸ್ ಅಥವಾ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಷನ್ನಲ್ಲಿ ಇಂಜಿನಿಯರಿಂಗ್ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷದ ಅನುಭವ.
- ಜೂನಿಯರ್ ಪ್ರೋಗ್ರಾಮರ್ ಸಿಎಸ್, ಐಎಸ್ ಅಥವಾ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಷನ್ನಲ್ಲಿ ಇಂಜಿನಿಯರಿಂಗ್ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷದ ಅನುಭವ.
- ಜೂನಿಯರ್ ಕನ್ಸೋಲ್ ಆಪರೇಟರ್ ಸಿಎಸ್, ಐಎಸ್ ಅಥವಾ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಷನ್ನಲ್ಲಿ ಇಂಜಿನಿಯರಿಂಗ್ ಪದವಿ. ಸಂಬಂಧಿತ ಕ್ಷೇತ್ರದಲ್ಲಿ ಒಂದು ವರ್ಷ ಅನುಭವ
- ಕಂಪ್ಯೂಟರ್ ಆಪರೇಟರ್ ಬಿಸಿಎ ಅಥವಾ ಸಿಎಸ್, ಎಲೆಕ್ಟ್ರಾನಿಕ್ಸ್ನಲ್ಲಿ ಬಿಎಸ್ಸಿ ಪದವಿ
- ಸಹಾಯಕರು ಕಾನೂನು- ಪದವಿ
- ಕಿರಿಯ ಸಹಾಯಕರು- ಪದವಿ
- ದತ್ತಾಂಶ ನಮೂದು ಸಹಾಯಕರು/ಬೆರಳಚ್ಚುಗಾರರು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ, ಕೆಎಸ್ಇಇಬಿಯ ಬೆರಳಚ್ಚುಗಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ವಯೋಮಿತಿ: ಗರಿಷ್ಠ ವಯೋಮಿತಿ 38 ವರ್ಷ. ಪ.ಜಾ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ 5 ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಆನ್ಲೈನ್ ಮೂಲಕ. ವಿಶೇಷಚೇತನ ಅಭ್ಯರ್ಥಿಗಳಿಗೆ 250 ರೂ., ಪ.ಜಾ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ 500 ರೂ. ಇತರೆ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕವಿದೆ.
ಆಯ್ಕೆ ಪ್ರಕ್ರಿಯೆ: ಸ್ಪರ್ಧಾತ್ಮಕ ಪರೀಕ್ಷೆ.
ಡಿಸೆಂಬರ್ 4ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಜನವರಿ 3 ಕಡೇಯ ದಿನ.
ಈ ಕುರಿತು ಹೆಚ್ಚಿನ ಮಾಹಿತಿಗೆ kea.kar.nic.in ಅಥವಾ etonline.karnataka.gov.in/kea ಇಲ್ಲಿಗೆ ಭೇಟಿ ನೀಡಿ.
ಅರ್ಜಿ ಸಲ್ಲಿಕೆಗೆ: cetonline.karnataka.gov.in/kearecruitment_Legislative_Council/forms/Registration.aspx ಈ ಲಿಂಕ್ ಕ್ಲಿಕ್ ಮಾಡಬಹುದು.
ಇದನ್ನೂ ಓದಿ: ಸೆಂಟ್ರಲ್ ಸಿಲ್ಕ್ ಬೋರ್ಡ್: ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ