ETV Bharat / education-and-career

ಕೆಇಎ ನೇಮಕಾತಿ: ಪ್ರೋಗ್ರಾಮರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಇಮೇಲ್​ ಮೂಲಕ ಮಾರ್ಚ್​ 12ರೊಳಗೆ ಅರ್ಜಿ ಸಲ್ಲಿಸಬೇಕಿದೆ.

KEA Notification For senior and junior programmer post

author img

By ETV Bharat Karnataka Team

Published : Mar 6, 2024, 5:10 PM IST

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಪ್ರೋಗ್ರಾಮರ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳ ಭರ್ತಿ ನಡೆಸಲಾಗುವುದು. ಒಂದು ವರ್ಷದ ಅವಧಿಗೆ ಈ ಹುದ್ದೆ ನೇಮಕಾತಿ ನಡೆಸಲಾಗುವುದು. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಈ ಹುದ್ದೆ ವಿಸ್ತರಣೆ ನಡೆಸಲಾಗುವುದು.

ಹುದ್ದೆ ವಿವರ:

  • ಸೀನಿಯರ್​ ಪ್ರೋಗ್ರಾಮರ್​ - 4
  • ಪ್ರೋಗ್ರಾಮರ್​ ​​- 1
  • ಜೂನಿಯರ್​ ಪ್ರೋಗ್ರಾಮರ್ -​ 5

ವಿದ್ಯಾರ್ಹತೆ: ಸೀನಿಯರ್​ ಪ್ರೋಗ್ರಾಮರ್​ ಹುದ್ದೆಗೆ ಅಭ್ಯರ್ಥಿಗಳು ಸಿಎಸ್​ ಅಥವಾ ಐಟಿಯಲ್ಲಿ ಬಿಇ ಬಿ.ಟೆಕ್​ ಪದವಿಯನ್ನು ಪಡೆದಿರಬೇಕು. 5 ರಿಂದ 10 ವರ್ಷದ ಹುದ್ದೆ ಅನುಭವ ಹೊಂದಿರಬೇಕು.

ಪ್ರೋಗ್ರಾಮರ್​ ಅಥವಾ ಜೂನಿಯರ್​ ಪ್ರೋಗ್ರಾಮರ್​ ಹುದ್ದೆಗೆ ಅಭ್ಯರ್ಥಿಗಳು ಸಿಎಸ್​, ಐಟಿಯಲ್ಲಿ ಎಂಸಿಎ, ಎಂಟೆಕ್​, ಬಿಇ, ಬಿ.ಟೆಕ್​ ಪದವಿಯನ್ನು ಪಡೆದಿರಬೇಕು.

ಅಭ್ಯರ್ಥಿಗಳು ಸರಾಗವಾಗಿ ಕನ್ನಡವನ್ನು ಬರೆಯುವ ಮತ್ತು ಮಾತನಾಡುವ ಸಾಮರ್ಥ್ಯವನ್ನು ಹೊಂದಿರಬೇಕು.

ಅಧಿಸೂಚನೆ
ಅಧಿಸೂಚನೆ

ವೇತನ:

  • ಸೀನಿಯರ್​ ಪ್ರೋಗ್ರಾಮರ್​ - 1,00,000 -2,00,000
  • ಪ್ರೋಗ್ರಾಮರ್​ ​​- 45,000
  • ಜೂನಿಯರ್​ ಪ್ರೋಗ್ರಾಮರ್​ - 25,000

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಈ ಹುದ್ದೆಗೆ ಇ-ಮೇಲ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. keaopportunities@gmail.com ಈ ಇಮೇಲ್​ ವಿಳಾಸಕ್ಕೆ ಅಭ್ಯರ್ಥಿಗಳು ತಮ್ಮ ರೆಸ್ಯೂಮ್​ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇ-ಮೇಲ್​ ಮೂಲಕ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಸೂಚಿಸಲಾಗುವುದು.

ಈ ಹುದ್ದೆಗೆ ಮಾರ್ಚ್​ 3 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮಾರ್ಚ್​ 12 ಆಗಿದೆ.

ಈ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ kea.kar.nic.in ಇಲ್ಲಿಗೆ ಭೇಟಿ ನೀಡಿ.

ಬಿಇಎಲ್​ನಲ್ಲಿ ಸಹಾಯಕ ಇಂಜಿನಿಯರ್​ ಹುದ್ದೆ; ಭಾರತ್​ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್​ನಲ್ಲಿ 24 ಹಿರಿಯ ಸಹಾಯಕ ಇಂಜಿನಿಯರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶಾಖಪಟ್ಟಣಂ, ಕಾರವಾರ, ಕೊಚ್ಚಿ, ಗುವಾಹಟಿ ಕಚೇರಿಗೆ ನೇಮಕಾತಿ ನಡೆಯಲಿದೆ. ಡಿಪ್ಲೊಮಾ ಪದವೀಧರರು ಅರ್ಜಿ ಸಲ್ಲಿಸಬಹುದು. ಗರಿಷ್ಠ 50 ವರ್ಷ ವಯೋಮಿತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಬಿಇಎಲ್​ ವೆಬ್​ಸೈಟ್​ನಲ್ಲಿ ಸಿಗುವ ನಿಗದಿತ ಅರ್ಜಿ ತುಂಬಿ, ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕಿದೆ.

ಅಸಿಸ್ಟೆಂಟ್​ ಮ್ಯಾನೇಜರ್​​, ಎಚ್​ಆರ್​​, ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​​, ಮಿಲಿಟರಿ ಕಮ್ಯೂನಿಕೇಷನ್​ ಮತ್ತು ಎನ್​ಡಬ್ಲ್ಯೂಸಿಎಸ್​-ಎಸ್​ಬಿಯು, ಜಾಲಹಳ್ಳಿ ಪೋಸ್ಟ್​, ಬೆಂಗಳೂರು-560013.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕಡೆಯ ದಿನ ಮಾರ್ಚ್​​ 20. ಹೆಚ್ಚಿನ ಮಾಹಿತಿಗೆ bel-india.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಬಿಡಿಎಯಲ್ಲಿ ಉದ್ಯೋಗಾವಕಾಶ: ಎಫ್​ಡಿಎ, ಎಸ್​ಡಿಎ ಹುದ್ದೆಗಳ ಭರ್ತಿಗೆ KEA ಅಧಿಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.