ETV Bharat / education-and-career

ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ - TET - TET

1 ರಿಂದ 8ನೇ ತರಗತಿಗಳಿಗೆ ಶಿಕ್ಷಕರಾಗಿ ನೇಮಕಗೊಳ್ಳಲು ಟಿಇಟಿ ಅರ್ಹತೆ ಮುಖ್ಯವಾಗಿದೆ.

karnataka-school-education-department-notification-for-kartet-2024

author img

By ETV Bharat Karnataka Team

Published : Apr 18, 2024, 5:01 PM IST

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ 2024ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಅರ್ಜಿ ಆಹ್ವಾನಿಸಿದೆ. ಶಿಕ್ಷಣ ಇಲಾಖೆ ನಡೆಸುವ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮೇ 5 ಕಡೇಯ ದಿನ.

ವಿದ್ಯಾರ್ಹತೆ: ಪತ್ರಿಕೆ 1 (1ರಿಂದ 5ನೇ ತರಗತಿ). ಪಿಯುಸಿ ಪರೀಕ್ಷೆಯಲ್ಲಿ ಶೇ.50ರಷ್ಟು ಅಂಕ ಗಳಿಸಿರಬೇಕು. ಎರಡು ವರ್ಷದ ಡಿ.ಎಡ್​ ಕೋರ್ಸ್‌ನಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ನಾಲ್ಕು ವರ್ಷದ ಬ್ಯಾಚುಲರ್​ ಇನ್​ ಎಲಿಮೆಂಟರಿ ಎಜುಕೇಶನ್​ ಅಥವಾ ಎರಡು ವರ್ಷದ ಡಿಪ್ಲೊಮೊ ಇನ್​ ಎಜುಕೇಶನ್​ ಅಥವಾ ಬಿ.ಎಡ್​​ ಪದವಿ ಪೂರ್ಣಗೊಳಿಸರಬೇಕು. ಈ ಕೋರ್ಸ್​​ಗಳ ಪ್ರವೇಶಕ್ಕೆ ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು ಕೂಡಾ ಅರ್ಜಿ ಸಲ್ಲಿಸಬಹುದು.

ಪತ್ರಿಕೆ 2: ಪದವಿಯಲ್ಲಿ ಕನಿಷ್ಠ ಶೇ.50ರಷ್ಟು ಅಂಕ ಗಳಿಸಿರಬೇಕು. ಎರಡು ವರ್ಷದ ಡಿಎಲ್​.ಎಡ್​​ ಅಥವಾ ಬಿ.ಇಡಿ ಪದವಿ ಅಥವಾ ನಾಲ್ಕು ವರ್ಷದ ಬ್ಯಾಚುಲರ್​ ಇನ್​ ಎಲಿಮೆಂಟರಿ ಎಜುಕೇಶನ್​ ಅಥವಾ ಎರಡು ವರ್ಷದ ಬಿ.ಇಡಿ (ವಿಶೇಷ ಶಿಕ್ಷಣ) ತೇರ್ಗಡೆ ಹೊಂದಿದ ಹಾಗೂ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಧಿಸೂಚನೆ
ಅಧಿಸೂಚನೆ

ಅರ್ಜಿ ಶುಲ್ಕ: ವಿಶೇಷಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಇದೆ.

ಪತ್ರಿಕೆ-1: ಸಾಮಾನ್ಯ ವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು- 700 ರೂ ಹಾಗು ಪ.ಜಾ, ಪ. ವರ್ಗ, ಪ್ರವರ್ಗ-1 - 350 ರೂ

ಪತ್ರಿಕೆ-2: ಸಾಮಾನ್ಯ ವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು- 1,000 ರೂ ಹಾಗು ಪ.ಜಾ, ಪ. ವರ್ಗ, ಪ್ರವರ್ಗ-1 ಅಭ್ಯರ್ಥಿಗಳಿಗೆ 500 ರೂ

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಏಪ್ರಿಲ್​ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮೇ 5 ಕಡೇಯ ದಿನ.

ಪ್ರವೇಶ ಪತ್ರ: ಪ್ರವೇಶ ಪತ್ರವನ್ನು ಜೂನ್​ 20ರಿಂದ ಜೂನ್​ 2ರವರೆಗೆ ಇಲಾಖೆಯ ವೆಬ್​ಸೈಟ್​​ನಲ್ಲಿ ಪಡೆದುಕೊಳ್ಳಬಹುದು.

ಪರೀಕ್ಷಾ ದಿನಾಂಕ: ಜೂನ್​ 30ರಂದು ಎರಡೂ ಪತ್ರಿಕೆಗಳಿಗೆ ಪರೀಕ್ಷೆ ನಿಗದಿಸಲಾಗಿದೆ. ಮೊದಲ ಅವಧಿಯಲ್ಲಿ ಪತ್ರಿಕೆ 1 ಮತ್ತು ಮಧ್ಯಾಹ್ನದ ಅವಧಿಯಲ್ಲಿ ಪತ್ರಿಕೆ 2ರ ಪರೀಕ್ಷೆ ನಡೆಯಲಿದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾದ ಅರ್ಜಿ ಸಮೂನೆಯನ್ನು ಭರ್ತಿ ಮಾಡಬೇಕು. ಅರ್ಜಿ ಭರ್ತಿಗೂ ಮುನ್ನ ಸಂಪೂರ್ಣ ಅಧಿಸೂಚನೆಯನ್ನು ಪರಿಶೀಲಿಸಿ ಮುಂದುವರೆಯಬೇಕು. ಬಳಿಕ ಅಗತ್ಯ ವಿವರಗಳನ್ನು ತುಂಬಬೇಕು. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್​ಸೈಟ್ schooleducation.kar.nic.in​ ಗೆ ಭೇಟಿ ನೀಡಿ.

ಇದನ್ನೂ ಓದಿ: IIT, NIT, ಕೇಂದ್ರೀಯ ವಿವಿಗಳಿಂದ ಬಿಎ-ಬಿಎಡ್​, ಬಿಎಸ್ಸಿ-ಬಿಎಡ್ ಕೋರ್ಸ್‌ ಮಾಡುವ ಅವಕಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.