ETV Bharat / education-and-career

ಲೈಬ್ರರಿ ಸೈನ್ಸ್​ ಪದವಿ ಆದವರಿಗೆ ಬೆಂಗಳೂರಿನ ಐಐಎಸ್ಸಿಯಲ್ಲಿದೆ ಉದ್ಯೋಗಾವಕಾಶ - Bengaluru IISC and Coffee board

author img

By ETV Bharat Karnataka Team

Published : May 10, 2024, 12:45 PM IST

ಬೆಂಗಳೂರಿನ ಐಐಎಸ್ಸಿ ಮತ್ತು ಕಾಫಿ ಬೋರ್ಡ್​ನಲ್ಲಿ ಪದವೀಧರರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

Job opportunity for Degree holders in Bengaluru IISC and Coffee board
Job opportunity for Degree holders in Bengaluru IISC and Coffee board (File Photo)

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಲೈಬ್ರರಿ ಅಂಡ್​ ಇನ್ಫಾರ್ಮೆಷನ್​ ಮ್ಯಾನೇಜ್​ಮೆಂಟ್​ ಪ್ರಾಜೆಕ್ಟ್​ ಟ್ರೈನಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆ ವಿವರ: ಒಟ್ಟು ಆರು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ: ಅಭ್ಯರ್ಥಿಗಳು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಅಥವಾ ಅದಕ್ಕೆ ತತ್ಸಮಾನದ ವಿಷಯದಲ್ಲಿ ಪದವಿಯನ್ನು 2023 -2024ರ ವರ್ಷದಲ್ಲಿ ಉತ್ತೀರ್ಣರಾಗಿರಬೇಕು.

ವೇತನ: ಮಾಸಿಕ 25 ಸಾವಿರ ರೂ

ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 26 ವರ್ಷ ಮೀರಬಾರದು.

ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಎರಡಯ ವರ್ಷದ ಅವಧಿಗೆ ಭರ್ತಿ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಐಐಎಸ್ಸಿಯ ಅಧಿಕೃತ ಜಾಲತಾಣದಲ್ಲಿ recruiitment.iisc.ac.in/temprary_positions/ ಇಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕಿದೆ.

ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ನಡೆಸಲಾಗುವುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನ ಮೇ 20 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು iisc.ac.in ಇಲ್ಲಿಗೆ ಭೇಟಿ ನೀಡಿ.

ಐಐಎಸ್ಸಿ ಅಧಿಸೂಚನೆ
ಐಐಎಸ್ಸಿ ಅಧಿಸೂಚನೆ (ಐಐಎಸ್ಸಿ ವೆಬ್​ಸೈಟ್​​)

ಬೆಂಗಳೂರಿನ ಕಾಫಿ ಬೋರ್ಡ್​ನಲ್ಲಿ ಹುದ್ದೆ:

ಬೆಂಗಳೂರಿನಲ್ಲಿರುವ ಕಾಫಿ ಬೋರ್ಡ್​​ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಕಾಲ್​ ಸೆಂಟರ್​​ ಆಪರೇಟರ್​ ಹುದ್ದೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪದವಿ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ 11 ತಿಂಗಳ ಅವಧಿಗೆ ಆಯ್ಕೆ ಮಾಡಲಾಗುವುದು.

ಪದವಿ ಆಗಿರುವ ಕನ್ನಡ ಮತ್ತು ಇಂಗ್ಲಿಷ್​ ಭಾಷೆಯಲ್ಲಿ ಉತ್ತಮ ಹಿಡಿತ ಹೊಂದಿರುವ, ಸಾಮಾನ್ಯ ಕಂಪ್ಯೂಟರ್​ ಜ್ಞಾನ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗೆ ಮಾಡಿದ 15 ರಿಂದ 18 ಸಾವಿರ ವೇತನ ನಿಗದಿಸಲಾಗಿದೆ.

ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಸಿವಿಯನ್ನು hpriyanka17997@gmail.com ಇಲ್ಲಿಗೆ ಕಳುಹಿಸಬೇಕು. ಅರ್ಜಿ ಸಲ್ಲಿಕೆಗೆ ಕಡೇಯ ದಿನ ಮೇ 19 ಆಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ indiacoffee.org ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ನೌಕಾ ಸೇನೆಯಲ್ಲಿ ನೇಮಕಾತಿ; ಪಿಯುಸಿ ಆಗಿದ್ರೆ, ಅಗ್ನಿವೀರ್​ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.