ETV Bharat / education-and-career

ಎಸ್​ಎಸ್​ಸಿ ನೇಮಕಾತಿ: 968 ಜೆಇ ಹುದ್ದೆಗಳಿಗೆ ಅರ್ಜಿ ಆಹ್ವಾನ - SSC RECRUITMENT - SSC RECRUITMENT

ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿರುವ ಸಿವಿಲ್​ ಮತ್ತು ಮೆಕ್ಯಾನಿಕಲ್​ ಹಾಗೂ ಎಲೆಕ್ಟ್ರಾನಿಕ್​ ಇಂಜಿನಿಯರಿಂಗ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

JE recruitment notification By Staff selection Commission

author img

By ETV Bharat Karnataka Team

Published : Mar 29, 2024, 1:26 PM IST

Updated : Mar 30, 2024, 7:31 PM IST

ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗದಿಂದ (ಎಸ್ಎಸ್‌ಸಿ) 968 ಜೂನಿಯರ್​ ಇಂಜಿನಿಯರ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಸಿವಿಲ್​ ಮತ್ತು ಮೆಕ್ಯಾನಿಕಲ್​ ಹಾಗೂ ಎಲೆಕ್ಟ್ರಾನಿಕ್​ ಇಂಜಿನಿಯರಿಂಗ್​ ಅಥವಾ ಡಿಪ್ಲೊಮಾ ಪದವೀಧರರು ಅರ್ಜಿ ಸಲ್ಲಿಸಬಹುದು. ಭಾರತಾದ್ಯಂತ ನೇಮಕಾತಿ ನಡೆಯಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳ ವಿವರ:

  • ಬಾರ್ಡರ್​ ರೋಡ್ಸ್​ ಆರ್ಗನೈಸೇಷನ್ - 475 ಹುದ್ದೆಗಳು
  • ಬ್ರಹ್ಮಪುತ್ರ ಬೋರ್ಡ್​​, ಜಲಶಕ್ತಿ ಸಚಿವಾಲಯ -2
  • ಸೆಂಟ್ರಲ್​ ಪಬ್ಲಿಕ್​ ವರ್ಕ್ಸ್​ ಡಿಪಾರ್ಟ್​​ಮೆಂಟ್​ - 338
  • ಸೆಂಟ್ರಲ್​ ವಾಟರ್​ ಕಮಿಷನ್​ -132
  • ಸೆಂಟ್ರಲ್​ ಪಬ್ಲಿಕ್​ ವರ್ಕ್ಸ್​ ಡಿಪಾರ್ಟ್​ಮೆಂಟ್ - 338
  • ಸೆಂಟ್ರಲ್​ ವಾಟರ್​​ ಪವರ್​​​ ರಿಸರ್ಚ್​​ ಸ್ಟೇಷನ್​ - 5
  • ಡಿಜಿಕ್ಯೂಎಲ್​-ಎನ್​​ಎವಿಎಎಲ್​, ರಕ್ಷಣಾ ಸಚಿವಾಲಯ - 6
  • ಫರಕ್ಕ ಬ್ಯಾರೇಜ್​​ ಪ್ರೋಜೆಕ್ಟ್​ , ಜಲಶಕ್ತಿ ಸಚಿವಾಲಯ - 4
  • ಎನ್​ಟಿಆರ್​ಒ - 6

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಬಿಇ ಅಥವಾ ಬಿ.ಟೆಕ್​ ಅಥವಾ ಡಿಪ್ಲೊಮಾ ಇಂಜಿನಿಯರಿಂಗ್​ ಪದವಿ.

ವಯೋಮಿತಿ: ಕನಿಷ್ಠ ವಯೋಮಿತಿ 18. ಗರಿಷ್ಠ 32. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 5ರಿಂದ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ವೇತನ: ಮಾಸಿಕ 35,400 ರೂ.ನಿಂದ 1,12,400 ರೂಪಾಯಿ.

ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್​ ಆಧಾರಿತ ಪರೀಕ್ಷೆ ನಡೆಸಿ ಆಯ್ಕೆ ನಡೆಯಲಿದೆ. ಇದರಲ್ಲಿ ಎರಡು ಪತ್ರಿಕೆಗಳಿದ್ದು, ಮೊದಲ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ ಮತ್ತು ಬುದ್ಧಮಟ್ಟ(IQ) ಪರೀಕ್ಷೆ ನಡೆಯಲಿದೆ. ಎರಡನೇ ಪತ್ರಿಕೆ ನಿರ್ದಿಷ್ಟ ಪರೀಕ್ಷೆ. ಅಂತಿಮ ಹಂತದಲ್ಲಿ ಸಂದರ್ಶನ ನಡೆಯಲಿದೆ.

ಮಾರ್ಚ್​ 28 ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್​ 18. ಅರ್ಜಿ ಶುಲ್ಕ ಪಾವತಿಗೆ ಕಡೆಯ ದಿನಾಂಕ ಏಪ್ರಿಲ್​ 19. ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ssc.nic.in ಜಾಲತಾಣಕ್ಕೆ ಭೇಟಿ ನೀಡಿ.

ಬಳ್ಳಾರಿಯ ಕೆಐಒಸಿಎಲ್​ನಲ್ಲಿ ವಾಕ್​ ಇನ್​ ಇಂಟರ್​ವ್ಯೂ: ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್​​ನಲ್ಲಿ 15 ಹುದ್ದೆಗೆ ವಾಕ್​ ಇನ್​ ಇಂಟರ್​ವ್ಯೂ ನಡೆಯಲಿದೆ. ಭೂ ವಿಜ್ಞಾನಿ, ಗಣಿ ಸಮೀಕ್ಷಕ ಹುದ್ದೆಗಳ ಭರ್ತಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಏಪ್ರಿಲ್​ 5ರಂದು ಬಳ್ಳಾರಿಯಲ್ಲಿ ನಡೆಯಲಿರುವ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು.

30 ರಿಂದ 40 ವರ್ಷದ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಸ್ವವಿವರ ಒಳಗೊಂಡ ರೆಸ್ಯೂಮ್​, ಶೈಕ್ಷಣಿಕ ದಾಖಲಾತಿಯೊಂದಿಗೆ ಈ ವಿಳಾಸದಲ್ಲಿ ನೇರ ಸಂದರ್ಶನಕ್ಕೆ ಭಾಗಿಯಾಗಬಹುದು. ಕೆಐಒಸಿಎಲ್​ ಲಿ. ಸಂಡೂರ್​ ಪ್ರೊಜೆಕ್ಟ್​​ ಆಫೀಸ್​, ಲಕ್ಷ್ಮೀಪುರ, ಸಂಡೂರು -583119, ಬಳ್ಳಾರಿ ಜಿಲ್ಲೆ.

ಈ ಕುರಿತ ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು kioclltd.in ಲತಾಣಕ್ಕೆ ಭೇಟಿ ನೀಡಿ.

ಇದನ್ನೂ ಓದಿ: ಆಗ್ನೇಯ ಮಧ್ಯ ರೈಲ್ವೆಯಲ್ಲಿ 733 ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ - 733 Apprentice Job Recruitment

Last Updated : Mar 30, 2024, 7:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.