ETV Bharat / education-and-career

ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ; 304 ಹುದ್ದೆಗಳ ವಿವರ ಇಲ್ಲಿದೆ - IAF Recruitment

author img

By ETV Bharat Karnataka Team

Published : May 31, 2024, 2:14 PM IST

ಭಾರತೀಯ ವಾಯುಪಡೆಯಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

Indian Air Force Notification for AFCAT 2024 Recruitment
ಭಾರತೀಯ ವಾಯುಸೇನೆ (IANS)

ಬೆಂಗಳೂರು: ಭಾರತೀಯ ವಾಯು ಸೇನೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬ ಕನಸು ಹೊಂದಿರುವ ಯುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಇಲ್ಲಿದೆ. ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ (ಎಎಫ್​ಸಿಎಟಿ)ಗೆ ಅರ್ಜಿ ಆಹ್ವಾನಿಸಲಾಗಿದೆ. ಫ್ಲೈಯಿಂಗ್​ ಬ್ರಾಂಚ್​ ಮತ್ತು ಗ್ರೌಂಡ್​ ಡ್ಯೂಟಿಯ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅವಿವಾಹಿತ ಯುವಕ ಮತ್ತು ಯುವತಿಯರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಎನ್​ಸಿಸಿ ಪ್ರವೇಶಾತಿ ಮೂಲಕ ಬರುವ ಅಭ್ಯರ್ಥಿಗಳಿಗೆ ಹಾರಾಟ ವಿಭಾಗದಲ್ಲಿ ಶೇ 10ರಷ್ಟು ಮೀಸಲಾತಿ ಲಭ್ಯವಿದೆ.

ಹುದ್ದೆಗಳ ವಿವರ: ಒಟ್ಟು 304 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಯುವತಿಯರಿಗೆ ನಿರ್ದಿಷ್ಟ ಸಂಖ್ಯೆಯ ಹುದ್ದೆಗಳನ್ನು ಮೀಸಲಿಡಲಾಗಿದ್ದು, ಇದರ ವಿವರವನ್ನು ಅಧಿಕೃತ ಜಾಲತಾಣದ ಮೂಲಕ ಪಡೆಯಬಹುದಾಗಿದೆ.

ಫ್ಲೈಯಿಂಗ್​ ಬ್ರಾಂಚ್​ - 29

ಗ್ರೌಂಡ್​ ಡ್ಯೂಟಿ (ತಾಂತ್ರಿಕ) 56

ಗ್ರೌಂಡ್​ ಡ್ಯೂಟಿ (ತಾಂತ್ರಿಕೇತರ ) 119

ಅಧಿಸೂಚನೆ
ಅಧಿಸೂಚನೆ (ಭಾರತೀಯ ವಾಯು ಸೇನೆ)

ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಅಥವಾ ಶೇ 60ರಷ್ಟು ಅಂಕದೊಂದಿಗೆ ಮೂರು ವರ್ಷದ ಪದವಿ ಅಥವಾ ನಾಲ್ಕು ವರ್ಷದ ಬಿಇ, ಬಿಟೆಕ್​ ಪದವಿ ಹೊಂದಿರಬೇಕು.

ವಯೋಮಿತಿ: ಫ್ಲೈಯಿಂಗ್​ ಬ್ರಾಂಚ್​ಗೆ ಅಭ್ಯರ್ಥಿಗಳು ಕನಿಷ್ಠ 20 ವರ್ಷ ಗರಿಷ್ಠ 24 ವರ್ಷ ವಯೋಮಿತಿ ಮೀರಿರಬಾರದು. 1999ರ ಜುಲೈ 2ರಿಂದ 2005ರ ಜುಲೈ 1ರೊಳಗೆ ಜನಿಸಿರಬೇಕು.

ಗ್ರೌಂಡ್​ ಡ್ಯೂಟಿ (ತಾಂತ್ರಿಕ ಮತ್ತು ತಾಂತ್ರಿಕೇತರ) ಬ್ರಾಂಚ್​​ಗೆ ಕನಿಷ್ಠ 20ರಿಂದ ಗರಿಷ್ಠ 26 ವರ್ಷ ಮೀರಿರಬಾರದು.

ಆಯ್ಕೆ: ಸ್ಪರ್ಧಾತ್ಮಕ ಪರೀಕ್ಷೆ

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ. ಅಭ್ಯರ್ಥಿಗಳು ಕೆಳಗೆ ನೀಡಲಾದ ಲಿಂಕ್​ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅದರ ಹೋಂ ಪೇಜ್​ನಲ್ಲಿ ಲಭ್ಯವಾಗುವ ಲಿಂಕ್​ ಕ್ಲಿಕ್​ ಮಾಡಿ ನೋಂದಣಿ ನಡೆಸಬೇಕಿದೆ. ಎಎಫ್​ಸಿಎಟಿ ಅಭ್ಯರ್ಥಿಗಳಿಗೆ 550 ರೂ ಅರ್ಜಿ ಶುಲ್ಕ ವಿಧಿಸಿದ್ದು, ಎಸ್​ಸಿಸಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಈ ಹುದ್ದೆಗೆ ಮೇ 30ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕಡೇಯ ದಿನ ಜೂನ್​ 28.

ಈ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು afcat.cdac.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಯುಪಿಎಸ್​ಸಿಯಿಂದ NDA-NA ನೇಮಕಾತಿ ಪರೀಕ್ಷೆ; ಪಿಯುಸಿ ಆದವರಿಗೆ ಸುವರ್ಣಾವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.