ನವದೆಹಲಿ: ಭಾರತದಲ್ಲಿ ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಉದ್ಯೋಗ ನೇಮಕಾತಿಯಲ್ಲಿ ಶೇ 3ರಷ್ಟು ಹೆಚ್ಚಳ ಕಂಡಿದ್ದು, ಬಿಳಿ ಕಾಲರ್ನ ಗಿಗ್ ಉದ್ಯೋಗದಲ್ಲಿ ಭಾರೀ ಪ್ರಮಾಣದಲ್ಲಿ (ವರ್ಷದಿಂದ ವರ್ಷಕ್ಕೆ) 184ರಷ್ಟು ಹೆಚ್ಚಳ ಕಂಡಿದೆ ಎಂದು ವರದಿ ತಿಳಿಸಿದೆ.
ಗಿಗ್ ಕೆಲಸಗಾರರು ಪ್ರಮುಖ ಕಾರ್ಯ ವಿಭಾಗವನ್ನು ಪ್ರತಿನಿಧಿಸುವುದರ ಜೊತೆಗೆ ಇದೇ ಅವಧಿಯಲ್ಲಿ ಶೇ 21ರಷ್ಟು ವಿಸ್ತರಣೆ ಕಂಡಿದ್ದಾರೆ. ಉದ್ಯಮದ ಅಗತ್ಯಗಳನ್ನು ಪೂರೈಸಲು ಕಂಪನಿಗಳ ಸ್ವತಂತ್ರ ಉದ್ಯೋಗಿಗಳು (ಫ್ರಿಲಾನ್ಸರ್) ಮತ್ತು ಸ್ವತಂತ್ರ ಗುತ್ತಿಗೆದಾರರ ಮೇಲೆ ಹೆಚ್ಚು ಅವಲಂಬನೆ ಹೊಂದಿದೆ. ಈ ಹಿನ್ನಲೆ ಅವರ ಗಮನಾರ್ಹ ಬೆಳವಣಿಗೆ ಕಂಡಿದೆ ಎಂದು ಫೌಂಡಿಟ್ ವರದಿ ತಿಳಿಸಿದೆ.
ಐಟಿ ವಲಯವು ಗಿಗ್ ವೈಟ್ ಕಾಲರ್ ಉದ್ಯೋಗದಲ್ಲಿ ಹೆಚ್ಚಳದಲ್ಲಿ ಪ್ರಮುಖವಾಗಿದೆ. ಗಿಗ್ ಆರ್ಥಿಕತೆಯಲ್ಲಿ ಐಟಿ ಸಾಫ್ಟ್ವೇರ್ ಪಾಲು ದುಪ್ಪಟ್ಟಾಗಿದೆ. ಮಾರ್ಚ್ 2023ರಲ್ಲಿ ಶೇ 23ರಿಂದ ಈ ವರ್ಷದ ಮಾರ್ಚ್ನಲ್ಲಿ ಶೇ 46ಕ್ಕೆ ಏರಿಕೆ ಕಂಡಿದೆ.
ದೆಹಲಿ, ಬೆಂಗಳೂರು, ಮುಂಬೈನಂತಹ ಮೆಟ್ರೋ ನಗರಗಳು ಗಿಗ್ ಉದ್ಯೋಗಕ್ಕೆ ಪ್ರಮುಖ ದಾರಿಯಾಗಿವೆ. ಮುಂದಿನ ಹಲವು ತಿಂಗಳಲ್ಲಿ ಗಿಗ್ ಆರ್ಥಿಕತೆ ಮತ್ತಷ್ಟು ವೃದ್ಧಿ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆ ಈ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಉದ್ಯೋಗ ಪಡೆಯಲು ಉದ್ಯೋಗಿಗಳು ಅಗತ್ಯ ಕೌಶಲ್ಯವನ್ನು ಹೊಂದುವುದು ಅಗತ್ಯವಾಗಿದೆ ಎಂದು ಫಂಡ್ಇಟ್ನ ಸಿಇಒ ಶೇಖರ್ ಗರಿಸ ತಿಳಿಸಿದ್ದಾರೆ.
ಜಾಹೀರಾತು ಮತ್ತು ಮಾರ್ಕೆಟಿಂಗ್ ಕೂಡ ಗಮನಾರ್ಹ ಬೆಳವಣಿಗೆಗೆ ಸಾಕ್ಷಿಯಾಗಿದೆ. ಕಳೆದೊಂದು ವರ್ಷದಲ್ಲಿ ಗಿಗ್ ಉದ್ಯೋಗಿಗಳ ಪಾಲು ಶೇ5 ರಿಂದ 18ರಷ್ಟು ಏರಿಕೆ ಕಂಡಿದೆ. ಐಟಿ ವಲಯ ಕೂಡ ಕನಿಷ್ಠ ಪ್ರಮಾಣದ ಇಳಿಕೆ ಕಂಡಿದೆ. ಇದು ಫೆಬ್ರವರಿಯಲ್ಲಿ ಶೇ 7ರಷ್ಟು ಏರಿಕೆಯೊಂದಿಗೆ ಮಾರ್ಚ್ನಲ್ಲಿ 2ರಷ್ಟು ಇಳಿಕೆ ದಾಖಲಿಸಿದೆ.
ಇನ್ನು ಬ್ಯಾಂಕಿಂಗ್, ಫೈನಾನ್ಸ್ ಸೇವೆ ಮತ್ತು ಇನ್ಸುರೆನ್ಸ್ (ಬಿಎಫ್ಎಸ್ಐ) ವಲಯವೂ ನಿಶ್ಚಲ ಬೆಳವಣಿಗೆ ಕಂಡಿದೆ. ಇಂಜಿನಿಯರಿಂಗ್, ಸಿಮೆಂಟ್, ಕನ್ಸಟ್ರಕ್ಷನ್ ಮತ್ತು ಕಬ್ಬಿಣ, ಸ್ಟೀಲ್ ಉದ್ಯಮದಲ್ಲಿ ಕೂಡ ಮಾರ್ಚ್ನಲ್ಲಿ ಬಲವಾದ ಬೆಳವಣಿಗೆ ಕಂಡಿದೆ. ಜೊತೆಗೆ ಸರ್ಕಾರ, ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್ಯು) ಮತ್ತು ರಕ್ಷಣಾ ವಲಯದಲ್ಲಿ ಕೂಡ ನೇಮಕಾತಿಯಲ್ಲಿ ಕೊಂಚ ಏರಿಕೆ ಕಂಡಿದೆ.
ವೈಟ್ ಕಾಲರ್ ಗಿಗ್ ವರ್ಕರ್ಸ್ ಅಂದ್ರೆ ಯಾರು: ವೈಟ್ ಕಾಲರ್ ಗಿಗ್ ಕೆಲಸಗಾರರು ಸ್ವತಂತ್ರ ವೃತ್ತಿಪರರಾಗಿರುತ್ತಾರೆ. ಇವರು ಸಂಸ್ಥೆಯ ಖಾಯಂ ಉದ್ಯೋಗಿಗಳಲ್ಲ. ಫ್ರಿಲ್ಯಾನ್ಸರ್ ರೀತಿ ಎಲ್ಲಿಂದಲಾದರೂ ಕೆಲಸ ಮಾಡುವ ಉದ್ಯೋಗಿಗಳಾಗಿದ್ದಾರೆ. ಸಂಸ್ಥೆಯ ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಕೌಶಲ್ಯ ಹೊಂದಿರುತ್ತಾರೆ. ಈ ಉದ್ಯೋಗದಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್‌ಗಳು, ಅಕೌಂಟೆಂಟ್‌ಗಳು, ನಿರ್ವಹಣಾ ಸಲಹೆಗಾರರು ಮತ್ತು ಇತರ ವ್ಯಾಪಾರ ಅಥವಾ ವೃತ್ತಿಪರ ಸಲಹೆಗಾರರು ಇರುತ್ತಾರೆ. (ಐಎಎನ್ಎಸ್)
ಇದನ್ನೂ ಓದಿ: ಭಾರತದಲ್ಲಿ ಫ್ರಿಲಾನ್ಸಿಂಗ್ ಉದ್ಯೋಗ ಆಯ್ಕೆಯಲ್ಲಿ ಮಹಿಳೆಯರ ಸಂಖ್ಯೆ ದುಪ್ಪಟ್ಟು