ETV Bharat / education-and-career

ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ ಹೊಸದಾಗಿ 100 ಸೀಟು ಲಭ್ಯ: ಅ.14ರವರೆಗೆ ಎಂಟ್ರಿಗೆ ಅವಕಾಶ - MEDICAL SEATS

ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ ಹೊಸದಾಗಿ 100 ಸೀಟು ಲಭ್ಯವಿದ್ದು, ಆಪ್ಷನ್ ಎಂಟ್ರಿಗೆ ಅವಕಾಶವಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

medical seats
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ETV Bharat)
author img

By ETV Bharat Karnataka Team

Published : Oct 11, 2024, 7:39 AM IST

ಬೆಂಗಳೂರು: ಇಲ್ಲಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಹೊಸದಾಗಿ 100 ಸೀಟುಗಳು ಲಭ್ಯವಿದೆ. ಅವುಗಳ ಹಂಚಿಕೆಗೆ ಸರ್ಕಾರವು ಆದೇಶಿಸಿರುವುದರಿಂದ, ಈ ಕಾಲೇಜಿಗೆ ಮಾತ್ರ ಅನ್ವಯವಾಗುವಂತೆ ಹೊಸದಾಗಿ ಆಪ್ಷನ್​ಗಳನ್ನು ನಮೂದಿಸಲು ಅಕ್ಟೋಬರ್​​ 14ರ ರಾತ್ರಿ 11.59ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಮುಂಚೆ ಬೇರೆ ಕಾಲೇಜುಗಳಲ್ಲಿ ಸೀಟು ಪಡೆದವರು ಹಾಗೂ ಈವರೆಗೆ ಹಂಚಿಕೆಯಾಗದವರು ಆಪ್ಷನ್ ಎಂಟ್ರಿ ಮಾಡುವ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವರ್ಗವಾರು ಸೀಟ್ ಮ್ಯಾಟ್ರಿಕ್ಸ್ ಅನ್ನು ವೆಬ್‌ಸೈಟ್​​ನಲ್ಲಿ ಪ್ರಕಟಿಸಲಾಗಿದೆ. ಒಂದು ವೇಳೆ ಯಾವುದೇ ಅಭ್ಯರ್ಥಿಗೆ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆಯಾದಲ್ಲಿ, ಅವರು ಮೊದಲಿನ ಸೀಟನ್ನು ಕಳೆದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಈ ಹಿಂದಿನ ಸೀಟು ಪಡೆಯಲು ಸಾಧ್ಯ ಇರುವುದಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಶುಲ್ಕ ಪಾವತಿಸಿ ವೈದ್ಯಕೀಯ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸುತ್ತಿರುವ ಇತರ ಅಭ್ಯರ್ಥಿಗಳು ಸಹ ಕೆಂಪೇಗೌಡ ವೈದ್ಯಕೀಯ ಕಾಲೇಜಿನ ಸೀಟುಗಳಿಗೆ ಆಪ್ಷನ್​ಗಳನ್ನು ಅ.14ರ ರಾತ್ರಿ 11.59ರವರೆಗೆ ನಮೂದಿಸಬಹುದು. ಹಾಗೂ ಸೀಟು ಮ್ಯಾಟ್ರಿಕ್ಸ್​ನಲ್ಲಿ ತೋರಿಸದೇ ಇರುವ ಕಾಲೇಜುಗಳಿಗೂ ಸಹ ಆಪ್ಷನ್​ಗಳನ್ನು ದಾಖಲಿಸಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ಸೀಟ್ ಮ್ಯಾಟ್ರಿಕ್ಸ್‌ನಲ್ಲಿ ಸೀಟುಗಳ ಲಭ್ಯತೆಯನ್ನು ತೋರಿಸದಿದ್ದರೂ ಅಭ್ಯರ್ಥಿಗಳಿಗೆ ಆದ್ಯತೆಗಳನ್ನು ನಮೂದಿಸಲು ಸಲಹೆ ನೀಡಲಾಗಿದೆ. ಬ್ಯಾಂಕ್‌ಗಳ ರಜೆ ಕಾರಣದಿಂದ ವೈದ್ಯಕೀಯ ಮಾಪ್ ಅಪ್ ಸುತ್ತಿಗೆ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಪಾವತಿಸಲು ಅಕ್ಟೋಬರ್​ 14ರ ವರೆಗೆ ಕಾಲಾವಧಿ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮುಂದಿನ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೃಪಾಂಕ ಇಲ್ಲ: ಸಚಿವ ಮಧು ಬಂಗಾರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.