ETV Bharat / education-and-career

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗ್ತಿದ್ದೀರಾ? ಈ ಸಂಗತಿಗಳನ್ನು ತಪ್ಪದೆ ಪಾಲಿಸಿ - Tips For Competitive Exams - TIPS FOR COMPETITIVE EXAMS

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವವರು ವ್ಯವಸ್ಥಿತ ಯೋಜನೆ ಹಾಕಿಕೊಂಡು ಅಧ್ಯಯನ ನಡೆಸಿದ್ದಲ್ಲಿ ಮಾತ್ರ ಯಶಸ್ಸು ಸಾಧ್ಯವಿದೆ ಎಂಬುದನ್ನು ಮರೆಯಬಾರದು.

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ (ಸಂಗ್ರಹ ಚಿತ್ರ)
author img

By ETV Bharat Karnataka Team

Published : May 9, 2024, 2:12 PM IST

ಸ್ಪರ್ಧಾತ್ಮಕ ಪರೀಕ್ಷೆಗಳ ಈ ಜಗತ್ತಿನಲ್ಲಿ ಉತ್ತಮ ಅಂಕಗಳನ್ನು ಪಡೆಯಲೇಬೇಕು. ಹೀಗಾಗಿ, ಅನೇಕ ಬಾರಿ ಪರೀಕ್ಷೆಗಳು ಸಾಕಷ್ಟು ಒತ್ತಡ ಹೇರುತ್ತವೆ. ಯಾವುದನ್ನು ಓದುವುದು, ಹೇಗೆ ಸಿದ್ಧತೆ ನಡೆಸಬೇಕು ಎಂಬೆಲ್ಲ ಹತ್ತು ಹಲವು ಪ್ರಶ್ನೆಗಳು ಕಾಡುತ್ತವೆ. ಅನೇಕ ಬಾರಿ ಸರಿಯಾದ ಯೋಜನೆಯೂ ಕೂಡ ಫಲ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಪರೀಕ್ಷೆಗೆ ತಯಾರಾಗುವ ಮುನ್ನ ಇಲ್ಲಿ ಕೊಟ್ಟಿರುವ ವಿಚಾರಗಳು ನಿಮಗೆ ತಿಳಿದಿರಲಿ.

ಸರಿಯಾದ ಓದಿನ ಯೋಜನೆ ರೂಪಿಸಿಕೊಳ್ಳಿ: ವ್ಯವಸ್ಥಿತ ಓದಿಗೆ ಉತ್ತಮ ಯೋಜನೆ ಅತ್ಯಗತ್ಯ. ಯಾವಾಗ, ಏನು, ಯಾವ ವಿಷಯಗಳನ್ನು ಓದಬೇಕು ಎಂಬ ಕುರಿತು ನಿರ್ದಿಷ್ಟವಾಗಿ ತಿಳಿದಿರಬೇಕು. ಇದಕ್ಕಾಗಿ ಪ್ರತಿ ಓದಿಗೆ ಸರಿಯಾದ ಯೋಜನೆ ಹಾಕಿಕೊಳ್ಳಿ.

ಓದಿಗೆ ಪೂರಕ ವಾತಾವರಣ: ಓದಿಗೆ ಪೂರಕ ಮತ್ತು ಆರಾಮದಾಯಕ ವಾತಾವರಣ ಏಕಾಗ್ರತೆ ಸಾಧಿಸಲು ಸಹಾಯ ಮಾಡುತ್ತದೆ. ಮನೆ ಅಥವಾ ಹಾಸ್ಟೆಲ್‌ ಯಾವುದೇ​ ಇರಲಿ ಅಲ್ಲಿ ತಾಜಾ ಗಾಳಿ, ಬೆಳಕು ಬರುವ ಸ್ಥಳವನ್ನು ಆಯ್ಕೆ ಮಾಡಬೇಕು. ಮೊಬೈಲ್​ಗಳಿಂದ ದೂರವಿರಿ. ಚೇರ್​ ಮೇಲೆ ಕುಳಿತು ಓದುವುದರಿಂದ ದೇಹದ ಮೇಲೆ ಹೆಚ್ಚಿನ ಬಳಲಿಕೆ ತಪ್ಪುತ್ತದೆ.

ವಿರಾಮ ತೆಗೆದುಕೊಳ್ಳಿ: ಓದುವಾಗ ವಿರಾಮ ತೆಗೆದುಕೊಳ್ಳುವುದು ಅಗತ್ಯ. ಇದರಿಂದ ಮಾತ್ರವೇ ನಿಮ್ಮ ಮಿದುಳು ಉತ್ತಮವಾಗಿ ಕೆಲಸ ಮಾಡುತ್ತದೆ. ವಿರಾಮವಿಲ್ಲದೇ ದೀರ್ಘಾವಧಿ ಓದುವುದರಿಂದ ಒತ್ತಡ ಹೆಚ್ಚುತ್ತದೆ. ಓದಿನ ಮಧ್ಯೆ ವಿರಾಮ ಪಡೆದು ನಡಿಗೆಯಂತಹ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಪ್ರಯೋಜನವಿದೆ.

ಆರೋಗ್ಯಯುತ ಆಹಾರ ಸೇವಿಸಿ: ಉತ್ತಮ ಆಹಾರ ಸೇವನೆ ಅಭ್ಯಾಸ ಆರೋಗ್ಯ ನಿರ್ವಹಣೆಗೆ ಸಹಾಯಕ. ಉತ್ತಮ ಪೋಷಕಾಂಶಯುಕ್ತ ಆಹಾರ ಆಲಸ್ಯ ಮತ್ತು ಅಕಾಲಿಕ ನಿದ್ದೆಯನ್ನು ತಪ್ಪಿಸುತ್ತದೆ. ದೇಹ ನಿರ್ಜಲೀಕರಣಕ್ಕೆ ಒಳಗಾಗದಂತೆ ಅಗತ್ಯ ಪ್ರಮಾಣದಲ್ಲಿ ನೀರು ಸೇವಿಸಿ.

ಒಟ್ಟಿಗೆ ಓದುವುದರ ಪ್ರಯೋಜನ: ಸಮಾನ ಮನಸ್ಕರ ಜೊತೆ ಒಟ್ಟಿಗೆ ಓದಿನ ಅಭ್ಯಾಸ ಉತ್ತಮ. ಇದರಿಂದ ನಿಮ್ಮ ಓದಿನಲ್ಲಿನ ಅನುಮಾನ ತೆಗೆದುಹಾಕಬಹುದು. ಪ್ರಶ್ನೆ ಮತ್ತು ಉತ್ತರಗಳನ್ನು ನೆನಪಿನಲ್ಲಿಡಲು ಚರ್ಚೆಗಳು ಸಹಾಯ ಮಾಡುತ್ತವೆ.

ಪಠ್ಯವನ್ನು ಪೂರ್ಣಗೊಳಿಸುವುದು ಅವಶ್ಯಕ: ಯಾವುದೇ ವಿಷಯವನ್ನು ಸಂಪೂರ್ಣವಾಗಿ ಕಲಿಯಲು ಪಠ್ಯವನ್ನು ಸಂಪೂರ್ಣವಾಗಿ ಪೂರ್ಣಗೊಳಿಸುವುದು ಅವಶ್ಯಕ. ಅಧ್ಯಯನ ಸಂದರ್ಭದಲ್ಲಿ ಕಿರು ಪಟ್ಟಿ ಮಾಡಿಟ್ಟುಕೊಳ್ಳಿ. ಇದನ್ನು ಕಾಲಕಾಲಕ್ಕೆ ಮರುಮನನ ಮಾಡಿ.

ಮಾದರಿ ಪ್ರಶ್ನೆ ಪತ್ರಿಕೆ ಓದಿ: ಪಠ್ಯಗಳು ಸಂಪೂರ್ಣವಾದ ಬಳಿಕ ಮಾದರಿ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಅಧ್ಯಯನ ನಿಮ್ಮ ತಯಾರಿಗೆ ಒಳ್ಳೆಯದು. ಇದು ಪರೀಕ್ಷೆಯಲ್ಲಿ ಯಾವ ರೀತಿ ಪ್ರಶ್ನೆ ಕೇಳುತ್ತಾರೆ ಎಂಬ ಕುರಿತು ಒಂದು ಚಿತ್ರಣ ನೀಡುತ್ತದೆ.

ಪುನರಾವರ್ತನೆ ಮುಗಿಸಿ: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಸುತ್ತಿರುವವರು ಪಠ್ಯವನ್ನು ಪುನರಾವರ್ತನೆ ಮಾಡಬೇಕು. ಪರೀಕ್ಷೆಗೆ ಒಂದು ವಾರ ಇರುವ ಮುನ್ನ ಈ ರೀತಿ ಪುನರಾವರ್ತನೆ ಹೆಚ್ಚಿನ ಅಂಕ ಗಳಿಕೆಗೆ ನೆರವಾಗುತ್ತದೆ.

ನಿಯಮ ತಿಳಿಯಿರಿ: ಪರೀಕ್ಷೆಗೆ ಮುನ್ನ ದಿನ ಉತ್ತಮ ನಿದ್ರೆ ಮಾಡಿ. ಪರೀಕ್ಷೆ ಕುರಿತು ಸಂಪೂರ್ಣ ಮಾಹಿತಿ ತಿಳಿಯಿರಿ. ಈ ಅಂಶಗಳನ್ನು ಪರೀಕ್ಷೆಯಲ್ಲಿ ಯಶಸ್ಸಿಗೆ ಸಹಾಯ ಮಾಡಲಿದೆ.

ಇದನ್ನೂ ಓದಿ: ಭಾರತದ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಿವು; ಇದನ್ನು ಪಾಸ್​ ಮಾಡುವವರ ಸಂಖ್ಯೆ ಎಷ್ಟು ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.