ETV Bharat / education-and-career

ಐಟಿಐ ಅಭ್ಯರ್ಥಿಗಳೇ ಗಮನಿಸಿ: ಹೆಚ್​ಎಎಲ್​ನಲ್ಲಿ ಒಂದು ವರ್ಷದ ಅಪ್ರೆಂಟಿಸ್​ ಹುದ್ದೆಗೆ ಸಂದರ್ಶನ - HAL Apprenticeship Training - HAL APPRENTICESHIP TRAINING

ಐಟಿಐ ಪದವೀಧರರಿಗೆ ಒಂದು ವರ್ಷದ ಗೌರವಧನ ಸಹಿತ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

HAL Walk in Interview for Apprenticeship Training
ವಾಕ್​ ಇನ್​ ಸಂದರ್ಶನ (File Photo)
author img

By ETV Bharat Karnataka Team

Published : May 21, 2024, 1:29 PM IST

ಬೆಂಗಳೂರು: ಹಿಂದೂಸ್ತಾನ್​ ಏರೋನಾಟಿಕಲ್​ ಲಿಮಿಟೆಡ್​ನಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್​​ಶಿಪ್​ ಟ್ರೈನಿಂಗ್​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದು ವರ್ಷದ ಅವಧಿಗೆ ನೇಮಕಾತಿ ನಡೆಯಲಿದೆ. ರಾಷ್ಟ್ರೀಯ ಅಪ್ರೆಂಟಿಸ್​​ ಪ್ರೊಮೋಷನ್​ ಸ್ಕೀಮ್​ (ಎನ್​ಎಪಿಎಸ್​) ಅಡಿಯಲ್ಲಿ ಬೆಂಗಳೂರಿನಲ್ಲಿ ಈ ಹುದ್ದೆ ಭರ್ತಿ ಪ್ರಕ್ರಿಯೆ ನಡೆಯುತ್ತದೆ.

ಅಧಿಸೂಚನೆ
ಅಧಿಸೂಚನೆ (ಎಚ್​ಎಎಲ್​ ವೆಬ್​ಸೈಟ್​)

ಹುದ್ದೆ ವಿವರ: ಫಿಟ್ಟರ್​​, ಟರ್ನರ್​​, ಮೆಕಾನಿಸ್ಟ್​​, ವೆಲ್ಡರ್​, ಸಿಒಎಪಿ, ಫೌಂಡ್ರೆ-ಮ್ಯಾನ್​, ಶೀಟ್​ ಮೆಟಲ್​ ವರ್ಕ್​, ಟೂಲ್​ ಅಂಡ್​ ಡೈ ಮೇಕರ್​, ಎಲೆಕ್ಟ್ರಿಷಿಯನ್​ ಅಡ್ವಾನ್ಸ್ಡ್​​ ಸಿಎನ್​ಸಿ ಮೆಷಿಂಗ್​ ಹುದ್ದೆಗಳಿಗೆ ನೇಮಕಾತಿ

ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಐಟಿಐ/ ಐಟಿಸಿ ಪದವಿಯನ್ನು ಹೊಂದಿರಬೇಕು. ಈಗಾಗಲೇ ಒಂದು ಅಥವಾ ಅದಕ್ಕಿಂತ ಹೆಚ್ಚಿನ ವರ್ಷದ ಉದ್ಯೋಗ ಅನುಭವ ಹೊಂದಿರುವವರು ಅರ್ಜಿ ಸಲ್ಲಿಕೆಗೆ ಅರ್ಹರಲ್ಲ.

ವೇತನ: ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಾಸಿಕ 7000-7700 ರೂ.ವರೆಗೆ ಗೌರವಧನ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಸಂದರ್ಶನದ ಮೂಲಕ ಭರ್ತಿ

ವಾಕ್​ ಇನ್​ ಇಂಟರ್​ವ್ಯೂಗೆ ಬರುವ ಮೊದಲು ಅಭ್ಯರ್ಥಿಗಳು apprenticeshipindia.org/candidate-registration ಪೋರ್ಟಲ್​ನಲ್ಲಿ ಸ್ಟುಡೆಂಟ್​ನಲ್ಲಿ ದಾಖಲಾತಿ ಹೊಂದಿ ಈ ರಿಜಿಷ್ಟ್ರೇಷನ್​ ಕಾಪಿಯನ್ನು ಹೊಂದಿರಬೇಕು.

ಈ ಹುದ್ದೆಗಳಿಗೆ ಮೊದಲು ಬಂದವರಿಗೆ ಆದ್ಯತೆ ಅನುಸಾರ ಪ್ರಾಶಸ್ತ್ಯ ನೀಡಲಾಗುವುದು.

ನೇರ ಸಂದರ್ಶನವೂ ಜೂನ್​ 17ರಿಂದ ಜೂನ್​ 22ರ ವರೆಗೆ ಈ ಕೆಳಗಿನ ವಿಳಾಸದಲ್ಲಿ ನಡೆಯಲಿದೆ.

ಟೆಕ್ನಿಕಲ್​ ಟ್ರೈನಿಂಗ್​​ ಇನ್ಸುಟಿಟ್ಯೂಟ್​, ಸುರಂಜನ್​ ದಾಸ್​ ರಸ್ತೆ, ಬೆಂಗಳೂರು -560017

ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು hal-india.co.in ಇಲ್ಲಿಗೆ ಭೇಟಿ ನೀಡಿ.

ಟೊಯೋಟಾದಲ್ಲಿ 3 ವರ್ಷದ ತರಬೇತಿ:

ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ ವತಿಯಿಂದ ರೆಗ್ಯುಲರ್ ಪ್ರೋಗ್ರಾಂ ಮತ್ತು ಟೊಯೋಟಾ ಕೌಶಲ್ಯ ಕಾರ್ಯಕ್ರಮಗಳಿಗೆ 2024ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಪ್ರದೇಶದ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ದೊರೆಯಲಿದೆ. ಟಿಟಿಟಿಐ (ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ) ರೆಗ್ಯುಲರ್ ಪ್ರೋಗ್ರಾಂ ಮೂರು ವರ್ಷಗಳ ವಸತಿ ಕೋರ್ಸ್ ಮೂಲಕ ಸಮಗ್ರ ತರಬೇತಿಯನ್ನು ನೀಡುತ್ತದೆ. ಅರ್ಜಿ ಸಲ್ಲಿಕೆ, ಅರ್ಜಿ ಸಲ್ಲಿಕೆ ಕೊನೆ ದಿನ, ಮಾನದಂಡ, ಕೋರ್ಸ್ ವಿವರ, ಪರೀಕ್ಷೆ ವಿಧಾನ, ಪರೀಕ್ಷಾ ಕೇಂದ್ರಗಳು, ವಿದ್ಯಾರ್ಹತೆ, ವಯೋಮಿತಿ ಸೇರಿದಂತೆ ಹೆಚ್ಚಿನ ಮಾಹಿತಿಗೆ https://forms.office.com/r/UxSGWqBcGU ಈ ಲಿಂಕ್​ಗೆ ಭೇಟಿ ನೀಡಿ ಮತ್ತು ನಿಮ್ಮ ಹೆಸರನ್ನು ನೋಂದಾಯಿಸಬಹುದು.

ಇದನ್ನೂ ಓದಿ: 10ನೇ ತರಗತಿ ಪಾಸ್​ ಆಗಿದ್ರೆ ಬಿಇಎಂಎಲ್​ನಲ್ಲಿದೆ ಡ್ರೈವರ್​ ಕೆಲಸ; ಇಲ್ಲಿದೆ ಹುದ್ದೆ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.