ಬೆಂಗಳೂರು: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪೂರ್ಣಕಾಲಿಕ ಮತ್ತು ಅರೆಕಾಲಿಕ ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ವಿ.ವಿ.ಯ ನಂದಿಹಳ್ಳಿ ಮತ್ತು ಯಲಬುರ್ಗಾದಲ್ಲಿವ ವಿವಿಧ ಸ್ನಾತಕೋತ್ತರ ವಿಭಾಗದಲ್ಲಿ ಅಭ್ಯರ್ಥಿಗಳು ಕಾರ್ಯನಿರ್ವಹಿಸಬೇಕಿದೆ.
ಹುದ್ದೆಗಳ ವಿವರ: ಒಟ್ಟು 84 ಹುದ್ದೆಗಳು.
ಇಂಗ್ಲಿಷ್, ಕನ್ನಡ, ನಾಟಕ, ವಾಣಿಜ್ಯಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಕಾರ್ಯ, ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಮಹಿಳಾ ಅಧ್ಯಯನ, ರಸಾಯನಶಾಸ್ತ್ರ, ಭೌತಶಾಸ್ತ್ರ, ಪ್ರಾಣಿಶಾಸ್ತ್ರ, ಗಣಕ ಅಧ್ಯಯನ ವಿಭಾಗ ಸೇರಿದಂತೆ ಹಲವು ವಿಭಾಗದಲ್ಲಿ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ: ಅಭ್ಯರ್ಥಿಗಳು ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಯುಜಿಸಿ ಮತ್ತು ಸರ್ಕಾರಿ ನಿಯಮಗಳ ಅನುಸಾರ ನೇಮಕಾತಿ ನಡೆಯುತ್ತದೆ.
ಈ ಹುದ್ದೆಗಳು ತಾತ್ಕಾಲಿಕವಾಗಿದ್ದು, 2024-25ರ ಶೈಕ್ಷಣಿಕ ಅವಧಿಗೆ ಮಾತ್ರ ಸೀಮಿತ.
ಅರ್ಜಿ ಸಲ್ಲಿಕೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ, ಪ.ಜಾ.,ಪ.ಪಂ. ಮತ್ತು ಪ್ರವರ್ಗ 1ರ ಅಭ್ಯರ್ಥಿಗಳಿಗೆ 250 ರೂ ಅರ್ಜಿ ಶುಲ್ಕವಿದೆ. ನಿಗದಿತ ಅರ್ಜಿಯನ್ನು ಪಡೆದು, ಅರ್ಜಿ ಶುಲ್ಕದೊಂದಿಗೆ ಈ ವಿಳಾಸಕ್ಕೆ ನವೆಂಬರ್ 5ಕ್ಕೆ ಮುನ್ನ ಸಲ್ಲಿಸಬೇಕು. ಯುನಿವರ್ಸಿಟಿ ಮುಖ್ಯ ಆವರಣ, ವಿಜಯನಗರ ಶ್ರೀ ಕೃಷ್ಣದೇವರಾಯ ಯುನಿವರ್ಸಿಟಿ, ಜ್ಞಾನ ಸಾಗರ ಕ್ಯಾಂಪಸ್, ವಿಜಯನಗರ, ಬಳ್ಳಾರಿ- 583105
ಈ ಕುರಿತು ಹೆಚ್ಚಿನ ಮಾಹಿತಿಗೆ vskub.ac.in ಇಲ್ಲಿಗೆ ಭೇಟಿ ನೀಡಿ.
ಇದನ್ನೂ ಓದಿ: ಸಿಇಟಿ: ಕಾಲೇಜಿಗೆ ವರದಿ ಮಾಡಿಕೊಳ್ಳದ 2,348 ಅಭ್ಯರ್ಥಿಗಳಿಗೆ ಕೆಇಎ ಷೋಕಾಸ್ ನೋಟಿಸ್