ETV Bharat / education-and-career

DRDO ನೇಮಕಾತಿ: 150 ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ - DRDO Apprentice Job

DRDO Apprentice Job: ರಕ್ಷಣಾ ಸಚಿವಾಲಯದ ಎರಡು ಸಂಸ್ಥೆಗಳಲ್ಲಿ ನಡೆಸುತ್ತಿರುವ ಹುದ್ದೆಗಳ ಭರ್ತಿ ಕುರಿತು ಮಾಹಿತಿ ಇಲ್ಲಿದೆ.

DRDO 150Apprentice job and ADA Job recruitment

author img

By ETV Bharat Karnataka Team

Published : Mar 26, 2024, 1:28 PM IST

ಬೆಂಗಳೂರು: ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಪದವೀಧರ ಅಪ್ರೆಂಟಿಸ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ತಾಂತ್ರಿಕ ಮತ್ತು ತಾಂತ್ರಿಕೇತರ ವಿಭಾಗದಲ್ಲಿ ಒಟ್ಟು 150 ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ನೇಮಕ ಮಾಡಲಾಗುತ್ತದೆ.

ಹುದ್ದೆಗಳ ವಿವರ:

  • ತಾಂತ್ರಿಕ ಪದವೀಧರ ಅಪ್ರೆಂಟಿಸ್ - 75
  • ತಾಂತ್ರಿಕೇತರ ಪದವೀಧರ ಅಪ್ರೆಂಟಿಸ್​​ - 30
  • ಡಿಪ್ಲೊಮಾ ಅಪ್ರೆಂಟಿಸ್​​ ಟ್ರೈನಿಸ್​​ - 20
  • ಐಟಿಐ ಅಪ್ರೆಂಟಿಸ್​ ಟ್ರೈನಿ - 25

ವಿದ್ಯಾರ್ಹತೆ: ತಾಂತ್ರಿಕ ಪದವೀಧರ ಅಪ್ರೆಂಟಿಸ್​ ಹುದ್ದೆಗೆ ಅಭ್ಯರ್ಥಿಗಳು ಇಬಿ, ಬಿಟೆಕ್​ ಪದವಿ ಹೊಂದಿರಬೇಕು. ತಾಂತ್ರಿಕೇತರ ಪದವೀಧರ ಅಪ್ರೆಂಟಿಸ್​ ಹುದ್ದೆಗೆ ಬಿಕಾಂ, ಬಿಎಸ್ಸಿ, ಬಿಎ, ಬಿಸಿಎ, ಬಿಬಿಎ ಪದವಿ ಹಾಗೂ ಡಿಪ್ಲೊಮಾ ಮತ್ತು ಐಟಿಐ ಅಪ್ರೆಂಟಿಸ್​​ಗೆ ಡಿಪ್ಲೊಮಾ ಮತ್ತು ಐಟಿಐ ಉತ್ತೀರ್ಣರಾಗಿರಬೇಕು.

ಅಧಿಸೂಚನೆ
ಅಧಿಸೂಚನೆ

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಶಿಷ್ಯ ವೇತನ: ಅಪ್ರೆಂಟಿಸ್​​ ಅವಧಿಯಲ್ಲಿ ಪದವೀಧರ ಅಪ್ರೆಂಟಿಸ್​​ಗೆ ಮಾಸಿಕ 9 ಸಾವಿರ, ಡಿಪ್ಲೊಮಾ ಅಪ್ರೆಂಟಿಸ್​​ಗೆ ಮಾಸಿಕ 8 ಸಾವಿರ ಮತ್ತು ಐಟಿಐ ಅಪ್ರೆಂಟಿಸ್​​ಗೆ ಮಾಸಿಕ 7 ಸಾವಿರ ರೂ ಸ್ಟೈಪಂಡ್​ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಮೆರಿಟ್​, ಲಿಖಿತ ಪರೀಕ್ಷೆ ಮತ್ತು ಸಂದರ್ಶನ. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಮಾರ್ಚ್​ 21ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮೇ 9 ಕಡೆಯ ದಿನಾಂಕ.

ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು rac.gov.in ಅಥವಾ drdo.gov.in ಇಲ್ಲಿಗೆ ಭೇಟಿ ನೀಡಿ.

ಎಡಿಎಯಲ್ಲಿ ಸ್ಟೆನೋಗ್ರಾಫರ್​ ಮತ್ತು ಡ್ರೈವರ್​ ಹುದ್ದೆ: ರಕ್ಷಣಾ ಇಲಾಖೆಯ ಏರೋನಾಟಿಕಲ್​ ಡೆವಲಪ್ಮೆಂಟ್​​ ಏಜನ್ಸಿಯಲ್ಲಿ ಒಂದು ಸ್ಟೇನೋಗ್ರಾಫರ್ ಮತ್ತು ಎರಡು ಡ್ರೈವರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಸ್ಟೆನೋಗ್ರಾಫರ್​ ಹುದ್ದೆಗೆ ಪದವಿ ವಿದ್ಯಾರ್ಹತೆ ಜೊತೆಗೆ ಸರ್ಕಾರದ ಅಧಿಕೃತ ಶಿಕ್ಷಣ ಮಂಡಳಿಯಲ್ಲಿ ಶಾರ್ಟ್​​ಹ್ಯಾಂಡ್​ ಮತ್ತು ಟೈಪ್​​ರೈಟಿಂಗ್​​ ಪ್ರಮಾಣ ಪತ್ರ ಹೊಂದಿರಬೇಕು. ಡ್ರೈವರ್​​ ಹುದ್ದೆಗೆ ಅಭ್ಯರ್ಥಿಗಳು 8ನೇ ತರಗತಿ ಜೊತೆಗೆ ಸರ್ಕಾರದಿಂದ ಹಗುರ ಮತ್ತು ಭಾರೀ ವಾಹನಗಳ ಚಾಲನ ಪರವಾನಗಿ ಹೊಂದಿರಬೇಕು.

ಆನ್​ಲೈನ್​ನಲ್ಲಿ ನಿಗದಿತ ಅರ್ಜಿ ಪಡೆದು ಅವುಗಳ ಭರ್ತಿ ಮಾಡಿ ಆಡ್ಮಿನ್​ ಆಫೀಸರ್​ ಗ್ರೇಡ್​ 2, ಏರೋನಾಟಿಕಲ್​ ಡೆವಲಪ್ಮೆಂಟ್​ ಏಜೆನ್ಸಿ, ವಿಭೂತಿಪುರ, ಮಾರತ್​ಹಳ್ಳಿ ಪೋಸ್ಟ್​​, ಬೆಂಗಳೂರು- 560037 ಇಲ್ಲಿಗೆ ಕಳುಹಿಸಬೇಕು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್​ 6. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ada.gov.in ಭೇಟಿ ನೀಡಿ.

ಇದನ್ನೂ ಓದಿ: ತುಮಕೂರು: ಗ್ರಾ.ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.