ಬೆಂಗಳೂರು: ಕೇಂದ್ರ ಸರ್ಕಾರದ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಸಿ-ಡಾಕ್) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು, ಪುಣೆ, ದೆಹಲಿ, ಲಕ್ನೋದಲ್ಲಿ ನೇಮಕಾತಿ ನಡೆಯಲಿದೆ.
ಹುದ್ದೆಗಳ ವಿವರ: ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಇಂಜಿನಿಯರ್, ಪ್ರೊಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಆಫೀಸರ್, ಪ್ರಾಜೆಕ್ಟ್ ಸಪೋರ್ಟ್ ಸ್ಟಾಫ್ ಸೇರಿದಂತೆ ಒಟ್ಟು 250 ಹುದ್ದೆಗಳಿವೆ.
ಬೆಂಗಳೂರಿನಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್-19, ಪ್ರಾಜೆಕ್ಟ್ ಇಂಜಿನಿಯರ್-8 ಹಾಗು ಪ್ರಾಜೆಕ್ಟ್ ಮ್ಯಾನೇಜರ್-2 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ: ಬಿಇ, ಬಿಟೆಕ್, ಎಂಇ ಅಥವಾ ಎಂಟೆಕ್, ಎಂಬಿಎ, ಸ್ನಾತಕೋತ್ತರ ಪದವಿ.
ವಯೋಮಿತಿ: ಹುದ್ದೆಗೆ ಅನುಸಾರವಾಗಿ ಗರಿಷ್ಠ ವಯೋಮಿತಿ 30 ರಿಂದ 50ವರ್ಷದವರೆಗೆ.
ವೇತನ: ವಾರ್ಷಿಕ ವೇತನ 3,60,000-22,90,000 ರೂ.
ಅರ್ಜಿ ಸಲ್ಲಿಕೆ: ಸಿಡಾಕ್ ಅಧಿಕೃತ ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದು. ಯಾವುದೇ ಶುಲ್ಕ ಇರುವುದಿಲ್ಲ. ಆಗಸ್ಟ್ 16 ಅರ್ಜಿ ಸಲ್ಲಿಕೆಗೆ ಕಡೇಯ ದಿನ. ಸಂಪೂರ್ಣ ಮಾಹಿತಿಗೆ ಅಭ್ಯರ್ಥಿಗಳು cdac.in ಇಲ್ಲಿಗೆ ಭೇಟಿ ನೀಡಿ.
ಐಒಸಿಎಲ್ನಲ್ಲಿ ಅಪ್ರೆಂಟಿಸ್ ಹುದ್ದೆ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್)ನಲ್ಲಿ ಟ್ರೇಡರ್, ಟೆಕ್ನಿಶಿಯನ್, ಪದವೀಧರ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನೇಮಕಾತಿ ನಡೆಯಲಿದೆ.
ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ 10ನೇ ತರಗತಿ, ಐಟಿಐ, ಟೆಕ್ನಿಶಿಯನ್ ಅಪ್ರೆಂಟಿಸ್ಗೆ ಡಿಪ್ಲೊಮಾ ಮತ್ತು ಪದವೀಧರ ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳು ಕನಿಷ್ಠ 18, ಗರಿಷ್ಠ 24 ವರ್ಷ ವಯೋಮಿತಿ ಹೊಂದಿರಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಗಸ್ಟ್ 19 ಅರ್ಜಿ ಸಲ್ಲಿಸಲು ಕಡೇಯ ದಿನ. ಈ ಕುರಿತು ಹೆಚ್ಚಿನ ಮಾಹಿತಿಗೆ iocl.com ಇಲ್ಲಿಗೆ ಭೇಟಿ ನೀಡಿ.
ಇದನ್ನೂ ಓದಿ: ಮಂಗಳೂರು ವಿವಿ: ಅರೆಕಾಲಿಕ, ಪೂರ್ಣಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ