ETV Bharat / education-and-career

ಕರ್ನಾಟಕದಲ್ಲಿವೆ 4,430 ಉನ್ನತ ಶಿಕ್ಷಣ ಕಾಲೇಜುಗಳು: 6004 ವಿದೇಶಿಗರಿಂದ ಅಧ್ಯಯನ - ಉನ್ನತ ಶಿಕ್ಷಣ ಇಲಾಖೆ ವರದಿ

ಉನ್ನತ ಶಿಕ್ಷಣ ಕಾಲೇಜುಗಳಿರುವ ದೇಶದ ಟಾಪ್​ 10 ರಾಜ್ಯಗಳ ಪೈಕಿ ಕರ್ನಾಟಕವು ಮೂರನೇ ಸ್ಥಾನದಲ್ಲಿವೆ. ಉತ್ತರಪ್ರದೇಶ ಅತಿಹೆಚ್ಚು ಕಾಲೇಜುಗಳನ್ನು ಹೊಂದಿ ಮೊದಲ ಸ್ಥಾನದಲ್ಲಿದೆ.

ಉನ್ನತ ಶಿಕ್ಷಣ ಕಾಲೇಜುಗಳು
ಉನ್ನತ ಶಿಕ್ಷಣ ಕಾಲೇಜುಗಳು
author img

By ETV Bharat Karnataka Team

Published : Jan 27, 2024, 10:59 PM IST

ನವದೆಹಲಿ: 2021-22 ನೇ ಸಾಲಿನಲ್ಲಿ ದೇಶದಲ್ಲಿರುವ ಉನ್ನತ ಶಿಕ್ಷಣ ಕಾಲೇಜುಗಳ ಸಮೀಕ್ಷೆ ನಡೆಸಲಾಗಿದ್ದು, ಟಾಪ್​ 10 ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ 4,430 ಕಾಲೇಜುಗಳು ಇದ್ದು, ವಿದೇಶಗಳಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿದೆ.

ಉನ್ನತ ಶಿಕ್ಷಣ ಸಂಸ್ಥೆಗಳ ಕುರಿತು ಆಲ್​ ಇಂಡಿಯಾ ಸರ್ವೇ ಫಾರ್​ ಹೈಯರ್​ ಎಜುಕೇಶನ್​ ನಡೆಸಿರುವ ಸಮೀಕ್ಷೆಯನ್ನು ಕೇಂದ್ರ ಉನ್ನತ ಶಿಕ್ಷಣ ಇಲಾಖೆಯು ಗುರುವಾರ ಬಿಡುಗಡೆ ಮಾಡಿದೆ. ಇದರಲ್ಲಿ ದೇಶದಲ್ಲಿಯೇ ಅತ್ಯಧಿಕ ಕಾಲೇಜುಗಳು ಉತ್ತರಪ್ರದೇಶದಲ್ಲಿವೆ (7182) ಎಂದು ಹೇಳಿದ್ದರೆ, ಮಹಾರಾಷ್ಟ್ರದಲ್ಲಿ 4,682 ಶಿಕ್ಷಣ ಸಂಸ್ಥೆಗಳಿದ್ದು ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನ, ತಮಿಳುನಾಡು, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ನಂತರದ ಟಾಪ್​ 10 ರಲ್ಲಿವೆ.

ಜನ ಸಾಂದ್ರತೆ ಲೆಕ್ಕಾಚಾರ: 18 ರಿಂದ 23 ವರ್ಷದ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ದೇಶದಲ್ಲಿಯೇ ಸರಾಸರಿ 30 ಕಾಲೇಜುಗಳಿವೆ. ಇದೇ ಲೆಕ್ಕಾಚಾರದಲ್ಲಿ ಕರ್ನಾಟಕದಲ್ಲಿ 66 ಕಾಲೇಜುಗಳಿದ್ದರೆ, ತೆಲಂಗಾಣ (52), ಆಂಧ್ರ ಪ್ರದೇಶ (49), ಹಿಮಾಚಲ ಪ್ರದೇಶ (47), ಪುದುಚೇರಿ (53) ಮತ್ತು ಕೇರಳದಲ್ಲಿ (46) ಕಾಲೇಜುಗಳಿವೆ ಎಂದು ಹೇಳಿದೆ.

ಅತಿ ಹೆಚ್ಚು ಶಿಕ್ಷಕರಿರುವ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಶೇಕಡಾ 9.4 ರಷ್ಟು ಅಂದರೆ 1.50 ಲಕ್ಷ ಶಿಕ್ಷಕರಿದ್ದಾರೆ. ಒಟ್ಟಾರೆ ಶಿಕ್ಷಕರಲ್ಲಿ ಒಬಿಸಿ 56,427, ಎಸ್​ಸಿ 13092, ಎಸ್​ಟಿ 3415 ಬೋಧಕರಿದ್ದರೆ, ಶೇಕಡಾ 10.4 ರಷ್ಟು ಮುಸ್ಲಿಂ ಶಿಕ್ಷಕರಿದ್ದಾರೆ ಎಂದು ಸಮೀಕ್ಷೆ ಗುರುತಿಸಿದೆ.

ಪಿಟಿಆರ್​ ಅನುಪಾತದಲ್ಲಿ ಕರ್ನಾಟಕ ಬೆಸ್ಟ್​: ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಶಿಷ್ಯ ಶಿಕ್ಷಕರ ಅನುಪಾತದಲ್ಲಿ (ಪಿಟಿಆರ್​) ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ. ತಲಾ 14 ರಿಂದ 15 ಮಕ್ಕಳಿಗೆ ಓರ್ವ ಶಿಕ್ಷಕರಿದ್ದಾರೆ. ರಾಜ್ಯವು ವರ್ಷದಿಂದ ವರ್ಷಕ್ಕೆ ಅತಿ ಹೆಚ್ಚು ಕಾಲೇಜು ಸಾಂದ್ರತೆಯನ್ನು ಹೊಂದಿದೆ.

ಅತಿ ಹೆಚ್ಚು ಕಾಲೇಜುಗಳಿರುವ ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ (1106) ಗರಿಷ್ಠ ಕಾಲೇಜುಗಳಿವೆ. ನಂತರದಲ್ಲಿ ರಾಜಸ್ಥಾನದ ಜೈಪುರ (703), ತೆಲಂಗಾಣದ ಹೈದರಾಬಾದ್ (491), ಮಹಾರಾಷ್ಟ್ರ ಪುಣೆ (475), ಉತ್ತರಪ್ರದೇಶದ ಪ್ರಯಾಗರಾಜ್ (398), ತೆಲಂಗಾಣದ ರಂಗಾರೆಡ್ಡಿ (349), ಮಧ್ಯಪ್ರದೇಶದ ಭೋಪಾಲ್ (344), ಉತ್ತರಪ್ರದೇಶದ ಗಾಜಿಪುರ (333), ರಾಜಸ್ಥಾನದ ಸಿಕರ್ (330) ಮತ್ತು ಮಹಾರಾಷ್ಟ್ರ ನಾಗ್ಪುರದಲ್ಲಿ (326) ಕಾಲೇಜುಗಳಿದ್ದು, ಟಾಪ್​ ​10 ಜಿಲ್ಲೆಗಳಾಗಿವೆ.

ವಿದೇಶಿಗರಿಂದಲೂ ಅಧ್ಯಯನ: ರಾಜ್ಯದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣಕ್ಕಾಗಿ ವಿದೇಶದಿಂದಲೂ ವಿದ್ಯಾರ್ಥಿಗಳು ಬಂದು ಅಧ್ಯಯನ ನಡೆಸುತ್ತಿದ್ದಾರೆ. ವಿವಿಧ ಕೋರ್ಸ್​ಗಳಲ್ಲಿ 6004 ವಿದೇಶಿಗರು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಸಮೀಕ್ಷೆಯ ಅಂಕಿ - ಅಂಶಗಳು ಹೇಳಿವೆ.

ಇದನ್ನೂ ಓದಿ: 2021-22ರಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾದ 4.33 ಕೋಟಿ ವಿದ್ಯಾರ್ಥಿಗಳು, 26.5ರಷ್ಟು ಹೆಚ್ಚಳ; ಸಮೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.