ಹೈದರಾಬಾದ್: ಜೀ ಎಂಟರ್ಟೈನ್ಮೆಂಟ್- ಸೋನಿ ನಡುವಿನ ವಿಲೀನ ಒಪ್ಪಂದದ ಕುರಿತಾದ ತುರ್ತು ಮಧ್ಯಸ್ಥಿಕೆ ವಿಚಾರಣೆಯು ನಾಳೆ(ಜನವರಿ 31) ಸಿಂಗಪೂರ್ನಲ್ಲಿ ನಡೆಯಲಿದೆ ಎಂದು ಸಿಎನ್ಬಿಸಿ-ಟಿವಿ 18 ವರದಿ ಮಾಡಿದೆ.
ಸೋನಿ ಪಿಕ್ಚರ್ ನೆಟ್ವರ್ಕ್ ಇಂಡಿಯಾ (ಎಸ್ಪಿಎನ್ಐ) ಮಾತೃ ಸಂಸ್ಥೆ ಜಪಾನಿನ ಸೋನಿ ಗ್ರೂಪ್ ಕಾರ್ಪೊರೇಷನ್ ಮತ್ತು ಬಾಂಗ್ಲಾ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ (ಬಿಇಪಿಎಲ್) ಆದ ಜೀಯೊಂದಿಗಿನ 10 ಬಿಲಿಯನ್ ಡಾಲರ್ ವಿಲೀನ ಒಪ್ಪಂದವನ್ನು ರದ್ದು ಮಾಡಿತು. ಅಲ್ಲದೇ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 90 ಮಿಲಿಯನ್ ಡಾಲರ್ ಅನ್ನು ಪರಿಹಾರ ಮೊತ್ತವನ್ನು ಕೇಳಿದೆ.
ಸಿಂಗಾಪೂರ್ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (ಎಸ್ಐಎಸಿ)ಯು ಏಷ್ಯಾದ ಮೊದಲ ಮಧ್ಯಸ್ಥಿಕೆ ಸಂಸ್ಥೆಯಾಗಿದೆ. ಇದು 2010ರಿಂದ ತುರ್ತು ಮಧ್ಯಸ್ಥಗಾರರ ನೇಮಕ ಮಾಡಿದಾಗಿನಿಂದ 130 ಅರ್ಜಿಗಳನ್ನು ಸ್ವೀಕರಿಸಿದೆ. ಒಂದು ವೇಳೆ ಈ ತುರ್ತು ಮಧ್ಯಸ್ಥಿಕೆ ಪರಿಹಾರದ ಅರ್ಜಿ ಸ್ವೀಕಾರವಾದಲ್ಲಿ, ದಿನದೊಳಗೆ ತುರ್ತು ಮಧ್ಯಸ್ಥಗಾರರನ್ನು ನೇಮಕ ಮಾಡಲಾಗುವುದು.
ಮುರಿದು ಬಿದ್ದ ಒಪ್ಪಂದ: ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ಜಿಲ್) ಜೊತೆಗೆ ಸೋನಿ ಗ್ರೂಪ್ ಕಾರ್ಪೊರೇಷನ್ 10 ಬಿಲಿಯನ್ ಡಾಲರ್ ವಿಲೀನದ ಒಪ್ಪಂದವನ್ನು ಮುರಿದು ಹಾಕಿತು. ವಿಲೀನ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ 90 ಮಿಲಿಯನ್ ಡಾಲರ್ ಬ್ರೇಕ್ಅಪ್ ಶುಲ್ಕವೂ ಸೋನಿ ಬಯಸಿದೆ. ಆದರೆ ಇದು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ಜೀ ಹೇಳಿದೆ.
ಸೋನಿ ಗ್ರೂಪ್ ಕಾರ್ಪೊರೇಷನ್ ಪ್ರಕಾರ, ಜೀಲ್ ಜೊತೆ ವೀಲಿನ ಒಪ್ಪಂದಕ್ಕೆ ಅಂತಿಮ ದಿನದವರೆಗೆ ಕಸರತ್ತು ನಡೆಸಿದರೂ ಈ ವಿಲೀನದ ಒಪ್ಪಂದ ಮುರಿದು ಬಿದ್ದಿತು. ಒಂದು ವೇಳೆ ಸೋನಿ- ಜೀ ವಿಲೀನವೂ ನಡೆದರೆ, 70 ಟಿವಿ ಚಾನೆಲ್ ಮತ್ತು ಜೀ5 ಹಾಗೂ ಸೋನಿ ಲೈವ್ ಎರಡು ಸ್ಟ್ರೀಮಿಂಗ್ ಒಡೆತನವನ್ನು ಸಾಧಿಸಲಿದೆ. ಈ ಮೂಲಕ ಭಾರತದಲ್ಲಿ ಅತ್ಯಂತ ದೊಡ್ಡ ಎಂಟರ್ಟೈನ್ಮೆಂಟ್ ನೆಟ್ವರ್ಕ್ ಆಗಿ ಹೊರ ಹೊಮ್ಮಲಿದೆ.
ಈ ನಡುವೆ ಜೀಲ್ ಎಂಡಿ ಮತ್ತು ಸಿಇಒ ಪುನೀತ್ ಗೊಯೆಂಕ್ ಟೌನ್ ಹಾಲ್ ಮೀಟಿಂಗ್ನಲ್ಲಿ, ನಮ್ಮ ಉದ್ಯಮವು ವೇಗದ ಬದಲಾವಣೆಗೆ ಸಾಕ್ಷಿಯಾಗಿದೆ. ಈ ಗಾಳಿಯ ಬದಲಾವಣೆಯು ಹೊಸದನ್ನು ನೀಡಲಿದೆ. ನಮಗೆ ಬರುವ ಅವಕಾಶಗಳನ್ನು ಬಳಕಸಿಕೊಂಡು ಉತ್ತಮ ಸ್ಥಾನದಲ್ಲಿ ನಿಲ್ಲಬೇಕು. ಕಳೆದ ಮೂರು ದಶಕಗಳಿಂದ ನಾವು ನಾಯಕರಾಗಿದ್ದೇವೆ. ನಮ್ಮ ಸ್ಟೇಕ್ಹೋಲ್ಡರ್ಗೆ ವರ್ಷದಿಂದ ವರ್ಷಕ್ಕೆ ಮೌಲ್ಯವನ್ನು ನೀಡಿದ್ದೇವೆ ಎಂದಿದ್ದಾರೆ.
ಜೀ ಷೇರು ಕುಸಿತ: ಸೋನಿಯೊಂದಿಗಿನ ಒಪ್ಪಂದವೂ ಮುರಿದು ಬೀಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಜೀ ಷೇರುಗಳ ಕುಸಿತ ಕಂಡಿತು. ಜನವರಿ 23ರಂದು ಒಂದೇ ದಿನದಲ್ಲಿ ಸಂಸ್ಥೆಯು 30.50ರಷ್ಟು ಕುಸಿತ ಕಂಡು ದಿನದ ಅಂತ್ಯಕ್ಕೆ 152.50ರೂ. ತಲುಪಿತು. ಜನವರಿ 24ರಂದು ಷೇರು ಮಾರುಕಟ್ಟೆಯಲ್ಲಿ ಕೊಂಚ ಚೇತರಿಕೆ ಕಂಡು 166.35ರೂ.ಗೆ ಬಂದಿತು.
ಇದನ್ನೂ ಓದಿ: ಚಿನ್ನ, ಬೆಳ್ಳಿ ಆಮದು ಸುಂಕ ಶೇ 15ಕ್ಕೆ ಏರಿಕೆ