ETV Bharat / business

ಟ್ರಂಪ್ ಗೆಲುವು: ದಾಖಲೆಯ 75 ಸಾವಿರ ಡಾಲರ್ ದಾಟಿದ ಬಿಟ್ ಕಾಯಿನ್ ಮೌಲ್ಯ - BITCOIN VALUE

ಡೊನಾಲ್ಡ್​ ಟ್ರಂಪ್ ಅವರ ಗೆಲುವಿನ ಬೆನ್ನಲ್ಲೇ ಬಿಟ್ ಕಾಯಿನ್ ಮೌಲ್ಯ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ.

ಬಿಟ್ ಕಾಯಿನ್
ಬಿಟ್ ಕಾಯಿನ್ (IANS)
author img

By ETV Bharat Karnataka Team

Published : Nov 6, 2024, 6:17 PM IST

ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನ ಸಮೀಪಕ್ಕೆ ಬರುತ್ತಿದ್ದಂತೆ, ಬಿಟ್ ಕಾಯಿನ್ ಮೌಲ್ಯ ದಾಖಲೆಯ ಗರಿಷ್ಠ 75,060 ಡಾಲರ್​ಗೆ ಏರಿದೆ. ಇದು ಕ್ರಿಪ್ಟೋಕರೆನ್ಸಿ ಹೂಡಿಕೆದಾರರ ಉತ್ಸಾಹವನ್ನು ಹೆಚ್ಚಿಸಿದೆ. ವಿಶ್ವದ ಅತ್ಯಂತ ಮೌಲ್ಯಯುತ ಡಿಜಿಟಲ್ ಆಸ್ತಿಯಾಗಿರುವ ಬಿಟ್ ಕಾಯಿನ್ ಮೌಲ್ಯ ಮಂಗಳವಾರ (ಯುಎಸ್ ಸಮಯ) ಶೇಕಡಾ 7 ರಷ್ಟು ಏರಿಕೆಯಾಗಿದೆ.

ಟ್ರಂಪ್ ತಮ್ಮ ಪ್ರಚಾರದ ಸಮಯದಲ್ಲಿ ಬಿಟ್ ಕಾಯಿನ್ ಬಗ್ಗೆ ವ್ಯಾಪಕವಾಗಿ ಮಾತನಾಡಿದ್ದರು. ಅಮೆರಿಕವನ್ನು ವಿಶ್ವದ ಕ್ರಿಪ್ಟೊ ರಾಜಧಾನಿಯನ್ನಾಗಿ ಮಾಡುವುದಾಗಿ ಅವರು ವಾಗ್ದಾನ ಮಾಡಿದ್ದರು.

ಸದ್ಯ ಟ್ರಂಪ್ ಗೆಲುವಿನ ನಂತರ ಬಿಟ್ ಕಾಯಿನ್ ಮೌಲ್ಯ 75,000 ಡಾಲರ್​ಗಿಂತ ಮೇಲಕ್ಕೇರಿ ಹೊಸ ದಾಖಲೆ ಬರೆದಿದೆ. ಬಿಟ್ ಕಾಯಿನ್ ಒಟ್ಟು ಮೌಲ್ಯ 1.5 ಟ್ರಿಲಿಯನ್ ಡಾಲರ್ ದಾಟಿರುವುದು ಗಮನಾರ್ಹ. ಬುಧವಾರ (ಭಾರತೀಯ ಸಮಯ) ಬಿಟ್ ಕಾಯಿನ್ ಒಂದು ಕಾಯಿನ್ ಬೆಲೆ 73,000 ಡಾಲರ್ ಆಗಿತ್ತು.

ಕ್ರಿಪ್ಟೋಕರೆನ್ಸಿ ಉದ್ಯಮಕ್ಕೆ ಉಂಟಾಗುತ್ತಿರುವ ಕಿರುಕುಳವನ್ನು ಕೊನೆಗೊಳಿಸುವುದಾಗಿ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು "ವಿಶ್ವದ ಬಿಟ್ ಕಾಯಿನ್ ಸೂಪರ್ ಪವರ್" ಮಾಡುವುದಾಗಿ ಟ್ರಂಪ್ ಪ್ರಚಾರದ ಸಮಯದಲ್ಲಿ ಹೇಳಿದ್ದರು. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಟ್ರಂಪ್ ಆಡಳಿತದ ಅಡಿಯಲ್ಲಿ ಹೆಚ್ಚಿನ ಬೇಡಿಕೆ, ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಭಾವನೆ ಮತ್ತು ಪೂರಕ ನೀತಿ ನಿಯಮಗಳ ಕಾರಣದಿಂದ ಬಿಟ್ ಕಾಯಿನ್ ಮೌಲ್ಯ ಮುಂದಿನ ದಿನಗಳಲ್ಲಿ 80,000 ಡಾಲರ್ ಗೆ ಏರಿಕೆಯಾಗಬಹುದು.

ಟ್ರಂಪ್ ವಿಜಯದ ಸೂಚನೆಯಿಂದ ಬಿಟ್ ಕಾಯಿನ್ ಮಾತ್ರವಲ್ಲದೇ ಯುಎಸ್ ಷೇರು ಮಾರುಕಟ್ಟೆ, ಅಮೆರಿಕನ್​ ಡಾಲರ್ ಸೂಚ್ಯಂಕ ಮತ್ತು ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಕೂಡ ಏರಿಕೆ ಕಂಡು ಬಂದಿದೆ.

ಯುಎಸ್ ಡಾಲರ್ ಸೂಚ್ಯಂಕವು ಶೇಕಡಾ 1.9 ರಷ್ಟು ಏರಿಕೆಯಾಗಿ 105.30 ಕ್ಕೆ ತಲುಪಿದೆ. ಇದು ಸುಮಾರು ನಾಲ್ಕು ತಿಂಗಳ ಗರಿಷ್ಠ ಮಟ್ಟವಾಗಿದೆ. ಏತನ್ಮಧ್ಯೆ, ಎಸ್ &ಪಿ 500 ನ ಫ್ಯೂಚರ್ಸ್ 1.7% ಮತ್ತು ಡೋ ಜೋನ್ಸ್ ಕೈಗಾರಿಕಾ ಸೂಚ್ಯಂಕ 1.8% ರಷ್ಟು ಏರಿಕೆಯಾಗಿದೆ. ನಾಸ್ಡಾಕ್ ಸಂಯೋಜಿತ ಫ್ಯೂಚರ್ಸ್​ 1.8% ಹೆಚ್ಚಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ಘೋಷಿಸಿವೆ. ಅವರ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ 224 ಎಲೆಕ್ಟೋರಲ್ ಕಾಲೇಜು ಸ್ಥಾನಗಳನ್ನು ಪಡೆದರೆ, ಟ್ರಂಪ್ 270 ಸ್ಥಾನಗಳಲ್ಲಿ ಗೆದ್ದಿದ್ದಾರೆ.

ಇದನ್ನೂ ಓದಿ : ಅಮೆರಿಕ ಚುನಾವಣೆಯಲ್ಲಿ ಟ್ರಂಪ್​ ಗೆಲುವಿನ ಸುದ್ದಿ:ಡಾಲರ್​ ವಿರುದ್ಧ ಇರಾನ್ ಕರೆನ್ಸಿ ಸಾರ್ವಕಾಲಿಕ ಕನಿಷ್ಠಕ್ಕೆ ಕುಸಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.