ETV Bharat / business

ಜಮ್​ಶೆಡ್​ಜಿಯಿಂದ ಮಾಯಾವರೆಗಿನ ಟಾಟಾ ಕುಟುಂಬದ ಉದ್ಯಮಿಗಳ ಪಯಣದ ಹಾದಿ ಹೀಗಿದೆ! - TATA Business Journey

ದೇಶದಲ್ಲಿ ಟಾಟಾ ಕುಟುಂಬ ವಿಭಿನ್ನವಾಗಿ ಹೆಸರು ಮಾಡಿದೆ. ಟಾಟಾ ಗ್ರೂಪ್ ಉಪ್ಪಿನಿಂದ ಸಾಫ್ಟ್‌ವೇರ್‌ಗೆ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಜಮ್​ಶೆಡ್​ಜಿ ಟಾಟಾ, ರತನ್ ಟಾಟಾ ಮತ್ತು ಮಾಯಾ ಟಾಟಾ ವರೆಗಿನ ಟಾಟಾ ಕುಟುಂಬದ ಉದ್ಯಮಿಗಳು ನಡೆದು ಬಂದ ಹಾದಿಯ ಬಗ್ಗೆ ತಿಳಿಯೋಣ.

Jamshed Tata  Maya Tata  TATA Business Journey  TATA Group
ಜಮ್​ಶೆಡ್​ಜಿಯಿಂದ ಮಾಯಾವರೆಗಿನ ಟಾಟಾ ಕುಟುಂಬದ ಉದ್ಯಮಿಗಳ ಪಯಣ (Getty Images)
author img

By ETV Bharat Karnataka Team

Published : Jun 17, 2024, 11:51 AM IST

TATA's Business Journey: ವಿಶ್ವಾದ್ಯಂತ ಟಾಟಾ ಗ್ರೂಪ್ ಕಂಪನಿ ಉಪ್ಪಿನಿಂದ ಸಾಫ್ಟ್‌ವೇರ್‌ವರೆಗೆ ಸುಮಾರು 100 ಕ್ಷೇತ್ರಗಳಲ್ಲಿ ವ್ಯವಹಾರ ನಡೆಸುತ್ತಿದೆ. ಅಲ್ಲದೇ ಟಿಸಿಎಸ್ ಮತ್ತು ಟಾಟಾ ಮೋಟಾರ್ಸ್ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ವರದಿಯಲ್ಲಿ ನಾವು ಸುಮಾರು 150 ವರ್ಷಗಳಿಂದ ದೇಶದ ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಟಾಟಾ ಕುಟುಂಬ ವೃಕ್ಷದ ಬಗ್ಗೆ ತಿಳಿಯೋಣ. ಜಮ್​ಶೆಡ್​ಜಿ ಟಾಟಾರಿಂದ ಹಿಡಿದು ರತನ್, ಮಾಯಾ ಟಾಟಾವರೆಗಿನ ಉದ್ಯಮಿಗಳ ಸಾಧನೆಯ ಹಾದಿಯನ್ನೊಮ್ಮೆ ನೋಡೋಣ.

ಜಮ್​ಶೆಡ್​ಜಿ ಟಾಟಾ: ಜಮ್​ಶೆಡ್​ಜಿ ಟಾಟಾ ಅವರು ಗುಜರಾತ್​​​ನ ನವಸಾರಿ ಜಿಲ್ಲೆಯಲ್ಲಿ 1839 ರಲ್ಲಿ ಜನಿಸಿದರು. ಅವರಿಗೆ ದೇಶದ ಬಗ್ಗೆ ಅಪಾರ ಪ್ರೀತಿ ಇತ್ತು. ಜಮ್​ಶೆಡ್​ಜಿ ಟಾಟಾ ಅವರು ತಮ್ಮ ವ್ಯವಹಾರಗಳ ಮೂಲಕ ಕೆಲವರಿಗೆ ಜೀವನೋಪಾಯವನ್ನು ಒದಗಿಸಲು ಬಯಸಿದ್ದರು. 1868ರಲ್ಲಿ, ಮೊದಲ ಹತ್ತಿ ವ್ಯಾಪಾರ ಪ್ರಾರಂಭಿಸಲಾಯಿತು. ಅದರ ನಂತರ, ಐಷಾರಾಮಿ ಹೋಟೆಲ್‌ಗಳು ಮತ್ತು ತಾಜ್ ಹೋಟೆಲ್‌ಗಳನ್ನು ನಿರ್ಮಿಸಲಾಯಿತು. ಜಮ್​ಶೆಡ್​ಜಿ ಟಾಟಾ ಅವರ ಮರಣದ ನಂತರ, ಅವರ ವ್ಯಾಪಾರದ ಹೊಣೆಗಾರಿಕೆ ಅವರ ಮಗ ದೊರಾಬ್​ಜಿ ಟಾಟಾಗೆ ಹಸ್ತಾಂತರಿಸಲಾಯಿತು.

ಜಮ್​ಶೆಡ್​ಜಿ ಟಾಟಾ ಅವರು ಮಾಡಿದ ಬಿಸಿನೆಸ್​ಗಳು- ಹತ್ತಿ, ಉಕ್ಕು, ಜವಳಿ

ದೊರಾಬ್​ಜಿ ಟಾಟಾ: ದೊರಾಬ್​ಜಿ ಟಾಟಾ ಅವರು 1959ರಲ್ಲಿ ಜನಿಸಿದರು. ಅವರು ತಮ್ಮ ತಂದೆ ಜಮ್​ಶೆಡ್​ಜಿ ಟಾಟಾ ಅವರ ಬಿಸಿನೆಸ್​​ ಅನ್ನು ಯಶಸ್ವಿಯಾಗಿ ಮುಂದುವರಿಸಿದರು. ದೊರಾಬ್​ಜಿ ತಮ್ಮ ತಂದೆಯವರ ಬಿಸಿನೆಸ್​ನಲ್ಲಿ ಅಪಾರ ಅಭಿವೃದ್ಧಿ ಸಾಧಿಸಲು ಬಯಸಿದ್ದರು, ಬಳಿಕ ಎಲ್ಲವನ್ನೂ ಸಾಧಿಸಿದರೂ ಕೂಡಾ. ಈ ವೇಳೆ ಅವರು ಟಾಟಾ ಗ್ರೂಪ್ ಅನ್ನು ಗಮನಾರ್ಹವಾಗಿ ವಿಸ್ತರಿಸಿದ್ದರು. ದೊರಾಬ್​ಜಿ ಟಾಟಾ ಅವರು ಕ್ರೀಡೆಗಳನ್ನು ಹೆಚ್ಚು ಪ್ರೀತಿಸುತ್ತಾರೆ. ಅದಕ್ಕಾಗಿಯೇ 1924ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ತೆರಳಿದ್ದ ಭಾರತ ತಂಡಕ್ಕೆ ಆರ್ಥಿಕ ನೆರವು ನೀಡಿದ್ದರು. ಪತ್ನಿಯ ಮರಣದ ನಂತರ ಅವರು ಟ್ರಸ್ಟ್ ಸ್ಥಾಪಿಸಿದರು. ಟ್ರಸ್ಟ್​ನಿಂದ ಜಾತಿ, ಜನಾಂಗ, ಧರ್ಮದ ಭೇದವಿಲ್ಲದೇ ಎಲ್ಲರಿಗೂ ಸಹಾಯ ಮಾಡುತ್ತಿದೆ. ಇದು ಸಂಶೋಧನೆ ಮತ್ತು ವಿಪತ್ತು ತಗ್ಗಿಸುವ ಚಟುವಟಿಕೆಗಳನ್ನು ಸಹ ನಡೆಸುತ್ತದೆ. ಇದನ್ನು ಸರ್ ದೊರಾಬ್​ಜಿ ಟಾಟಾ ಟ್ರಸ್ಟ್ ಎಂದು ಕರೆಯಲಾಯಿತು.

ದೊರಾಬ್​ಜಿ ಟಾಟಾ ಮಾಡಿದ ಬಿಸಿನೆಸ್​ಗಳು- ಟಾಟಾ ಪವರ್, ನ್ಯೂ ಇಂಡಿಯಾ ಅಶ್ಯೂರೆನ್ಸ್ (ಇದನ್ನು ಸರ್ಕಾರ ಈಗ ನಡೆಸುತ್ತಿದೆ)

ರತನ್​ಜಿ ಟಾಟಾ: ಜಮ್​ಶೆಡ್​ಜಿ ಟಾಟಾ ಅವರ ಕಿರಿಯ ಮಗ ರತನ್​ಜಿ ಟಾಟಾ ಕೂಡ ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದರು. ಸಾಕಷ್ಟು ಉಪಕಾರ ಮಾಡುವ ಗುಣ ಹೊಂದಿದ್ದರು. ರತನ್‌ಜಿ ಟಾಟಾ ಅವರು ವಿಪತ್ತು ಪರಿಹಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಶಿಕ್ಷಣ ಸಂಸ್ಥೆಗಳು, ಆರೋಗ್ಯ ರಕ್ಷಣೆಗಾಗಿ ಫಂಡ್​ ನೀಡಿದ್ದರು. ಉತ್ಖನನಕ್ಕೆ ಪುರಾತತ್ವ ಇಲಾಖೆಗೂ ಹಣ ನೀಡಲಾಗಿತ್ತು. 1916 ರಲ್ಲಿ ಅವರು ತಮ್ಮ ಸಂಪತ್ತಿನ ಗಮನಾರ್ಹ ಭಾಗವನ್ನು ದಾನ ದತ್ತಿ ಕಾರ್ಯಗಳಿಗೆ ನೀಡಿದ್ದರು. ಸರ್ ರತನ್ ಟಾಟಾ ಟ್ರಸ್ಟ್ ಅನ್ನು 1919 ರಲ್ಲಿ ಸ್ಥಾಪಿಸಲಾಗಿತ್ತು. ರತನ್‌ಜಿ ಟಾಟಾ ಅವರ ನಿಧನದ ನಂತರ ಅವರ ಪತ್ನಿ ನವಾಜ್‌ ಭಾಯ್‌ ಸೆಟ್‌ ಕೆಲ ಕಾಲ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು.

ನೇವಲ್ ಟಾಟಾ: ನೇವಲ್ ಟಾಟಾ ರತನ್​ಜಿ ಟಾಟಾ ಅವರ ಮಗ. ಬಿಸಿನೆಸ್ ಕ್ಷೇತ್ರದಲ್ಲೂ ಮಿಂಚಿದ್ದರು. ನೇವಲ್ ಟಾಟಾ ಅವರ ಮಗ ಪ್ರಮುಖ ಉದ್ಯಮಿ ರತನ್ ಟಾಟಾ. ನೇವಲ್ ಟಾಟಾ ಉಕ್ಕು ಮತ್ತು ಟಾಟಾ ಪವರ್ ವ್ಯವಹಾರಗಳನ್ನು ಯಶಸ್ಸಿನತ್ತ ಮುನ್ನಡೆಸಿದ್ದರು.

ರತನ್ ಟಾಟಾ: ರತನ್ ಟಾಟಾ ಅವರು 28 ಡಿಸೆಂಬರ್ 1937 ರಂದು ಜನಿಸಿದರು. ಪ್ರಸ್ತುತ, ರತನ್ ಟಾಟಾ ಭಾರತದಲ್ಲಿ ಪ್ರಮುಖ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ. ಅವರ ಅಧಿಕಾರಾವಧಿಯಲ್ಲಿಯೇ ಟಾಟಾ ಗ್ರೂಪ್ ಮತ್ತಷ್ಟು ಎತ್ತರಕ್ಕೆ ಏರಿತು. 1991 ರಲ್ಲಿ ಅವರು ಟಾಟಾಸನ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅದಕ್ಕೂ ಮುನ್ನ ಅವರು ಟಾಟಾ ಸ್ಟೀಲ್‌ನಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ರತನ್ ಟಾಟಾ ಅವರು ಪರೋಪಕಾರ ಕಾರ್ಯಗಳಿಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಕಂಪನಿಯು ಹೆಚ್ಚಿನ ಆದಾಯವನ್ನು ದಾನ ಮಾಡಿದ್ದಾರೆ. ರತನ್ ಟಾಟಾ ಮದುವೆಯಾಗಿಲ್ಲ. ಜನಸಾಮಾನ್ಯರಿಗಾಗಿ ನ್ಯಾನೊ ಕಾರನ್ನು ಉತ್ಪಾದಿಸಲು ನಿರ್ಧರಿಸಿದರು. ಆದರೆ, ಅದು ಫಲ ನೀಡಲಿಲ್ಲ. ಆದರೆ, ಅವರ ಎಲ್ಲ ವ್ಯವಹಾರಗಳು ಲಾಭದಾಯಕವಾಗಿಯೇ ಮುಂದುವರೆದಿವೆ.

ಜಿಮ್ಮಿ ಟಾಟಾ: ಜಿಮ್ಮಿ ಟಾಟಾ ರತನ್ ಟಾಟಾ ಅವರ ಒಡಹುಟ್ಟಿದವರು. ಮುಂಬೈನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ನೋಯೆಲ್ ಟಾಟಾ: ನೋಯಲ್ ಟಾಟಾ ರತನ್ ಟಾಟಾ ಅವರ ಮಲ ಸಹೋದರ, 1957 ರಲ್ಲಿ ಜನಿಸಿದರು. ನೋಯಲ್ ಅವರು ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಹೋದರಿ ಆಲೂ ಮಿಸ್ತ್ರಿ ಅವರನ್ನು ವಿವಾಹವಾಗಿದ್ದಾರೆ. ಇಬ್ಬರಿಗೂ ಮೂವರು ಮಕ್ಕಳಿದ್ದಾರೆ. ಪ್ರಸ್ತುತ, ನೋಯಲ್ ಅವರು ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್‌ನ ಅಧ್ಯಕ್ಷರು, ಟಾಟಾ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಟಾಟಾ ಸ್ಟೀಲ್‌ನ ಉಪಾಧ್ಯಕ್ಷರಾಗಿದ್ದಾರೆ.

ನೆವಿಲ್ಲೆ ಟಾಟಾ: ನೆವಿಲ್ಲೆ ಟಾಟಾ ನೋಯೆಲ್ ಟಾಟಾ ಅವರ ಮಗ. ಅವರು ಜುಡೇಯೊ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರಸ್ತುತ ಇದು ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದೆ.

ಮಾಯಾ ಟಾಟಾ: ಮಾಯಾ ಟಾಟಾ ನೋಯೆಲ್ ಟಾಟಾ ಅವರ ಮಗಳು. ವ್ಯಾಪಾರ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ. ಮಾಯಾ ಟಾಟಾ ಶೀಘ್ರದಲ್ಲೇ ಟಾಟಾ ಗ್ರೂಪ್ ಕಂಪನಿಗಳ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆಂತೆ. 34 ವರ್ಷದ ಮಾಯಾ ಇತ್ತೀಚೆಗೆ ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್ ಬೋರ್ಡ್ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಾಯಾ ಜೊತೆಗೆ ಅವರ ಸಹೋದರಿ ಲಿಯಾ ಮತ್ತು ಸಹೋದರ ನೆವಿಲ್ಲೆ ಕೂಡ ಟಾಟಾ ಗ್ರೂಪ್‌ನ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ರತನ್ ಟಾಟಾ ಅವರ ಅಡಿ ವ್ಯವಹಾರದ ಪಾಠಗಳನ್ನು ಕಲಿತಿದ್ದಾರೆ.

ಮಾಯಾ ಟಾಟಾ ಅವರು ಯುಕೆಯ ವಾರ್ವಿಕ್ ವಿಶ್ವವಿದ್ಯಾಲಯದ ಬೇಯರ್ಸ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದರು. ನಂತರ ಟಾಟಾ ಗ್ರೂಪ್‌ನಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದರು. ಮೊದಲು ಅವರು ಟಾಟಾ ಅಪಾರ್ಚುನಿಟೀಸ್ ಫಂಡ್‌ನಲ್ಲಿ ಕೆಲಸ ಮಾಡಿದರು. ಇದು ಟಾಟಾ ಗ್ರೂಪ್‌ಗೆ ಸೇರಿದ ಟಾಟಾ ಕ್ಯಾಪಿಟಲ್ ಹೆಸರಿನ ಖಾಸಗಿ ಇಕ್ವಿಟಿ ಫಂಡ್ ಕಂಪನಿಯಾಗಿದೆ. ಆದರೆ, ಈಗ ಅದನ್ನು ಮುಚ್ಚಲಾಗಿದೆ. ಆದರೆ, ಟಾಟಾಗಳ ಬಿಸಿನೆಸ್​ ಪರಂಪರೆಯನ್ನು ಮಾಯಾ ಟಾಟಾ ಅವರೇ ಮುಂದುವರಿಸಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: 5 ಲಕ್ಷದೊಳಗಿನ ಉತ್ತಮ ಕಾರು ಖರೀದಿಸಬೇಕೇ?: ಇಲ್ಲಿವೆ 6 ಟಾಪ್ ಮಾದರಿಗಳು.. ಪೀಚರ್ಸ್​ ನೋಡಿ ಬೈ ಮಾಡಬಹುದು! - Best Cars Under 5 Lakh

ETV Bharat Logo

Copyright © 2024 Ushodaya Enterprises Pvt. Ltd., All Rights Reserved.