ETV Bharat / business

ಪೆಗಾಟ್ರಾನ್​ನ ಐಫೋನ್​ ತಯಾರಿಕಾ ಘಟಕ ಸ್ವಾಧೀನಕ್ಕೆ ಮುಂದಾದ ಟಾಟಾ ಗ್ರೂಪ್: ವರದಿ - iPhone - IPHONE

ಚೆನ್ನೈ ಬಳಿಯ ಪೆಗಾಟ್ರಾನ್​ನ ಐಫೋನ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಟಾಟಾ ಗ್ರೂಪ್ ಮುಂದಾಗಿದೆ ಎಂದು ವರದಿಯಾಗಿದೆ.

After Wistron, Tata Group eyeing Pegatron's iPhone plant in India, claims report

author img

By ETV Bharat Karnataka Team

Published : Apr 8, 2024, 7:46 PM IST

ನವದೆಹಲಿ: ಚೆನ್ನೈ ಬಳಿಯ ಪೆಗಾಟ್ರಾನ್​ನ ಐಫೋನ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಟಾಟಾ ಗ್ರೂಪ್ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ತೈವಾನ್ ಎಲೆಕ್ಟ್ರಾನಿಕ್ಸ್ ತಯಾರಕ ಕಂಪನಿ ವಿಸ್ಟ್ರಾನ್​ನ ಭಾರತದಲ್ಲಿನ ಘಟಕವನ್ನು ಟಾಟಾ ಗ್ರೂಪ್ 125 ಮಿಲಿಯನ್ ಡಾಲರ್​ಗೆ ಸ್ವಾಧೀನಪಡಿಸಿಕೊಂಡಿತ್ತು. ಈಗ ಐಫೋನ್​ನ ಮತ್ತೊಂದು ಘಟಕವನ್ನು ಸ್ವಾಧಿನಪಡಿಸಿಕೊಳ್ಳಲು ಟಾಟಾ ಗ್ರೂಪ್ ಮುಂದಾಗಿದೆ.

"ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಪ್ರಕಟಿಸಿದ ವರದಿಯ ಪ್ರಕಾರ, ಪೆಗಾಟ್ರಾನ್ ಸ್ಥಾವರವನ್ನು ನಿರ್ವಹಿಸಲು ಟಾಟಾ ಗ್ರೂಪ್ ಜಂಟಿ ಉದ್ಯಮದಲ್ಲಿ ಶೇಕಡಾ 65 ರಷ್ಟು ಪಾಲನ್ನು ಹೊಂದಬಹುದು ಮತ್ತು ಇದಕ್ಕಾಗಿ ಮಾತುಕತೆಗಳು ಮುಂದುವರಿದ ಹಂತದಲ್ಲಿವೆ. ಕಂಪನಿಯು ತನ್ನ ಟಾಟಾ ಎಲೆಕ್ಟ್ರಾನಿಕ್ಸ್ ಘಟಕದ ಮೂಲಕ ಜಂಟಿ ಉದ್ಯಮವನ್ನು ನಿರ್ವಹಿಸಲು ಯೋಜಿಸಿದೆ" ಎಂದು ವರದಿ ಹೇಳಿದೆ.

ಪೆಗಾಟ್ರಾನ್​ನ ಭಾರತದಲ್ಲಿನ ಘಟಕದಲ್ಲಿ ಸುಮಾರು 10,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಮತ್ತು ಕಂಪನಿಯು ಐಫೋನ್ 13 ಮತ್ತು ಐಫೋನ್ 14 ಸಾಧನಗಳನ್ನು ತಯಾರಿಸುತ್ತದೆ. ಈ ವರದಿಯ ಬಗ್ಗೆ ಪೆಗಾಟ್ರಾನ್, ಟಾಟಾ ಗ್ರೂಪ್ ಅಥವಾ ಆ್ಯಪಲ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಟಾಟಾ ಗ್ರೂಪ್ ತಮಿಳುನಾಡಿನ ಹೊಸೂರಿನಲ್ಲಿ ಭಾರತದ ಅತಿದೊಡ್ಡ ಐಫೋನ್ ಜೋಡಣಾ ಘಟಕ ಸ್ಥಾಪಿಸಲು ಯೋಜಿಸುತ್ತಿದೆ ಎಂದು ಕಳೆದ ವರ್ಷ ಡಿಸೆಂಬರ್​ನಲ್ಲಿ ವರದಿಗಳು ಹೇಳಿದ್ದವು. ಈ ಘಟಕವು ಸುಮಾರು 20 ಅಸೆಂಬ್ಲಿ ಲೈನ್​ಗಳನ್ನು ಹೊಂದುವ ನಿರೀಕ್ಷೆಯಿದೆ ಮತ್ತು ಎರಡು ವರ್ಷಗಳಲ್ಲಿ 50,000 ಕಾರ್ಮಿಕರನ್ನು ನೇಮಿಸಿಕೊಳ್ಳಲಿದೆ. ಈ ಘಟಕ 12 ರಿಂದ 18 ತಿಂಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

ಟಾಟಾ ಈಗ ಕರ್ನಾಟಕದಲ್ಲಿ ವಿಸ್ಟ್ರಾನ್​ನ ಐಫೋನ್ ಉತ್ಪಾದನಾ ಘಟಕವನ್ನು ಖರೀದಿಸಿ ಅದನ್ನು ನಿರ್ವಹಿಸುತ್ತಿದೆ. ಆ್ಯಪಲ್ ಭಾರತದಲ್ಲಿ ವರ್ಷಕ್ಕೆ 50 ದಶಲಕ್ಷಕ್ಕೂ ಹೆಚ್ಚು ಐಫೋನ್​ಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ. ಆ್ಯಪಲ್ ಚೀನಾದಲ್ಲಿನ ತನ್ನ ಬಹುತೇಕ ಉತ್ಪಾದನೆಯನ್ನು ಭಾರತಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಹೊಂದಿದೆ.

ಸ್ಮಾರ್ಟ್ ಫೋನ್ ಉತ್ಪಾದನೆಗಾಗಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯೊಂದಿಗೆ ಸರ್ಕಾರದ ಹಲವಾರು ಉಪಕ್ರಮಗಳು ಉತ್ಪಾದನಾ ಸೌಲಭ್ಯಗಳ ಬೆಳವಣಿಗೆಗೆ ಉತ್ತೇಜನ ನೀಡಿವೆ. ಇದು ಭಾರತೀಯ ಕಂಪನಿಗಳು ಚೀನಾ ಮೂಲದ ಜಾಗತಿಕ ಎಲೆಕ್ಟ್ರಾನಿಕ್ಸ್ ಕಂಪನಿಗಳೊಂದಿಗೆ ಪೈಪೋಟಿ ನೀಡಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ : ಸೆನ್ಸೆಕ್ಸ್​ 494 & ನಿಫ್ಟಿ 153 ಅಂಕ ಏರಿಕೆ: ಹೊಸ ದಾಖಲೆಯತ್ತ ಷೇರು ಮಾರುಕಟ್ಟೆ - Sensex Nifty

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.