ನವದೆಹಲಿ: ಸಾಮೂಹಿಕ ರಜೆ ಹಾಕುವ ಮೂಲಕ ಕಂಪನಿ ವಿರುದ್ಧ ಪರೋಕ್ಷ ಪ್ರತಿಭಟನೆ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನಯಾನ ಸಿಬ್ಬಂದಿಯ ಓಲೈಕೆಗಾಗಿ ಇದೀಗ ಟಾಟಾ ಗ್ರೂಪ್ ವೇತನ ಹೆಚ್ಚಳದ ಅಸ್ತ್ರ ಪ್ರಯೋಗಿಸಿದೆ. ಸಂಸ್ಥೆಯ ಪೈಲಟ್‌ಗಳಿಂದ ಹಿಡಿದು ಎಲ್ಲಾ ಸಿಬ್ಬಂದಿಗೆ ವೇತನ ಹೆಚ್ಚಳ ಮತ್ತು ವಾರ್ಷಿಕ ಫರ್ಫಾಮೆನ್ಸ್ ಬೋನಸ್ ನೀಡಲು ಮುಂದಾಗಿದೆ.
ಏರ್ ಇಂಡಿಯಾ ಅಧಿಕೃತ ಘೋಷಣೆಯ ಅನುಸಾರ ಪರಿಷ್ಕೃತ ವೇತನ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಸಿಬ್ಬಂದಿಯ ನಿಗದಿತ ವೇತನದ ಮೇಲೆ ಅವರ ಸ್ಥಾನದ ಆಧಾರದಂತೆ 5ರಿಂದ 15 ಸಾವಿರ ರೂವರೆಗೆ ವೇತನ ಹೆಚ್ಚಳವಾಗಲಿದೆ.
ಕಿರಿಯ ಅಧಿಕಾರಿಗಳಿಂದ ಹಿರಿಯ ಕಮಾಂಡರ್ ಹುದ್ದೆಗಳವರೆಗೆ ಅವರ ಹುದ್ದೆಯಾನುಸಾರ 42 ಸಾವಿರ ರೂ.ಯಿಂದ 1.8 ಲಕ್ಷ ರೂ.ವರೆಗೆ ವಾರ್ಷಿಕ ಬೋನಸ್ ನೀಡುವುದಾಗಿ ಸಂಸ್ಥೆ ತಿಳಿಸಿದೆ. ಮೇಲಾಧಿಕಾರಿಗಳು ಮತ್ತು ಕ್ಯಾಪ್ಟನ್ ವಾರ್ಷಿಕ 60 ಸಾವಿರ ರೂ ಬೋನಸ್ ಪಡೆದರೆ, ಕಮಾಂಡರ್ ಮತ್ತು ಸೀನಿಯರ್ ಕಮಾಂಡರ್ ಕ್ರಮವಾಗಿ 1.32 ಲಕ್ಷ ಮತ್ತು 1.80 ಲಕ್ಷ ರೂ ಬೋನಸ್ ಪಡೆಯಲಿದ್ದಾರೆ.
ಇದನ್ನೂ ಓದಿ: ಸಾಮೂಹಿಕ ಅನಾರೋಗ್ಯ ರಜೆ ಹಾಕಿದ ಸಿಬ್ಬಂದಿ; 70 ಏರ್ ಇಂಡಿಯಾ ವಿಮಾನ ಹಾರಾಟ ರದ್ದು