ಕೋಲ್ಕತ್ತಾ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2023-24ರ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರಕ್ಕೆ 2.11 ಲಕ್ಷ ಕೋಟಿ ರೂ.ಗಳ ಲಾಭಾಂಶ (ಡಿವಿಡೆಂಡ್) ಪಾವತಿಯನ್ನು ಘೋಷಿಸಿದೆ. ಈ ನಿರ್ಧಾರವು ವಿತ್ತೀಯ ಕೊರತೆ ಅಥವಾ ಸರ್ಕಾರದ ಆದಾಯ, ವೆಚ್ಚದ ನಡುವಿನ ಕೊರತೆಯನ್ನು ನಿರ್ವಹಿಸಲು ಕೇಂದ್ರ ಸರ್ಕಾರಕ್ಕೆ ಅನುಕೂಲ ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ.
2022-23ನೇ ಹಣಕಾಸು ವರ್ಷಕ್ಕೆ ಆರ್‌ಬಿಐ ಕೇಂದ್ರಕ್ಕೆ 87,416 ಕೋಟಿ ರೂ. ಲಾಭಾಂಶ ನೀಡಿತ್ತು. ಇದಕ್ಕೂ ಮೊದಲು 2018-19 ರಲ್ಲಿ 1.76 ಲಕ್ಷ ಕೋಟಿ ರೂ. ನೀಡಿತ್ತು. ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್‌ಬಿಐನ ಕೇಂದ್ರೀಯ ನಿರ್ದೇಶಕರ ಮಂಡಳಿಯ 608 ನೇ ಸಭೆಯಲ್ಲಿ ಲಾಭಾಂಶ ಪಾವತಿಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಆರ್‌ಬಿಐ ಲಾಭಾಂಶ ಪಾವತಿಯ ಹೆಚ್ಚಳಕ್ಕೆ ಕಾರಣವೇನು?: ಕೇಂದ್ರ ಸರ್ಕಾರಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದಾಖಲೆಯ ಲಾಭಾಂಶವು ಹೆಚ್ಚಾಗಿ ಕೇಂದ್ರ ಬ್ಯಾಂಕಿನ ವಿದೇಶಿ ವಿನಿಮಯ ಹಿಡುವಳಿ (ಫಾರೆಕ್ಸ್ ಹೋಲ್ಡಿಂಗ್) ಹೆಚ್ಚಿನ ಆದಾಯದಿಂದ ಬಂದಿರಬಹುದು. ಬಿಮಲ್ ಜಲನ್ ಸಮಿತಿಯ ಶಿಫಾರಸುಗಳ ಪ್ರಕಾರ 2024 ರ ಹಣಕಾಸು ವರ್ಷಕ್ಕೆ ಆರ್‌ಬಿಐನ ಲಾಭಾಂಶ ವರ್ಗಾವಣೆಯು ಆರ್ಥಿಕ ಬಂಡವಾಳ ಚೌಕಟ್ಟನ್ನು ಆಧರಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ವರದಿಯ ಪ್ರಕಾರ, ಸೆಂಟ್ರಲ್ ಬ್ಯಾಂಕ್‌ಗೆ ಹೆಚ್ಚುವರಿ ಆದಾಯವನ್ನು ಅದರ ಲಿಕ್ವಿಡಿಟಿ ಹೊಂದಾಣಿಕೆ ಸೌಲಭ್ಯದ ಕಾರ್ಯಾಚರಣೆಗಳು ಮತ್ತು ದೇಶೀಯ ಮತ್ತು ವಿದೇಶಿ ಸೆಕ್ಯುರಿಟಿಗಳ ಹಿಡುವಳಿಯಿಂದ ಬರುವ ಬಡ್ಡಿ ಆದಾಯದಿಂದ ನಿರ್ಧರಿಸಲಾಗುತ್ತದೆ. ದೈನಂದಿನ ಲಿಕ್ವಿಡಿಟಿ ಹೊಂದಾಣಿಕೆ ಸೌಲಭ್ಯದ ಅಡಿ ಬ್ಯಾಲೆನ್ಸ್‌ಗಳು ಆರ್‌ಬಿಐನ ಹಣಕಾಸು ವರ್ಷದಲ್ಲಿ ಬಹುಪಾಲು ಅಬ್ಸರ್ಡ್ ಮೋಡ್ನಲ್ಲಿತ್ತು ಮತ್ತು 365 ದಿನಗಳಲ್ಲಿ 259 ದಿನಗಳವರೆಗೆ ಅಬ್ಸರ್ಡ್ ಲಿಕ್ವಿಡಿಟಿ ಎಂದು ತೋರಿಸುತ್ತದೆ.
ಎಸ್‌ಬಿಐ ಪ್ರಕಾರ, ಆರ್‌ಬಿಐನ ಬ್ಯಾಲೆನ್ಸ್ ಶೀಟ್‌ನ ಒಟ್ಟಾರೆ ವಿಸ್ತರಣೆಗೆ ಚಿನ್ನದ ಬೆಲೆಯಲ್ಲಿನ ಹೆಚ್ಚಳವೂ ಕಾರಣವಾಗಿದೆ. ಕೇಂದ್ರ ಬ್ಯಾಂಕಿನ ದಾಖಲೆಯ ಲಾಭಾಂಶ ಪಾವತಿಯು 2024-25ರಲ್ಲಿ ಆರ್‌ಬಿಐ, ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳು ಮತ್ತು ಹಣಕಾಸೇತರ ಸಾರ್ವಜನಿಕ ವಲಯದ ಕಂಪನಿಗಳಿಂದ ಕೇಂದ್ರವು ನಿರೀಕ್ಷಿಸುತ್ತಿರುವ ಒಟ್ಟು ಲಾಭಾಂಶವಾದ 1.5 ಲಕ್ಷ ಕೋಟಿ ರೂ.ಗಿಂತ ಶೇಕಡಾ 40 ರಷ್ಟು ಹೆಚ್ಚಾಗಿದೆ ಎಂದು ಕಳೆದ ಫೆಬ್ರವರಿಯಲ್ಲಿ ಕೇಂದ್ರವು ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ತಿಳಿಸಿತ್ತು.
RBI ಲಾಭಾಂಶದ ಇತಿಹಾಸ
ಹಣಕಾಸು ವರ್ಷ | ಹಣ ರೂ ಕೋಟಿ ಗಳಲ್ಲಿ |
FY24 | 2,10,874 |
FY23 | 87,416 |
FY22 | 30,307 |
FY21 | 99,122 |
FY20 | 57,128 |
FY19 | 1,75,988 |
ಹೆಚ್ಚಿನ ಲಾಭಾಂಶವು ಹೊಸ ಸರ್ಕಾರಕ್ಕೆ ಸಹಾಯ ಮಾಡುತ್ತದೆ: ನಿರೀಕ್ಷೆಗಿಂತ ದೊಡ್ಡದಾದ ಲಾಭಾಂಶವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ನೀಡಿದೆ. ಮಾರ್ಚ್ 2025 (FY25) ಗೆ ಕೊನೆಗೊಳ್ಳುವ ಹಣಕಾಸಿನ ವರ್ಷದಲ್ಲಿ ಜಿಡಿಪಿ ಕೊರತೆಯ 5.1% ಗುರಿಯನ್ನು ಖಚಿತಪಡಿಸಿಕೊಳ್ಳಲು ಆರ್‌ಬಿಐ ನೀಡಿರುವ ಹಣ ಸಹಾಯ ಮಾಡುತ್ತದೆ ಮತ್ತು ಪ್ರಸ್ತುತ ಗುರಿಯನ್ನು ಮೀರಿ ಕೊರತೆಯನ್ನು ಕಡಿಮೆ ಮಾಡಲು ಬಳಸಬಹುದು ಫಿಚ್ ರೇಟಿಂಗ್ಸ್ ಹೇಳಿದೆ. 2026ರ ಹಣಕಾಸು ವರ್ಷದ ವೇಳೆಗೆ ವಿತ್ತೀಯ ಕೊರತೆಯನ್ನು ಕ್ರಮೇಣ ಜಿಡಿಪಿಯ ಶೇ.4.5ಕ್ಕೆ ಇಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಆರ್‌ಬಿಐ ಇತ್ತೀಚೆಗೆ 2024 ರ ಹಣಕಾಸು ವರ್ಷದಲ್ಲಿ ಜಿಡಿಪಿಯ 0.6% (2.1 ಟ್ರಿಲಿಯನ್ ರೂ.) ಗೆ ಸಮಾನವಾದ ದಾಖಲೆಯ ಹೆಚ್ಚಿನ ಲಾಭಾಂಶವನ್ನು ಸರ್ಕಾರಕ್ಕೆ ವರ್ಗಾಯಿಸುವುದಾಗಿ ಘೋಷಿಸಿತ್ತು. ಇದು ಫೆಬ್ರವರಿಯಿಂದ ಹಣಕಾಸು ವರ್ಷ 25 ರ ಬಜೆಟ್‌ನಲ್ಲಿ ನಿರೀಕ್ಷಿಸಲಾದ ಜಿಡಿಪಿಯ 0.3% ಕ್ಕಿಂತ ಹೆಚ್ಚಾಗಿದೆ. ಹೆಚ್ಚಿನ ಆರ್‌ಬಿಐನ ಲಾಭದ ಪ್ರಮುಖ ಮೂಲ ಎಂದರೆ ವಿದೇಶಿ ಸ್ವತ್ತುಗಳ ಮೇಲಿನ ಹೆಚ್ಚಿನ ಬಡ್ಡಿ ಆದಾಯವಾಗಿದೆ.
ಕೇಂದ್ರ ಬಜೆಟ್ ಮೇಲೆ ಪರಿಣಾಮ: ಚುನಾವಣೋತ್ತರ ಬಜೆಟ್‌ನಲ್ಲಿ, ಹೊಸ ಸರ್ಕಾರಕ್ಕೆ ಎರಡು ಪರ್ಯಾಯಗಳಿವೆ ಎಂದು ಫಿಚ್ ರೇಟಿಂಗ್ಸ್ ಹೇಳಿದೆ. ಅದರ ಒಂದು ಸರ್ಕಾರವು ಮೂಲ ಸೌಕರ್ಯಗಳ ಮೇಲಿನ ವೆಚ್ಚವನ್ನು ಹೆಚ್ಚಿಸಬಹುದು ಅಥವಾ ಜನಪ್ರಿಯ ಯೋಜನೆಗಳನ್ನು ಪರಿಚಯಿಸಬಹುದು.
ಇದನ್ನೂ ಓದಿ: ಲಾಭದಲ್ಲಿ ಷೇರು ಮಾರುಕಟ್ಟೆ: ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ - Stock Market