ನವದೆಹಲಿ: ಭಾರತೀಯ ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ವಿಮೆ (ಬಿಎಫ್ಎಸ್ಐ) ವಲಯದಲ್ಲಿ ಕೆಲಸ ಮಾಡುತ್ತಿರುವ ಪ್ರತಿ ನಾಲ್ಕರಲ್ಲಿ ಒಬ್ಬ ಮಹಿಳೆ ಲಿಂಗ ಅಸಮಾನತೆಯ ಸಂತ್ರಸ್ತೆಯಾಗಿದ್ದಾಗಿದ್ದಾರೆ. ಇವರು ಗುರುತಿಸುವಿಕೆ, ವೇತನ, ಕೆಲಸದ ಸಾಮರ್ಥ್ಯದಲ್ಲಿ ತಾರತಮ್ಯ ಹೊಂದಿದ್ದಾರೆ ಎಂಬ ಸಂಗತಿ ಗ್ರೇಟ್ ಪ್ಲೇಸ್ ಟು ವರ್ಕ್ ಇಂಡಿಯಾದ ವರದಿಯಲ್ಲಿ ಪ್ರಕಟವಾಗಿದೆ.
ಈ ಅಧ್ಯಯನಕ್ಕಾಗಿ, ಉದ್ಯೋಗ ಸ್ಥಳದಲ್ಲಿ ಮೌಲ್ಯಮಾಪನ ಮತ್ತು ಗುರುತಿಸಲ್ಪಟ್ಟ ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಬಿಎಫ್ಎಸ್ಐ ವಲಯದಲ್ಲಿನ 167 ಸಂಸ್ಥೆಗಳ 12 ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗಿಗಳ ಪ್ರತಿಕ್ರಿಯೆ ಸಂಗ್ರಹಿಸಿ ವಿಶ್ಲೇಷಿಸಲಾಗಿದೆ.
ಬಿಎಫ್ಎಸ್ಐ ವಲಯದಲ್ಲಿನ ಮಹಿಳಾ ಉದ್ಯೋಗಿಗಳು ಅವಕಾಶದ ಕೊರತೆ ಹೊಂದಿದ್ದು, ಇದು ಲಿಂಗ ಅಸಮಾನತೆಯನ್ನು ಸೂಚಿಸುತ್ತದೆ ಎಂದು ಅಧ್ಯಯನ ತೋರಿಸಿದೆ. ಉದ್ಯೋಗ ಸ್ಥಳದ ಗುಣಮಟ್ಟಕ್ಕೆ ಹೋಲಿಕೆ ಮಾಡಿದಾಗ ಪುರುಷರಿಗಿಂತ ಮಹಿಳೆಯರು ಕಡಿಮೆ ತೃಪ್ತಿ ಹೊಂದಿದ್ದಾರೆ.
ಜೆನ್ ಜೆಡ್ನ ಶೇ.21ರಷ್ಟು ಮತ್ತು 51ರಷ್ಟು ಮಿಲೆನ್ನಿಯಲ್ ಉದ್ಯೋಗಿಗಳು ತಮ್ಮ ಉದ್ಯೋಗದ ಪಾತ್ರ ಮತ್ತು ಅರ್ಥಪೂರ್ಣ ಕೆಲಸ ಹುಡುಕುವ ಬಯಕೆಯಿಂದ ತಮ್ಮ ಆದ್ಯತೆ ಮತ್ತು ನಿರೀಕ್ಷೆಗಳಲ್ಲಿ ಬದಲಾವಣೆ ತೋರಿಸಿದ್ದಾರೆ.
ವಿಶಿಷ್ಟ ಪ್ರಯೋಜನಗಳು ಮತ್ತು ಆರೋಗ್ಯಕರ ಲಾಭ-ಹಂಚಿಕೆಯ ಅಭ್ಯಾಸಗಳನ್ನು ನೀಡುವುದರ ಹೊರತಾಗಿಯೂ, ಬಿಎಫ್ಎಸ್ಐ ಕೆಲಸದ ಸ್ಥಳಗಳಲ್ಲಿ ಸಂಬಂಧಿಸಿದ ಪ್ರವೃತ್ತಿ ಹೊರಹೊಮ್ಮುತ್ತದೆ. ವಿಶೇಷವಾಗಿ ಫಿನ್‌ಟೆಕ್, ಆರೋಗ್ಯ ಮತ್ತು ಸಾಮಾನ್ಯ ವಿಮೆ ಮತ್ತು ಹೂಡಿಕೆಗಳಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಮಿಲೇನಿಯಂ ಮತ್ತು ಜೆನ್ ಜೆಡ್ ಮ್ಯಾನೇಜರ್‌ಗಳಲ್ಲಿ ನಂಬಿಕೆಯ ಕುಸಿತ ಮತ್ತು ಸಂಪರ್ಕ ಕಡಿತದ ಭಾವನೆಯೊಂದಿಗೆ ಉದ್ಯೋಗಿಗಳ ಭಾವನೆ ಕುಸಿದಿದೆ. ಹೆಚ್ಚು ಕಾಳಜಿಯುಳ್ಳ ಮತ್ತು ಪೂರಕ ವಾತಾವರಣಕ್ಕಾಗಿ ಅವರ ಆಕಾಂಕ್ಷೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಗ್ರೇಟ್ ಪ್ಲೇಸ್ ಟು ವರ್ಕ್ನ ಸಿಇಒ ಯಶಸ್ವಿನಿ ರಾಮಸ್ವಾಮಿ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಫಿನ್‌ಟೆಕ್ ಫಂಡಿಂಗ್ ಶೇ 59ರಷ್ಟು ಹೆಚ್ಚಳ: ಜಾಗತಿಕವಾಗಿ 3ನೇ ಸ್ಥಾನದಲ್ಲಿ ಭಾರತ