ETV Bharat / business

ಷೇರು ಮಾರುಕಟ್ಟೆ: ಸಾರ್ವಕಾಲಿಕ ದಾಖಲೆ ಮೀರಿದ ಸೆನ್ಸೆಕ್ಸ್​, ನಿಫ್ಟಿ - Today market - TODAY MARKET

ಸೆನ್ಸೆಕ್ಸ್​ ಮತ್ತು ನಿಫ್ಟಿ ಮಾರುಕಟ್ಟೆಗಳು ಇಂದು ಏರಿಕೆ ಗತಿಯಲ್ಲಿ ಸಾಗಿವೆ.

ಷೇರು ಮಾರುಕಟ್ಟೆ ಇಂದು
ಷೇರು ಮಾರುಕಟ್ಟೆ ಇಂದು
author img

By PTI

Published : Apr 8, 2024, 11:24 AM IST

ನವದೆಹಲಿ: ದೇಶೀಯ ಷೇರು ಮಾರುಕಟ್ಟೆಗಳು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರೀ ಏರಿಕೆ ದಾಖಲಿಸಿವೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 366 ಪಾಯಿಂಟ್​ಗಳ ಹೆಚ್ಚಳ ಕಂಡು ರ್ಸಾಕಾಲಿಕ ಗರಿಷ್ಠ ಮಟ್ಟವಾದ 74,555ಕ್ಕೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 22,624ಕ್ಕೆ ಏರಿ ಮೊದಲ ಬಾರಿಗೆ ಗರಿಷ್ಠ ಹೆಚ್ಚಳ ದಾಖಲಿಸಿತು.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿದೇಶಿ ಹೂಡಿಕೆಗಳು ಹೆಚ್ಚುತ್ತಿದ್ದು, ಪ್ರಮುಖ ಬಡ್ಡಿ ದರಗಳು ಬದಲಾಗದೆ ಇರುವುದು ಸೇರಿದಂತೆ ಸಕಾರಾತ್ಮಕ ವಹಿವಾಟು ನಡೆದ ಕಾರಣ ದೇಶೀಯ ಮಾರುಕಟ್ಟೆಗಳು ಪ್ರಗತಿಯತ್ತ ಸಾಗಿವೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ) ಹೇಳಿದೆ.

ಪ್ರಸ್ತುತ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 382 ಪಾಯಿಂಟ್​ಗಳ ಏರಿಕೆ ಕಂಡು 74,625ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿಯು ಪ್ರಸ್ತುತ 107 ಅಂಕಗಳ ಏರಿಕೆಯೊಂದಿಗೆ 22,620 ಅಂಕಗಳಿಗೆ ತಲುಪಿದೆ.

ಲಾಭ, ನಷ್ಟದಲ್ಲಿರುವ ಷೇರುಗಳು: ಪವರ್‌ಗ್ರಿಡ್, ರಿಲಯನ್ಸ್, ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಎನ್‌ಟಿಪಿಸಿ, ಮಾರುತಿ ಸುಜುಕಿ, ಇನ್ಫೋಸಿಸ್ ಲಾಭದಲ್ಲಿ ಮುಂದುವರಿದಿವೆ. ವಿಪ್ರೋ, ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಮೋಟಾರ್ಸ್, ಟೈಟಾನ್, ನೆಸ್ಲೆ ಇಂಡಿಯಾ, ಎಸ್‌ಬಿಐ, ಬಜಾಜ್ ಫೈನಾನ್ಸ್​​ನ ಷೇರುಗಳು ನಷ್ಟದ ಷೇರುಗಳು ತುಸು ನಷ್ಟಕ್ಕೀಡಾಗಿವೆ.

ಎಫ್‌ಐಐ ಹೂಡಿಕೆ: ಷೇರು ವಿನಿಮಯದ ಮಾಹಿತಿ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ 1659.27 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಏಷ್ಯನ್ ಮಾರುಕಟ್ಟೆಗಳಲ್ಲಿ ಸಿಯೋಲ್ ಮತ್ತು ಟೋಕಿಯೋ ಮಾರುಕಟ್ಟೆಗಳು ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ. ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿಯುತ್ತಲೇ ಇವೆ. ಶುಕ್ರವಾರದಂದು ಅಮೆರಿಕದ ಮಾರುಕಟ್ಟೆಗಳು ಗಳಿಕೆಯೊಂದಿಗೆ ಅಂತ್ಯಗೊಂಡಿದ್ದವು.

ರೂಪಾಯಿ ಮೌಲ್ಯ ಕುಸಿತ: ಇನ್ನೊಂದೆಡೆ ರೂಪಾಯಿ ಮೌಲ್ಯವು ಕುಸಿಯುತ್ತಲೇ ಇದೆ. ರೂಪಾಯಿ ಮೌಲ್ಯವು ಇಂದು(ಸೋಮವಾರ) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 4 ಪೈಸೆಗಳಷ್ಟು ಹೆಚ್ಚಾಗಿದೆ. ಪ್ರಸ್ತುತ ಡಾಲರ್ ಎದುರು ರೂಪಾಯಿ ವಿನಿಮಯ ದರ 83.27 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಶೇಕಡಾ 1.61 ರಷ್ಟು ಕಡಿಮೆಯಾಗಿದೆ. ಪ್ರಸ್ತುತ, ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 89.71 ಡಾಲರ್ ಇದೆ.

ಗುರುವಾರ (ಏಪ್ರಿಲ್ 11) ರಂಜಾನ್‌ ರಜಾದಿನವಾದ ಕಾರಣ, ಈ ವಾರ ನಾಲ್ಕು ದಿನಗಳವರೆಗೆ ಮಾರುಕಟ್ಟೆಗಳು ತೆರೆದಿರುತ್ತವೆ. ಇರಾನ್-ಇಸ್ರೇಲ್ ನಡುವೆ ಉದ್ವಿಗ್ನತೆ ಉಂಟಾಗಿರುವುದು ಕಚ್ಚಾ ತೈಲ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: ಸ್ವಂತ ಬಿಸ್ನೆಸ್‌ ಮಾಡಲು ಬಯಸುತ್ತಿದ್ದೀರಾ?: ನಿಮಗೆ ಸೂಕ್ತವಾದ ಲೋನ್‌ಗಳ ಬಗ್ಗೆ ತಿಳಿಯಿರಿ - Business Loans

ETV Bharat Logo

Copyright © 2025 Ushodaya Enterprises Pvt. Ltd., All Rights Reserved.