ETV Bharat / business

ಈ ಸಲಹೆಗಳನ್ನು ಪಾಲಿಸಿದರೆ ಉದ್ಯೋಗಿಗಳಿಗೆ ಬಡ್ತಿ ಗ್ಯಾರಂಟಿ: ಏನಿದು ಸತ್ಯ ನಾಡೆಲ್ಲ ಜೀವನ ಪಾಠ? - Satya Nadella Life Lessons - SATYA NADELLA LIFE LESSONS

ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡು 10 ವರ್ಷಗಳಾಗಿವೆ. ಈ ದಶಕದಲ್ಲಿ ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್ ಅನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ್ದಾರೆ. ನಾಡೆಲ್ಲಾ ತಮ್ಮ ಯಶಸ್ಸಿನ ಗುಟ್ಟನ್ನು ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಅವರು ಹೇಳಿರುವ ಈ ಸಲಹೆಗಳನ್ನು ಪಾಲಿಸಿದರೆ ಸಾಕು ಉದ್ಯೋಗಿಗಳಿಗೆ ಬಡ್ತಿ ಗ್ಯಾರಂಟಿ!

Satya Nadella Life Lessons
ಈ ಸಲಹೆಗಳನ್ನು ಪಾಲಿಸಿದರೆ ಉದ್ಯೋಗಿಗಳಿಗೆ ಬಡ್ತಿ ಗ್ಯಾರಂಟಿ: ಏನಿದು ಸತ್ಯ ನಾಡೆಲ್ಲ ಜೀವನ ಪಾಠ (Microsoft CEO Satya Nadella (Getty Images))
author img

By ETV Bharat Karnataka Team

Published : Jun 10, 2024, 7:01 AM IST

ಸತ್ಯ ನಾಡೆಲ್ಲಾ ಇದು ವಿಶ್ವಕ್ಕೆ ಚಿರಪರಿಚಿತ ಹೆಸರು. ಭಾರತದಲ್ಲಿ ಹುಟ್ಟಿ ಬೆಳೆದ ಅವರು ಈಗ ಜಾಗತಿಕ ದೈತ್ಯ ಮೈಕ್ರೋಸಾಫ್ಟ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಇಒ. ವಿಶ್ವದಲ್ಲೇ ಅತ್ಯಧಿಕ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಟೆಕ್ ದೈತ್ಯ ಮೈಕ್ರೋಸಾಫ್ಟ್ ಪ್ರಸ್ತುತ ಸತ್ಯ ಅವರ ನಾಯಕತ್ವದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಸತ್ಯ ನಾಡೆಲ್ಲಾ ಇತ್ತೀಚೆಗೆ ಮೈಕ್ರೋಸಾಫ್ಟ್ ಸಿಇಒ ಆಗಿ 10 ವರ್ಷಗಳನ್ನು ಪೂರೈಸಿದ್ದಾರೆ. ಈ ಹತ್ತು ವರ್ಷಗಳಲ್ಲಿ ಮೈಕ್ರೋಸಾಫ್ಟ್ ಅನ್ನು ಅವರು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಆದರೆ ಸತ್ಯ ನಾಡೆಲ್ಲಾ ಅವರ ಯಶಸ್ಸಿನ ಹಿಂದೆ ಹಲವು ಕಾರಣಗಳಿವೆ. ಅವರೇ ಹಲವು ಸಂದರ್ಭಗಳಲ್ಲಿ ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

'ಹೆಚ್ಚು ಆಲಿಸಿ - ಕಡಿಮೆ ಮಾತನಾಡಿ' ನಾವು ಯಾವುದೇ ಕೆಲಸದಲ್ಲಿ ಉತ್ಕೃಷ್ಟರಾಗಲು ಬಯಸುತ್ತೇವೆ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ 2015 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಜೊತೆಗೆ ಸಮಯ ಬಂದಾಗ 'ನಿರ್ಣಾಯಕವಾಗಿರಿ' ಎಂದು ಸಲಹೆ ನೀಡಿದ್ದಾರೆ. ನಿಮಗೆ ಬೇಕಾದುದನ್ನು ಮಾಡಲು ನೀವು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದು ಸತ್ಯ ಅವರ ವಿಶ್ವಾಸದ ಹಾಗೂ ಖಚಿತ ಸಲಹೆಯಾಗಿದೆ.

'ಸಣ್ಣ ಸಣ್ಣ ವಿಷಯಗಳೂ ಯಾವಾಗಲೂ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಆದಾಗ್ಯೂ, ಅವುಗಳನ್ನು ನಮ್ಮ ನಿಯಂತ್ರಣದಲ್ಲಿಡಲು ನಾವು ಸಾಕಷ್ಟು ಶ್ರಮ ಹಾಕಬೇಕಾಗುವುದು ಅಗತ್ಯವಾಗಿದೆ‘ ಎಂದು ಸತ್ಯ ನಾಡೆಲ್ಲಾ 2019 ರಲ್ಲಿ ಚಿಕಾಗೋ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಪ್ರತಿಯೊಬ್ಬ ಉದ್ಯೋಗಿಯು ಎಲ್ಲ ವಿಷಯಗಳಲ್ಲಿ ತಮ್ಮ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಬೇಕು. ಕೌಶಲಗಳನ್ನು ಹೆಚ್ಚಿಸಿಕೊಂಡರೆ ಅವರ ಕಾರ್ಯ ಸಾಮರ್ಥ್ಯ ಹೆಚ್ಚುತ್ತದೆ ಎಂಬುದು ಸತ್ಯ ನಾಡೆಲ್ಲಾ ಅವರ ಖಚಿತ ಮಾತಾಗಿದೆ.

ನಾಯಕತ್ವ ಎನ್ನುವುದು ಸವಲತ್ತು ಅಲ್ಲ, ನೌಕರರ ಪರಿಕಲ್ಪನೆಗಳು, ಆಲೋಚನೆಗಳು ಮತ್ತು ಸಮಸ್ಯೆಗಳನ್ನು ಸಂಸ್ಥೆಯ ಮುಖಂಡರು ತಿಳಿದುಕೊಳ್ಳಬೇಕಾಗಿರುವುದು ತೀರಾ ಅಗತ್ಯಗಳಲ್ಲಿ ಒಂದು ಸತ್ಯ ನಾಡೆಲ್ಲಾ ಪ್ರತಿಪಾದಿಸಿದ್ದಾರೆ. ಸಂಸ್ಥೆಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಿಮ್ಮ ಉದ್ಯೋಗಿಗಳನ್ನು ನೀವು ನಂಬಿದರೆ, ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದ್ದರು.

100 ಪ್ರತಿಶತದಷ್ಟು ಪ್ರಯತ್ನದ ಅಗತ್ಯವಿದೆ: "ನಾನು 30 ವರ್ಷಗಳ ಹಿಂದೆ ಮೈಕ್ರೋಸಾಫ್ಟ್‌ಗೆ ಸೇರಿದೆ. ನಂತರ ನಾನು ಈ ಕಂಪನಿಗೆ ಸಿಇಒ ಆಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಕಂಪನಿಯು ನನಗೆ ವಹಿಸಿದ ಯಾವುದೇ ಕೆಲಸವನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸುವತ್ತ ಹೆಚ್ಚಿನ ಗಮನ ಹರಿಸಿದೆ. ನಂತರ ನಾನು ಸಿಇಒ ಸ್ಥಾನಕ್ಕೆ ಹಂತ ಹಂತವಾಗಿ ಏರಿದೆ. ಹಾಗೆಯೇ ಎಲ್ಲ ಉದ್ಯೋಗಿಗಳು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಆಗ ಮಾತ್ರ ಉನ್ನತ ಸ್ಥಾನಗಳಿಗೆ ಏರಲು ಸಾಧ್ಯ ಎಂದು ಮೈಕ್ರೋಸಾಪ್ಟ್​ ಸಿಇಒ ಸತ್ಯ ನಾಡೆಲ್ಲಾ ಹೇಳಿದ್ದಾರೆ.

ಮೈಕ್ರೋಸಾಫ್ಟ್‌ನ CEO ಆಗಿ, ಸತ್ಯ ನಾಡೆಲ್ಲಾ ಕಳೆದ ಹತ್ತು ವರ್ಷಗಳಲ್ಲಿ ನವೀನ ಆವಿಷ್ಕಾರಗಳನ್ನು ಪ್ರಾರಂಭಿಸಿದ್ದಾರೆ. ಮೈಕ್ರೋಸಾಫ್ಟ್ ಬಿಂಗ್ ಮತ್ತು ಗೇಮಿಂಗ್ ಸ್ಟೋರ್ ಅಪ್ಲಿಕೇಶನ್ 'ಎಕ್ಸ್ ಬಾಕ್ಸ್ ಲೈವ್' ಅಭಿವೃದ್ಧಿಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಇದನ್ನು ಓದಿ: 2023-24ರಲ್ಲಿ 1 ಮಿಲಿಯನ್ ಟನ್ ಸರಕು ಸಾಗಿಸಿದ ಅದಾನಿ ಏರ್​ಪೋರ್ಟ್ಸ್​: ಶೇ 7ರಷ್ಟು ಬೆಳವಣಿಗೆ - Adani Airports cargo shipment

ಕಳೆದ ವಾರ $97 ಮಿಲಿಯನ್ ಫಂಡಿಂಗ್ ಸಂಗ್ರಹಿಸಿದ ಭಾರತೀಯ ಸ್ಟಾರ್ಟ್​ಅಪ್​ಗಳು - STARTUPS IN INDIA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.