ನವದೆಹಲಿ: ಮುಂದಿನ ದಿನಗಳಲ್ಲಿ 50 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಸ್ಥಿರಾಸ್ತಿ ಮಾರಾಟದ ಮೇಲೆ ಶೇಕಡಾ 1ರಷ್ಟು ಟಿಡಿಎಸ್ ಅನ್ವಯವಾಗಲಿದೆ. ಹೊಸ ನಿಯಮದ ವ್ಯಾಪ್ತಿಯಲ್ಲಿ ಖರೀದಿದಾರರು ಮತ್ತು ಮಾರಾಟಗಾರರು ಬರುತ್ತಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.
"ಒಂದು ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಒಂದಕ್ಕಿಂತ ಹೆಚ್ಚು ವರ್ಗಾವಣೆದಾರರಿದ್ದಲ್ಲಿ, ಸ್ಥಿರಾಸ್ತಿಯ ವರ್ಗಾವಣೆಗೆ ಅಂತಹ ಪರಿಗಣನೆಯ ಖರೀದಿರಾರರು ಮತ್ತು ಮಾರಾಟಗಾರರು ನಿಗದಿಪಡಿಸಿದ ಮೊತ್ತ ಪಾವತಿಸಬೇಕಾಗುತ್ತದೆ'' ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕಾನೂನಿನ ಪ್ರಕಾರ, ಖರೀದಿದಾರ/ವರ್ಗಾವಣೆದಾರರಿಗೆ ಸ್ಥಿರಾಸ್ತಿಯನ್ನು ವರ್ಗಾಯಿಸಲು ಮಾರಾಟಗಾರ ಅಥವಾ ವರ್ಗಾವಣೆದಾರರಿಗೆ ಪಾವತಿಸಿದ ಮೊತ್ತದ ಮೇಲೆ ಮೂಲದಲ್ಲಿ ತೆರಿಗೆ ಕಡಿತಗೊಳಿಸಲು ವರ್ಗಾವಣೆದಾರ (ಖರೀದಿದಾರ) ಜವಾಬ್ದಾರನಾಗಿರುತ್ತಾನೆ. ಸೆಕ್ಷನ್ 194-IA ನ ಉಪ-ವಿಭಾಗ (1) ಅಡಿಯಲ್ಲಿ ಯಾವುದೇ ಸ್ಥಿರಾಸ್ತಿಯ ವರ್ಗಾವಣೆಯನ್ನು ಪರಿಗಣಿಸಲಾಗಿದೆ.
50 ಲಕ್ಷ ರೂ.ಗಿಂತ ಕಡಿಮೆ ಇರುವ ಸ್ಥಿರಾಸ್ತಿಯ ವರ್ಗಾವಣೆ ಮತ್ತು ಅಂತಹ ಆಸ್ತಿಯ ಸ್ಟಾಂಪ್ ಡ್ಯೂಟಿ ಮೌಲ್ಯದ ಪರಿಗಣನೆಯಲ್ಲಿ ತೆರಿಗೆ ಕಡಿತ ಮಾಡಬಾರದು ಎಂದು ಉಪ-ವಿಭಾಗ (2)ದಲ್ಲಿ ತಿಳಿಸಲಾಗಿದೆ. ಕೆಲವು ತೆರಿಗೆದಾರರು ಪಾವತಿಸುವ ಅಥವಾ ಕ್ರೆಡಿಟ್ ಮಾಡಲಾದ ಪರಿಗಣನೆಯು ಸ್ಥಿರಾಸ್ತಿಗೆ ಪಾವತಿಸಿದ ಒಟ್ಟು ಪರಿಗಣನೆಯ ಬದಲಿಗೆ ಪ್ರತಿಯೊಬ್ಬ ಖರೀದಿದಾರನ ಪಾವತಿಯನ್ನು ಉಲ್ಲೇಖಿಸುತ್ತದೆ. ಆದ್ದರಿಂದ ಖರೀದಿದಾರರು 50 ಲಕ್ಷಕ್ಕಿಂತ ಕಡಿಮೆ ಪಾವತಿಸುತ್ತಿದ್ದರೆ, ಸ್ಥಿರಾಸ್ತಿಯ ಮೌಲ್ಯ ಮತ್ತು ಸ್ಟ್ಯಾಂಪ್ ಡ್ಯೂಟಿ ಮೌಲ್ಯ 50 ಲಕ್ಷ ರೂ.ಗಿಂತ ಹೆಚ್ಚಿದ್ದರೂ ಸಹ ಯಾವುದೇ ತೆರಿಗೆ ಕಡಿತಗೊಳಿಸಲಾಗುವುದಿಲ್ಲ" ಎಂದು ಸಚಿವೆ ಮಾಹಿತಿ ನೀಡಿದರು.
''ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಒಂದಕ್ಕಿಂತ ಹೆಚ್ಚು ವರ್ಗಾವಣೆದಾರರು ಇದ್ದಲ್ಲಿ, ಅಂತಹ ಪರಿಗಣನೆಯು ಪಾವತಿಸಿದ ಅಥವಾ ಪಾವತಿಸಬೇಕಾದ ಮೊತ್ತದ ಒಟ್ಟು ಮೊತ್ತವಾಗಿದೆ ಎಂದು ಸ್ಪಷ್ಟಪಡಿಸಲು ಸೆಕ್ಷನ್ 194-IA ನ ಉಪ-ವಿಭಾಗ (2) ಅನ್ನು ತಿದ್ದುಪಡಿ ಮಾಡಲು ಸರ್ಕಾರ ಪ್ರಸ್ತಾಪಿಸಿದೆ. ಈ ತಿದ್ದುಪಡಿಗಳು ಅಕ್ಟೋಬರ್ 1, 2024ರಿಂದ ಜಾರಿಗೆ ಬರುತ್ತವೆ'' ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಹೊಸ ಪಿಂಚಣಿ ಯೋಜನೆ ಸಂಬಂಧಿತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುತ್ತೇವೆ: ನಿರ್ಮಲಾ ಸೀತಾರಾಮನ್ - Union Budget 2024