ಬೆಂಗಳೂರು: ಇವಿ ದ್ವಿಚಕ್ರ ವಾಹನದಲ್ಲಿ ಮುಂಚೂಣಿಯಲ್ಲಿರುವ ಓಲಾ ಎಲೆಕ್ಟ್ರಿಕ್ ಕಂಪನಿ ಇದೀಗ ಎಲೆಕ್ಟ್ರಿಕ್ ಮೋಟರ್ಸೈಕಲ್ ಪರಿಚಯಿಸಿದೆ. ಈ ಮೋಟರ್ ಸೈಕಲ್ 2026ರ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆಗೆ ಬರಲಿದೆ.
ರೋಡ್ಸ್ಟರ್ ಸರಣಿಯಲ್ಲಿ ಈ ಮೋಟರ್ ಸೈಕಲ್‌ಗಳು ಹೊರಬರುತ್ತಿವೆ. ರೋಡ್ಸ್ಟರ್, ರೋಡ್ಸ್ಟರ್ ಎಕ್ಸ್ ಮತ್ತು ರೋಡ್ಸ್ಟರ್ ಪ್ರೊಗಳನ್ನು ಕಂಪೆನಿ ಪರಿಚಯಿಸಿದೆ. ಇವುಗಳ ಬೆಲೆ ಕ್ರಮವಾಗಿ 74,999, 1,04,999 ಹಾಗೂ 1,99,999 ರೂ.ಗಳು.
ಇದರ ಜೊತೆಗೆ, ಸ್ಪೋರ್ಟ್ಸ್ಟರ್ ಮತ್ತು ಆರೋಹೆಡ್ ಅನ್ನು ಮುಂಬರುವ ದಿನದಲ್ಲಿ ಪರಿಚಯಿಸಲು ನಿರ್ಧರಿಸಲಾಗಿದೆ. ತಮ್ಮದೇ ಫ್ಯಾಕ್ಟರಿಯಲ್ಲಿ ಉತ್ಪಾದಿಸಿದ ಬ್ಯಾಟರಿಗಳನ್ನು ಇವು ಹೊಂದಿರುವುದು ವಿಶೇಷ.
ಓಲಾದ ಎಲೆಕ್ಟ್ರಿಕ್ ಅಧ್ಯಕ್ಷರ ಮಾತು: "ಭಾರತದಲ್ಲಿ ಇಂದು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮೋಟರ್ ಸೈಕಲ್‌ಗಳು ಮೂರನೇ ಎರಡರಷ್ಟಿವೆ. ಇದೀಗ ಓಲಾ ಕೂಡ ಮೋಟರ್ಸೈಕಲ್ ಮಾರುಕಟ್ಟೆ ಪ್ರವೇಶಕ್ಕೆ ಸಜ್ಜಾಗಿದೆ. ನಮ್ಮ ಉದ್ದೇಶ ಓಲಾ ಗ್ರಾಹಕರಿಗೆ ಕೈಗೆಟುಕುವ ದರ, ಸಾಮರ್ಥ್ಯದಾಯಕ ವಾಹನವನ್ನು ನೀಡುವುದು. ನಾವು ಮುಂದಿನ ಪೀಳಿಗೆಯ ಬ್ಯಾಟರಿ ತಂತ್ರಜ್ಞಾನವನ್ನು 4680 ಸೆಲ್ ಜೊತೆಗೆ ಅಭಿವೃದ್ಧಿ ಮಾಡುತ್ತಿದ್ದೇವೆ. ಈ ಸೆಲ್ಗಳನ್ನು ಸದ್ಯ ಓಲಾ ಗಿಗಾ ಫ್ಯಾಕ್ಟರಿಯಲ್ಲಿ ಪ್ರಯೋಗ ನಡೆಸಲಾಗುತ್ತಿದೆ. ದೇಶೀಯವಾಗಿ ಅಭಿವೃದ್ಧಿ ಮಾಡಿದ ಭಾರತ್ 4680 ಸೆಲ್ ಮತ್ತು ಬ್ಯಾಟರಿ ಪ್ಯಾಕ್ ಅನ್ನು ಸಂಸ್ಥೆ ಹೊರತರಲಿದೆ" ಎಂದು ಓಲಾದ ಎಲೆಕ್ಟ್ರಿಕ್ನ ಎಂಡಿ ಹಾಗೂ ಅಧ್ಯಕ್ಷ ಭವಿಶ್ ಅಗರ್ವಾಲ್ ತಿಳಿಸಿದರು.
ವಿಶೇಷತೆಗಳೇನು?: ರೋಡ್ಸ್ಟರ್ ಎಕ್ಸ್ ವೇಗದ ಎಲೆಕ್ಟ್ರಿಕ್ ಮೋಟರ್ಸೈಕಲ್ ಆಗಿದ್ದು, ಇವು ಬಜೆಟ್‌ಸ್ನೇಹಿಯಾಗಿದೆ. ಇದರ ಆರಂಭಿಕದ ದರದಲ್ಲಿ 2.5 ಕಿ.ವ್ಯಾ ಬ್ಯಾಟರಿ ಬೈಕ್ ದರ 74,999 ಆಗಿದ್ದು, ಒಂದೇ ಚಾರ್ಜಿನಲ್ಲಿ 200 ಕಿ.ಮೀ ಸಾಗಬಹುದು. ಮೋಟರ್ಸೈಕಲ್ನ ಗರಿಷ್ಟ ವೇಗ ಗಂಟೆಗೆ 124 ಕಿ.ಮೀ ಆಗಿದ್ದು, 2.8 ಸೆಕೆಂಡ್‌ನಲ್ಲಿ ಗಂಟೆಗೆ 0-40ಕೆಡಬ್ಲೂಎಚ್ ವೇಗ ಹೊಂದಿದೆ. ಇದು 18 ಇಂಚ್ನ ಅಲೊಯ್ ಚಕ್ರ ಮತ್ತು 4.3 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ. ಮಧ್ಯಮ ಕ್ರಮಾಂಕದ ಮೋಟರ್ಸೈಕಲ್ 2.5ಕೆ ವ್ಯಾಟ್ ಎಚ್ ದರ 1, 04,999 ಆಗಿದ್ದು ರೋಡ್ಸ್ಟರ್ ಪ್ರೊ 8 ಕಿವ್ಯಾಟ್ ಬ್ಯಾಟರಿಯೊಂದಿಗೆ 1,99,999 ಲಭ್ಯವಾಗಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.(ಐಎಎನ್ಎಸ್)
ಇದನ್ನೂ ಓದಿ: ಓಲಾ ಎಲೆಕ್ಟ್ರಿಕ್ ಬೈಕ್ ಬೆಲೆಯಲ್ಲಿ ಭಾರಿ ಇಳಿಕೆ: S1X ಸ್ಕೂಟರ್ ಈ ಬೆಲೆಯಲ್ಲಿ ಲಭ್ಯ